Asianet Suvarna News Asianet Suvarna News

IPL 2021 ಮುಗಿದ ಬೆನ್ನಲ್ಲೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಗಂಗೂಲಿ!

  • IPL 2021 ಟೂರ್ನಿ  ಅದ್ಧೂರಿಯಾಗಿ ಅಂತ್ಯ
  • ಚೆನ್ನೈ ಸೂಪರ್ ಕಿಂಗ್ಸ್‌ಗೆ ಚಾಂಪಿಯನ್ ಕಿರೀಟ
  • ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಸೌರವ್ ಗಂಗೂಲಿ
Sourav ganduly hints IPL 2022 taking place in India if Covid 19 situation under control ckm
Author
Bengaluru, First Published Oct 16, 2021, 9:31 PM IST

ದುಬೈ(ಅ.16):  IPL 2021 ಟೂರ್ನಿ ಯಶಸ್ವಿಯಾಗಿದೆ. ಹಲವು ಅಡೆತಡೆಗಳನ್ನು ಎದುರಿಸಿದ ಐಪಿಎಲ್ 2021 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್(Chennai Super kings) ಚಾಂಪಿಯನ್ ಕಿರೀಟ ಗೆಲ್ಲುವ ಮೂಲಕ ಅಂತ್ಯಗೊಂಡಿದೆ. ಟೂರ್ನಿ ಅಂತ್ಯಗೊಂಡ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ಗುಡ್ ನ್ಯೂಸ್ ನೀಡಿದ್ದಾರೆ. ಐಪಿಎಲ್ 2022 ಟೂರ್ನಿಯನ್ನು ಭಾರತದಲ್ಲೇ ಆಯೋಜಿಸುವ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟಿದ್ದಾರೆ.

IPL 2021: ಟ್ರೋಫಿ ಗೆದ್ದುಕೊಟ್ಟು ಬದಿಯಲ್ಲಿ ನಿಂತ ಕ್ಯಾಪ್ಟನ್ ಕೂಲ್‌ ಎಂ ಎಸ್ ಧೋನಿ..!

IPL 2021 ಟೂರ್ನಿ ಭಾರತದಲ್ಲಿ ಆರಂಭಗೊಂಡಿತ್ತು. ಆದರೆ ಕೊರೋನಾ ಎರಡನೇ ಅಲೆ ಹೊಡೆತಕ್ಕೆ ಟೂರ್ನಿ ಅರ್ಧಕ್ಕೆ ಸ್ಥಗಿತಕೊಂಡಿತು. ಹಲವು ಪ್ರಯತ್ನಗಳ ಬಳಿಕ ಬಿಸಿಸಿಐ ಟೂರ್ನಿಯನ್ನು ಯಎಐಗೆ ಸ್ಥಳಾಂತರಿಸಿತು. ಹೀಗಾಗಿ ಐಪಿಎಲ್ 2021ರ ಎರಡನೇ ಭಾಗ ಯುನೈಟೆಡ್ ಅರಬ್ ಎಮಿರೈಟ್ಸ್‌ನಲ್ಲಿ ಆಯೋಜಿಸಲಾಯಿತು. ಆದರೆ ಐಪಿಎಲ್ 2022 ಟೂರ್ನಿಯನ್ನು ಭಾರತದಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ಗಂಗೂಲಿ ಹೇಳಿದ್ದಾರೆ.

CSK ವೃದ್ಧರ ಟೀಂ ಎಂದವರಿಗೆ ಗೆಲುವಿನ ಮೂಲಕ ಉತ್ತರಿಸಿದ ಧೋನಿ

ಪರಿಸ್ಥಿತಿ ಹೀಗೆ ಇದ್ದರೆ ಎಪ್ರಿಲ್ ತಿಂಗಳಲ್ಲಿ ಆರಂಭಗೊಳ್ಳಲಿರುವ ಮುಂದಿನ ಐಪಿಎಲ್ ಟೂರ್ನಿಯನ್ನು ಭಾರತದಲ್ಲಿ ಆಯೋಜಿಸಲಾಗುವುದು. ಸದ್ಯ ಭಾರತದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಹೀಗಾಗಿ ಎಲ್ಲಾ ಕ್ಷೇತ್ರದ ಕಾರ್ಯಚಟುವಟಿಕೆಗೆ ಅವಕಾಶ ನೀಡಲಾಗಿದೆ. ಪರಿಸ್ಥಿತಿ ಟೂರ್ನಿ ಆಯೋಜಿಸಲು ಅನೂಕೂಲವಾಗಿದೆ. ಹೀಗಾಗಿ ಇದೇ ಪರಿಸ್ಥಿತಿ ಮುಂದುವರಿದರೆ ಭಾರತದಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲಾಗುವುದು ಎಂದು ಗಂಗೂಲಿ ಹೇಳಿದ್ದಾರೆ.

ಧೋನಿ ಮಗಳು ಸಾಕ್ಷಿಯ ಪುಟ್ಟ ಕೈಯಲ್ಲಿ ದೊಡ್ಡ ಟ್ರೋಫಿ, ಇಂಟರ್‌ನೆಟ್‌ನಲ್ಲಿ ಕ್ಯೂಟೆಸ್ಟ್ ಫೋಟೋ

ಕೋವಿಡ್ ಪರಿಸ್ಥಿತಿ ಮತ್ತಷ್ಟು ಸುಧಾರಿಸಿದರೆ ಕ್ರೀಡಾಂಗಣ ಪ್ರವೇಶಕ್ಕೆ ಅಭಿಮಾನಿಗಳಿಗೂ ಅವಕಾಶ ನೀಡಲಾಗುವುದು. ಭಾರತದಲ್ಲಿ ಕೊರೋನಾ ಪರಿಸ್ಥಿತಿ ಸುಧಾರಿಸಿದೆ. ಹೀಗಾಗಿ ಮುಂದಿನ ಐಪಿಎಲ್ ಟೂರ್ನಿಗೆ ಅಭಿಮಾನಿಗಳಿಗೂ ಪಂದ್ಯ ವೀಕ್ಷಿಸುವ ಎಲ್ಲಾ ಸಾಧ್ಯತೆಗಳನ್ನು ಗಂಗೂಲಿ ಹೇಳಿದ್ದಾರೆ.

2012ರ ಐಪಿಎಲ್‌ ಫಲಿತಾಂಶ 2021ರಲ್ಲಿ ಸಂಪೂರ್ಣ ಉಲ್ಟಾ! ಅಚ್ಚರಿಯಾದ್ರೂ ಇದು ಸತ್ಯ..!

ಐಪಿಎಲ್ 2021ರ ಎರಡನೇ ಭಾಗವನ್ನು ದುಬೈನಲ್ಲಿ ಅತ್ಯಂತ ಯಶಸ್ವಿಯಾಗಿ ಬಿಸಿಸಿಐ ಆಯೋಜಿಸಿದೆ. ಬಯೋಬಬಲ್ ಸೇರಿದಂತೆ ಹಲವು ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿತು. ಹೀಗಾಗಿ ಯಾವುದೇ ಸಮಸ್ಯೆ ಇಲ್ಲದೆ ಐಪಿಎಲ್ ಟೂರ್ನಿ ಆಯೋಜನೆಗೊಂಡಿದೆ ಎಂದು ಗಂಗೂಲಿ ಹೇಳಿದ್ದಾರೆ.

ಐಪಿಎಲ್ 2021 ಚಾಂಪಿಯನ್
IPL 2021 ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯಾಗಿತ್ತು. ಸ್ಫೋಟಕ ಬ್ಯಾಟಿಂಗ್ ಹಾಗೂ ಅದ್ಭುತ ಬೌಲಿಂಗ್ ಮೂಲಕ ಚೆನ್ನೈ ತಂಡ 27 ರನ್ ಗೆಲುವು ಸಾಧಿಸಿತು. ಈ ಮೂಲಕ ಚೆನ್ನೈ ಐಪಿಎಲ್ 2021ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಐಪಿಎಲ್ ಟೂರ್ನಿಯಲ್ಲಿ ಚೆನ್ನೈ 4ನೇ ಚಾಂಪಿಯನ್ ಪಟ್ಟ ಗೆದ್ದ ಸಾಧನೆ ಮಾಡಿತು.

Follow Us:
Download App:
  • android
  • ios