Asianet Suvarna News Asianet Suvarna News

T20 World Cup ಸೂಪರ್‌ 12 ಸುತ್ತಿಗೇರಲು ಲಂಕಾ, ಐರ್ಲೆಂಡ್‌ ಕಾತರ

* ಪ್ರಧಾನ ಸುತ್ತಿಗೇರಲು ತುದಿಗಾಲಿನಲ್ಲಿ ನಿಂತ ಲಂಕಾ, ಐರ್ಲೆಂಡ್

* ಅಬುಧಾಬಿಯಲ್ಲಿಂದು ಲಂಕಾ-ಐರ್ಲೆಂಡ್ ಕ್ರಿಕೆಟ್ ತಂಡಗಳು ಮುಖಾಮುಖಿ

* ವಿಜೇತ ತಂಡ ಸೂಪರ್ 12 ಹಂತಕ್ಕೇರುವುದು ಬಹುತೇಕ ಖಚಿತ

T20 World Cup Sri Lanka and Ireland one step away from Super 12 Stage kvn
Author
Bengaluru, First Published Oct 20, 2021, 12:08 PM IST

ಅಬುಧಾಬಿ(ಅ.20) : ಮಾಜಿ ಚಾಂಪಿಯನ್‌ ಶ್ರೀಲಂಕಾ ಐಸಿಸಿ ಟಿ20 ವಿಶ್ವಕಪ್‌ನ (ICC T20 World Cup) ಅರ್ಹತಾ ಸುತ್ತಿನ (Qualifier Match) ಪಂದ್ಯದಲ್ಲಿ ಬುಧವಾರ ಐರ್ಲೆಂಡ್‌ ವಿರುದ್ಧ ಸೆಣಸಲಿದೆ. ಎರಡೂ ತಂಡಗಳು ಮೊದಲ ಪಂದ್ಯದಲ್ಲಿ ಗೆದ್ದಿದ್ದು, ಮತ್ತೊಂದು ಗೆಲುವು ಸೂಪರ್‌-12 ಹಂತಕ್ಕೆ ಪ್ರವೇಶವನ್ನು ಬಹುತೇಕ ಖಚಿತಪಡಿಸಲಿದೆ.

ಹೀಗಾಗಿ, ಶ್ರೀಲಂಕಾ ಕ್ರಿಕೆಟ್ ತಂಡ (Sri Lanka Cricket Team) ಹಾಗೂ ಐರ್ಲೆಂಡ್‌ ಕ್ರಿಕೆಟ್ ತಂಡ (Ireland Cricket Team) ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ. ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಲಂಕಾ ಬೌಲರ್‌ಗಳು ಸಂಘಟಿತ ದಾಳಿ ನಡೆಸಿದ್ದರು. ಐರ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಎದುರು ಮತ್ತೊಮ್ಮೆ ಉತ್ತಮ ಬೌಲಿಂಗ್‌ ಪ್ರದರ್ಶನ ತೋರಬೇಕಿದೆ. ಲಂಕಾದ ಯುವ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಕಲೆಹಾಕುವ ಸಾಮರ್ಥ್ಯ ಹೊಂದಿದ್ದು, ಐರ್ಲೆಂಡ್‌ ಬೌಲರ್‌ಗಳ ಮುಂದೆಯೂ ದೊಡ್ಡ ಸವಾಲಿದೆ.

T20 World Cup: ಪಾಕ್‌ ವಿರುದ್ಧದ ಪಂದ್ಯ ರದ್ದು ಮಾಡಲು ಆಗ್ರಹ : ಬಿಸಿಸಿಐ ಹೇಳಿದ್ದೇನು..?

ನಮೀಬಿಯಾ ವಿರುದ್ದ ನಡೆದ ಪಂದ್ಯದಲ್ಲಿ ಶ್ರೀಲಂಕಾ ಬೌಲರ್‌ಗಳು ಮಿಂಚಿನ ದಾಳಿ ನಡೆಸುವ ಮೂಲಕ ಎದುರಾಳಿ ತಂಡವನ್ನು ಕೇವಲ 96 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಇನ್ನು ಸಾದಾರಣ ಗುರಿ ಪಡೆದ ಲಂಕಾ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು. ಮಿಂಚಿನ ದಾಳಿ ನಡೆಸಿ 3 ವಿಕೆಟ್‌ ಕಬಳಿಸಿದ ಮಹೀಶ್‌ ಥೀಕ್ಷಣ (Maheesh Theekshana) ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು. ಭಾನುಕಾ ರಾಜಪಕ್ಸಾ ಹಾಗೂ ಆವಿಷ್ಕಾ ಫರ್ನಾಂಡೋ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು.

ಕ್ಯಾಪ್ಟನ್‌ ಕೂಲ್‌ಗೂ ಬಂದಿತ್ತು ಸಿಟ್ಟು: ಭಾರತ-ಪಾಕಿಸ್ತಾನ ನಡುವಿನ ಈ ಫೈಟ್‌ಗಳು ನಿಮಗೆ ನೆನಪಿವೆಯಾ..?

ಇನ್ನು ಮತ್ತೊಂದು ಪಂದ್ಯದಲ್ಲಿ ನೆದರ್‌ಲೆಂಡ್ಸ್‌ ವಿರುದ್ದ ಐರ್ಲೆಂಡ್ ತಂಡ ಕೂಡಾ 7 ವಿಕೆಟ್‌ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ನೆದರ್‌ಲೆಂಡ್ಸ್ ತಂಡವು 106 ರನ್‌ ಬಾರಿಸಿ ಸರ್ವಪತನ ಕಂಡಿತ್ತು. ಈ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡವು 15.1 ಓವರ್‌ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ. 

ಪಂದ್ಯ ಆರಂಭ: ಸಂಜೆ 7.30ಕ್ಕೆ

ನೆದರ್‌ಲೆಂಡ್ಸ್‌, ನಮೀಬಿಯಾಗೆ ಮಾಡು ಇಲ್ಲವೇ ಮಡಿ ಪಂದ್ಯ

ಅಬುಧಾಬಿ: ಐರ್ಲೆಂಡ್‌ ವಿರುದ್ಧ ಹೀನಾಯ ಸೋಲು ಅನುಭವಿಸಿದ ನೆದರ್‌ಲೆಂಡ್ಸ್‌ ಕ್ರಿಕೆಟ್ ತಂಡ (Netherlands Cricket Team) ಹಾಗೂ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ನಮೀಬಿಯಾ ಕ್ರಿಕೆಟ್ ತಂಡಗಳು (Namibia Cricket Team) ಬುಧವಾರ ಸೂಪರ್‌-12 ರೇಸ್‌ನಲ್ಲಿ ಉಳಿದುಕೊಳ್ಳಲು ಸೆಣಸಲಿವೆ. 

ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಪರಾಭವಗೊಂಡಿದ್ದ ಉಭಯ ತಂಡಗಳಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯವೆನಿಸಿದೆ. ರೆಯನ್‌ ಟೆನ್‌ ಡೊಶ್ಕಾಟೆ, ರೋಲ್‌ ಆಫ್‌ ವಾನ್‌ ಡೆರ್‌ ಮರ್ವೆ, ಪೀಟರ್‌ ಸೀಲಾರ್‌ರಂತಹ ಅನುಭವಿ ಆಟಗಾರರನ್ನು ಹೊಂದಿರುವ ನೆದರ್‌ಲೆಂಡ್ಸ್‌, ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ. 

T20 World Cup: ಭಾರತಕ್ಕಿಂದು ಆಸ್ಟ್ರೇಲಿಯಾ ವಿರುದ್ದ ಅಭ್ಯಾಸ ಪಂದ್ಯ

ಮತ್ತೊಂದೆಡೆ ನಮೀಬಿಯಾ ತನ್ನ ನಾಯಕ ಗೆಹಾರ್ಡ್‌ ಎರಾಸ್ಮಸ್‌ ಹಾಗೂ ದ.ಆಫ್ರಿಕಾದ ಮಾಜಿ ಆಲ್ರೌಂಡರ್‌ ಡೇವಿಡ್‌ ವೀಸಾ (David Wiese) ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ಪಂದ್ಯದಲ್ಲಿ ಸುಧಾರಿತ ಬ್ಯಾಟಿಂಗ್‌ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
 

Follow Us:
Download App:
  • android
  • ios