Asianet Suvarna News Asianet Suvarna News

T20 World Cup: No Ball ನಲ್ಲಿ ಕೆ.ಎಲ್ ರಾಹುಲ್‌ ಔಟ್‌?

* ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ದ ಭಾರತಕ್ಕೆ ಸೋಲು

* ಅನುಮಾನ ಹುಟ್ಟುಹಾಕಿದ ಕೆ.ಎಲ್‌ ರಾಹುಲ್ ಔಟ್‌ ಆದ ಕ್ಷಣ

* ಅಂಪೈರ್ ಮೇಲೆ ಆಕ್ರೋಶ ಹೊರಹಾಕಿದ ನೆಟ್ಟಿಗರು

ICC T20 World Cup Cricket Fans disappointed over Umpire as KL Rahul Given Out vs Pakistan on a No Ball kvn
Author
Bengaluru, First Published Oct 25, 2021, 1:59 PM IST

ದುಬೈ(ಅ.25): ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಕ್ರಿಕೆಟ್ ತಂಡವು (Indian Cricket Team) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ ಶರಣಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಪಾಕಿಸ್ತಾನ ತಂಡವು ವಿರಾಟ್ ಕೊಹ್ಲಿ (Virat Kohli) ಪಡೆ ಎದುರು 10 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಟಿ20 ವಿಶ್ವಕಪ್‌ನಲ್ಲಿ (ICC T20 World Cup) ಶುಭಾರಂಭ ಮಾಡಿದೆ. ಆದರೆ ಈ ಪಂದ್ಯದಲ್ಲಿ ಅಂಪೈರ್ ಪ್ರಮಾದ ಮಾಡಿದರೇ ಎನ್ನುವ ಅನುಮಾನ ಕಾಡಲಾರಂಭಿಸಿದೆ.

ಹೌದು, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್‌ ಕೆ.ಎಲ್‌.ರಾಹುಲ್‌ (KL Rahul) ಔಟ್‌ ಆದ ಎಸೆತ ಈಗ ವಿವಾದಕ್ಕೆ ಕಾರಣವಾಗಿದೆ. ಶಾಹೀನ್‌ ಅಫ್ರಿದಿ (Shaheen Shah Afridi) ಎಸೆದ ಇನ್ನಿಂಗ್ಸ್‌ನ 3ನೇ ಓವರ್‌ನಲ್ಲಿ ಮೊದಲ ಎಸೆತದಲ್ಲಿ ರಾಹುಲ್‌ ಕ್ಲೀನ್‌ ಬೌಲ್ಡ್‌ ಆದರು. ಆದರೆ ಶಾಹೀನ್‌ರ ಈ ಎಸೆತ ನೋ ಬಾಲ್‌ ಎಂದು ಹಲವರು ಫೋಟೋ ಸಹಿತ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ. ಪಂದ್ಯದ ವೇಳೆ ಅಂಪೈರ್ ನಿದ್ರೆ ಮಾಡುತ್ತಿದ್ದರೇ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಪಾಕ್‌ ಪತ್ರಕರ್ತನ ಪ್ರಶ್ನೆಗೆ ಕೊಹ್ಲಿ ಗರಂ, ರೋಹಿತ್ ಶರ್ಮಾರನ್ನು ಹೊರಗಾಗ್ಬೇಕಾ ಅನ್ನೋದಾ?

ಶಾಹೀನ್‌ರ ಕಾಲು ಕ್ರೀಸ್‌ನಿಂದ ಹೊರಗಿದೆ ಎಂದು ಹಲವರ ವಾದಿಸಿದ್ದಾರೆ. ಪ್ರತಿ ಎಸೆತವನ್ನು 3ನೇ ಅಂಪೈರ್‌ ಗಮನಿಸಲಿದ್ದು, ನೋಬಾಲ್‌ ಆಗಿದ್ದಲ್ಲಿ ಮೈದಾನದ ಅಂಪೈರ್‌ಗೆ ತಿಳಿಸುತ್ತಾರೆ. ಆದರೆ ರಾಹುಲ್‌ ಔಟಾದಾಗ ನೋಬಾಲ್‌ ಆಗಿದ್ದನ್ನು ಯಾವ ಅಂಪೈರ್‌ ಕೂಡ ಗಮನಿಸಿಲ್ಲ ಎಂದು ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

8 ಎಸೆತಗಳನ್ನು ಎದುರಿಸಿದ್ದ ಕೆ.ಎಲ್. ರಾಹುಲ್‌, ಕೇವಲ 3 ರನ್‌ ಗಳಿಸಿ ಶಾಹೀನ್ ಅಫ್ರಿದಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದ್ದರು. ಮತ್ತೋರ್ವ ಆರಂಭಿಕ ಬ್ಯಾಟರ್‌ ರೋಹಿತ್ ಶರ್ಮಾ (Rohit Sharma) ರನ್ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿದ್ದು ಟೀಂ ಇಂಡಿಯಾಗೆ ಆರಂಭಿಕ ಹಿನ್ನಡೆಯಾಗಿ ಪರಿಣಮಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 151 ರನ್‌ ಬಾರಿಸಿತ್ತು. ನಾಯಕ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ (Rishabh Pant) ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೇ ಗೆಲುವಿನ ನಗೆ ಬೀರಿತು. ವಿಕೆಟ್ ಕೀಪರ್ ಬ್ಯಾಟರ್‌ ಮೊಹಮ್ಮದ್ ರಿಜ್ವಾನ್‌ ಅಜೇಯ 79 ರನ್‌ ಬಾರಿಸಿದರೆ, ನಾಯಕ ಬಾಬರ್ ಅಜಂ (Babar Azam) ಅಜೇಯ 68 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಪಾಕ್‌ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಔಟಾದ ಕೊಹ್ಲಿ!

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ ಪಾಕಿಸ್ತಾನ ವಿರುದ್ಧ ಮೊದಲ ಬಾರಿಗೆ ಔಟಾದರು. 2012ರಲ್ಲಿ ಔಟಾಗದೆ 78 ರನ್‌ ಗಳಿಸಿದ್ದ ವಿರಾಟ್‌ 2014ರಲ್ಲಿ ಔಟಾಗದೆ 36, 2016ರಲ್ಲಿ ಔಟಾಗದೆ 55 ರನ್‌ ಗಳಿಸಿ ಭಾರತದ ಗೆಲುವಿಗೆ ನೆರವಾಗಿದ್ದರು. ಭಾನುವಾರವೂ ಅದ್ಭುತ ಇನ್ನಿಂಗ್ಸ್‌ ಆಡಿದ ಕೊಹ್ಲಿ, 49 ಎಸೆತಗಳಲ್ಲಿ 57 ರನ್‌ ಗಳಿಸಿದರು. ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ಇದು 3ನೇ ಅರ್ಧಶತಕ. ಅಂತಾರಾಷ್ಟ್ರೀಯ ಟಿ20ಯಲ್ಲಿ ಇದು ಅವರ 29ನೇ ಅರ್ಧಶತಕ. ಕೊಹ್ಲಿ, ಪಾಕ್‌ ವಿರುದ್ಧ 4 ಪಂದ್ಯಗಳಲ್ಲಿ 226 ರನ್‌ ಕಲೆಹಾಕಿದ್ದಾರೆ.

Follow Us:
Download App:
  • android
  • ios