Asianet Suvarna News Asianet Suvarna News

T20 World Cup IND vs PAK; ಆರಂಭದಲ್ಲೇ 3 ವಿಕೆಟ್ ಪತನ, ಸಂಕಷ್ಟದಲ್ಲಿ ಭಾರತ!

  • ಪಾಕಿಸ್ತಾನ ದಾಳಿಗೆ ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಭಾರತ
  • ಶಾಹಿನ್ ಆಫ್ರಿದಿ ದಾಳಿಗೆ ಆರಂಭಿಕರು ಔಟ್
  • IND vs PAK ಪಂದ್ಯದಲ್ಲಿ ಟೀಂ ಇಂಡಿಯಾಗೆ ಆತಂಕ
IND vs PAK T20 World Cup Team india in deep trouble lose early wickets against pakistan ckm
Author
Bengaluru, First Published Oct 24, 2021, 8:14 PM IST
  • Facebook
  • Twitter
  • Whatsapp

ದುಬೈ(ಅ.24): ತೀವ್ರ ಕುತೂಹಲ ಕೆರಳಿಸಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ T20 World Cup ಪಂದ್ಯ ಆರಂಭದಲ್ಲೇ ರೋಚಕ ತಿರುವು ಪಡೆದುಕೊಂಡಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಬಹುಬೇಗನೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

T20 World Cup IND vs PAK; ಭಾರತ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ!

ಪಾಕಿಸ್ತಾನ ವೇಗೆ ಶಾಹೀನ್ ಆಫ್ರಿದಿ ದಾಳಿಗೆ ನಲುಗಿದ ಟೀಂ ಇಂಡಿಯಾ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ವಿಕೆಟ್ ಕೈಚೆಲ್ಲಿದ್ದಾರೆ. ರೋಹಿತ್ ಶರ್ಮಾ LBWಗೆ ಬಲಿಯಾದರೆ, ಕೆಎಲ್ ರಾಹುಲ್ ಕ್ಲೀನ್ ಬೋಲ್ಡ್ ಆಗಿದ್ದಾರೆ. 

ಸೂರ್ಯಕುಮಾರ್ ಯಾದವ್ ಚೇತರಿಸಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ 11 ರನ್ ಸಿಡಿಸಿ ಯಾದವ್ ಪೆವಿಲಿಯನ್ ಸೇರಿಕೊಂಡರು ಹಸನ್ ಆಲಿ ದಾಳಿಗೆ ಸೂರ್ಯಕುಮಾರ್ ಯಾದವ್, ರಿಜ್ವಾನ್‌ಗೆ ಕ್ಯಾಚ್ ನೀಡಿ ಹೊರನಡೆದರು. 31 ರನ್‌ಗಳಿಸುವಷ್ಟರಲ್ಲೇ ಭಾರತ 3 ವಿಕೆಟ್ ಕಳೆದುಕೊಂಡಿದೆ.

 

T20 World Cup IND vs PAK; ಈ ಪಂದ್ಯ ನಮಗೆ ಬಿಟ್ಟು ಬಿಡಿ, ಧೋನಿಗೆ ಪಾಕ್ ಯುವತಿಯ ಮನವಿ!

ಪಾಕಿಸ್ತಾನ ವಿರುದ್ದ ಪ್ರತಿ ಹೋರಾಟದಲ್ಲಿ ದಿಟ್ಟ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಇದೀಗ ಮಹತ್ವದ ಪಂದ್ಯದಲ್ಲಿ ಟಾಪ್ ಆರ್ಡರ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ದುಬೈ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡ ತೀವ್ರ ಸಂಕಷ್ಟ ಸಿಲುಕುವ ಪರಿಪಾಠ ಮುಂದುವರಿದಿದೆ. 

 

ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅಭಿಮಾನಿಗಳಲ್ಲೂ ಆತಂಕಕ್ಕೆ ಕಾರಣಾಗಿದೆ. ಇತ್ತ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ ಅಭಿಮಾನಿಗಳು ಟೀಂ ಇಂಡಿಯಾ ಟ್ರೋಲ್ ಆರಂಭಿಸಿದ್ದಾರೆ. ಇದು ಚಾಂಪಿಯನ್ಸ್ ಟ್ರೋಫಿ ಫೈನಲ್ ಎರಡನೇ ಭಾಗ ಎಂದು ಟ್ರೋಲ್ ಮಾಡಿದ್ದಾರೆ.

 

Follow Us:
Download App:
  • android
  • ios