T20 World Cup ಟೂರ್ನಿ ಆರಂಭ ಉದ್ಘಾಟನಾ ಪಂದ್ಯದಲ್ಲಿ ಓಮನ್ ಹಾಗೂ ಪಪುವಾ ನ್ಯೂಗಿನಿಯಾ ಸೆಣಸಾಟ ಪಪುವಾ ನ್ಯೂಗಿನಿಯಾ ವಿರುದ್ಧ ಟಾಸ್ ಗೆದ್ದ ಓಮನ್

ಓಮನ್(ಅ.17): IPL 2021 ಟೂರ್ನಿ ರಸದೌತಣ ಅನುಭವಿಸಿದ ಕ್ರಿಕೆಟ್ ಅಭಿಮಾನಿಗಳಿಗೆ ಇಂದಿನಿಂದ ಟಿ20 ವಿಶ್ವಕಪ್(T20 world cup) ಟೂರ್ನಿ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಓಮನ್ ಹಾಗೂ ಪಪುವಾ ನ್ಯೂಗಿನಿಯಾ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದ ಓಮನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

Scroll to load tweet…

ಪಪುವಾ ನ್ಯೂಗಿನಿಯಾ ಪ್ಲೇಯಿಂಗ್ 11:
ಟೊನಿ ಉರ, ಅಸಾದ್ ವಾಲಾ(ನಾಯಕ), ಚಾರ್ಲೆಸ್ ಅಮಿನಿ, ಲೆಗಾ ಸೈಕಾ, ನೊರ್ಮನ್ ವಾನುವಾ, ಸೆಸೆ ಬ್ಯು, ಸಿಮೊನ್ ಆಟಾಯಿ, ಕಿಪಿಲಿನ್ ಡೊರಿಗಾ, ನೊಸಾನಿಯಾ ಪೊಕನಾ, ಡ್ಯಾಮಿಯನ್ ರಾವು, ಕಾಬುವಾ ಮೊರೆಯಾ

IPL 2021 ಮುಗಿದ ಬೆನ್ನಲ್ಲೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಗಂಗೂಲಿ!

ಓಮನ್ ಪ್ಲೇಯಿಂಗ್ 11:
ಜತಿಂದರ್ ಸಿಂಗ್, ಖವಾರ್ ಅಲಿ, ಆಕ್ಬಿಬ್ ಇಲ್ಯಾಸ್, ಜೀಶಾನ್ ಮಕ್ಸೂದ್(ನಾಯಕ), ನಸೀಮ್ ಖುಶಿ, ಕಶ್ಯಪ್ ಪ್ರಜಾಪತಿ, ಮೊಹಮ್ಮದ್ ನದೀಮ್, ಆಯನ್ ಖಾನ್, ಸಂದೀಪ್ ಗೊಡ್, ಖಲೀಮುಲ್ಲಾ, ಬಿಲಾಲನ್ ಖಾನ್

Scroll to load tweet…

ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಗೆ ಯುಎಇ ಹಾಗೂ ಓಮನ್ ಆತಿಥ್ಯ ವಹಿಸಿದೆ ಓಮನ್‌ನ ಎಐ ಅಮೆರಾತ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯ ಇದೀಗ ತೀವ್ರ ಕುತೂಹಲ ಕೆರಳಿಸಿದೆ. ಕಾರಣ ಐಸಿಸಿ ಟಿ20 ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಗೆಲುವು ಯಾರಿಗೆ ಅನ್ನೋ ಕುತೂಹಲ ಮನೆ ಮಾಡಿದೆ.

2023ರ ಏಷ್ಯಾಕಪ್‌ ಕ್ರಿಕೆಟ್‌ಗೆ ಪಾಕಿಸ್ತಾನ ಆತಿಥ್ಯ; ಸರ್ವಾನುಮತದಿಂದ ನಿರ್ಧಾರ..!

 ಎಐ ಅಮೆರಾತ್ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಈ ಮೈದಾನದಲ್ಲಿ 160 ರಿಂದ 170 ರನ್ ಸರಾಸರಿ ಸ್ಕೋರ್. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ದಿಟ್ಟ ಹೋರಾಟ ನೀಡಲೇಬೇಕು. 

ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿರುವ ಪಪುವಾ ನ್ಯೂಗನಿಯಾ ಹಾಗೂ ಓಮನ್ ತಂಡ ಉತ್ತಮ ಹೋರಾಟ ನೀಡುವ ನಿರರೀಕ್ಷೆಯಲ್ಲಿದೆ. 

Scroll to load tweet…