T20 World Cup 2024: ರೋಹಿತ್ ಶರ್ಮಾ ಮಾಡಿದ ತಪ್ಪನ್ನೇ ಮಾಡಿದ ವಿರಾಟ್ ಕೊಹ್ಲಿ..!
ಟಿ20 ವಿಶ್ವಕಪ್ ಸಮರದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಗೆದ್ದು ಬೀಗಿದೆ. ಸೂಪರ್ ಎಂಟರಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಆದ್ರೆ, ಬ್ಯಾಟಿಂಗ್ ವಿಭಾಗದಲ್ಲಿ ಬಿಗ್‌ಸ್ಟಾರ್‌ಗಳ ಫ್ಲಾಫ್ ಶೋ ಮುಂದುವರಿದಿದೆ. ಬೇಜಬ್ದಾರಿ ಬ್ಯಾಟಿಂಗ್ನಿಂದ ಟೀಕೆಗೆ ಗುರಿಯಾಗಿದ್ದಾರೆ. ಅದರಲ್ಲೂ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಹಿಂದಿನ ತಪ್ಪುಗಳಿಂದ ಪಾಠ ಕಲಿತಂತೆ ಕಾಣುತ್ತಿಲ್ಲ.
ಬೆಂಗಳೂರು: ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅದೊಂದು ತಪ್ಪಿನಿಂದ ಹಲವು ಬಾರಿ ಪೆಟ್ಟು ತಿಂದಿದ್ದಾರೆ. ಆ ತಪ್ಪಿನಿಂದ ತಂಡಕ್ಕೂ ಹೊಡೆತ ಬಿದ್ದಿದೆ. ಇಷ್ಟೆಲ್ಲಾ ಇದ್ರೂ, ಆ ತಪ್ಪಿನಿಂದ ಪದೇ ಪದೇ ಅದೇ ತಪ್ಪು ಮಾಡುತ್ತಿದ್ದಾರೆ. ಅಷ್ಟಕ್ಕೂ ಯಾವುದು ಆ ತಪ್ಪು ಅಂತೀರಾ..? ಇಲ್ಲಿದೆ ನೋಡಿ ಡಿಟೇಲ್ಸ್..!
ಬಾಂಗ್ಲಾದೇಶ ವಿರುದ್ಧ ಬಿಗ್‌ಸ್ಟಾರ್‌ಗಳ ಬೇಜವಬ್ದಾರಿ ಆಟ..!
ಟಿ20 ವಿಶ್ವಕಪ್ ಸಮರದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಗೆದ್ದು ಬೀಗಿದೆ. ಸೂಪರ್ ಎಂಟರಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಆದ್ರೆ, ಬ್ಯಾಟಿಂಗ್ ವಿಭಾಗದಲ್ಲಿ ಬಿಗ್‌ಸ್ಟಾರ್‌ಗಳ ಫ್ಲಾಫ್ ಶೋ ಮುಂದುವರಿದಿದೆ. ಬೇಜಬ್ದಾರಿ ಬ್ಯಾಟಿಂಗ್ನಿಂದ ಟೀಕೆಗೆ ಗುರಿಯಾಗಿದ್ದಾರೆ. ಅದರಲ್ಲೂ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಹಿಂದಿನ ತಪ್ಪುಗಳಿಂದ ಪಾಠ ಕಲಿತಂತೆ ಕಾಣುತ್ತಿಲ್ಲ.
ಈ ಕ್ರಿಕೆಟಿಗನೊಂದಿಗೆ ಲವ್ವಲ್ಲಿ ಬಿದ್ದಿದ್ದ ಮಾಧುರಿ ದೀಕ್ಷಿತ್, ಆದ್ರೆ ಮದುವೆಯಾಗದಿರಲು ನಿರ್ಧರಿಸಿದ್ದೇಕೆ?
ಯೆಸ್, ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ರೋಹಿತ್ ಶರ್ಮಾ, ಮೊದಲ ಎಸೆತದಿಂದಲೇ ಅಟ್ಯಾಕಿಂಗ್ ಆಟ ಶುರುಮಾಡಿದ್ರು. ಕೇವಲ 11 ಎಸೆತಗಳಲ್ಲಿ 23 ರನ್ ಸಿಡಿಸಿ ಬಿಗ್ ಇನ್ನಿಂಗ್ಸ್ ಆಡೋ ಸೂಚನೆ ನೀಡಿದ್ರು. ಆದ್ರೆ, ಈ ವೇಳೆ ಶಕೀಬ್ ಅಲ್ ಹಸನ್‌ಗೆ ವಿಕೆಟ್ ಒಪ್ಪಿಸಿದ್ರು. ಶಕೀಬ್ ಎಸೆದ 4ನೇ ಓವರ್‌ನಲ್ಲಿ ಅದಾಗಲೇ ರೋಹಿತ್ ಶರ್ಮಾ ಬ್ಯಾಟಿಂದ ಒಂದು ಭರ್ಜರಿ ಸಿಕ್ಸ್ ಮತ್ತು ಒಂದು ಫೋರ್ ಬಂದಿತ್ತು. ಅದ್ರೆ, ಅಷ್ಟಕ್ಕೆ ಸುಮ್ಮನಾಗದೇ ಮತ್ತೊಂದು ಸಿಕ್ಸ್ ಬಾರಿಸಲು ಹೋಗಿ ಪೆವಿಲಿಯನ್ ಸೇರಿದ್ರು.
ರೋಹಿತ್ ಮಾತ್ರ ಅಲ್ಲ, ರನ್‌ಮಷಿನ್ ವಿರಾಟ್ ಕೊಹ್ಲಿ ಕೂಡ ಸೇಮ್ ಮಿಸ್ಟೇಕ್ ಮಾಡಿದ್ರು. ಗುಡ್ ಟಚ್‌ನಲ್ಲಿದ್ದ ಕೊಹ್ಲಿ, 3 ಭರ್ಜರಿ ಸಿಕ್ಸರ್‌ಗಳನ್ನ ಸಿಡಿಸಿದ್ರು. ಕ್ರೀಸಲ್ಲಿ ಸೆಟಲ್ ಆಗಿದ್ರು. ಆದ್ರೆ, ಈ ಹಂತದಲ್ಲಿ ವೇಗಿ ತನ್ಝೀಮ್ ಹಸನ್ ಎಸೆತದಲ್ಲಿ ಬಿಗ್ಶಾಟ್ ಬಾರಿಸಲು ಹೋಗಿ ಔಟಾದ್ರು. ನಿರಾಸೆಯಿಂದ ಡಗೌಟ್ ಕಡೆ ಹೆಜ್ಜೆಹಾಕಿದ್ರು.
ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ಆದ್ರೆ ಈ ಇಬ್ಬರಿಗೆ ಗೇಟ್‌ಪಾಸ್ ಫಿಕ್ಸ್..!
ಏಕದಿನ ವಿಶ್ವಕಪ್ನಲ್ಲೂ ರೋಹಿತ್ ಅದೇ ಮಿಸ್ಟೇಕ್..!
ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಫೈನಲ್ನಲ್ಲೂ ರೋಹಿತ್ ಅದೇ ತಪ್ಪು ಮಾಡಿದ್ರು. ಟೂರ್ನಿಯುದ್ಧಕ್ಕೂ ರೋಹಿತ್, ಖತರ್ನಾಕ್ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ರು. ಪವರ್ ಪ್ಲೇನಲ್ಲಿ ಫಿಯರ್ಲೆಸ್ ಬ್ಯಾಟಿಂಗ್ನಿಂದ ತಂಡಕ್ಕೆ ಭರ್ಜರಿ ಆರಂಭ ತಂದುಕೊಟ್ಟಿದ್ರು. ಹಿಟ್‌ಮ್ಯಾನ್ ಆಟಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಯ್ತು. ಆದ್ರೆ, ಫೈನಲ್ನಲ್ಲಿ ರೋಹಿತ್ ಅವರ ಈ ಅಗ್ರೆಸಿವ್ ಅಪ್ರೋಚ್ ತಂಡವನ್ನ ಸಂಕಷ್ಟಕ್ಕೆ ದೂಡಿತು ಅಂದ್ರೆ ತಪ್ಪಿಲ್ಲ.
ಆಸೀಸ್ ವಿರುದ್ಧದ ಫೈನಲ್ ಕಾದಾಟದಲ್ಲಿ ರೋಹಿತ್ ಆರಂಭದಲ್ಲಿ ಅಟ್ಯಾಕಿಂಗ್ ಗೇಮ್ ಮೂಲಕ ಆಸಿಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ್ರು. ಆದ್ರೆ, ಗಿಲ್ ವಿಕೆಟ್ ಬಿದ್ದ ಮೇಲೂ ಅದನ್ನೇ ಮುಂದುವರಿಸಿದ್ರು. ಮ್ಯಾಕ್ಸ್‌ವೆಲ್ ಎಸೆದ ಓವರ್‌ನಲ್ಲಿ ಆಲ್ರೆಡಿ 10 ರನ್ ಬಂದಿದ್ದರೂ, ಸಿಕ್ಸ್ ಬಾರಿಸಲು ಹೋಗಿ ಔಟಾದ್ರು.
ಟಿ20 ವಿಶ್ವಕಪ್‌ನಲ್ಲಿ ಮುಂದುವರಿದ ಹಿಟ್‌ಮ್ಯಾನ್ ಫ್ಲಾಫ್ ಶೋ..!
ಯೆಸ್, ಟಿ20 ವಿಶ್ವಕಪ್‌ಗಳಲ್ಲಿ ರೋಹಿತ್ ಶರ್ಮಾ ಈವರೆಗು ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ. ಅದರಂತೆ ಈ ಬಾರಿಯು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡ್ತಿಲ್ಲ. ಗ್ರೂಪ್ ಸ್ಟೇಜ್‌ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಅರ್ಧಶತಕ ಬಾರಿಸಿದ್ದ ರೋಹಿತ್, ನಂತರ ಫುಲ್ ಸೈಲೆಂಟ್ ಆಗಿದ್ದಾರೆ. ಟಿ20 ವಿಶ್ವಕಪ್ಗಳಲ್ಲಿ ಈ ಮುಂಬೈಕರ್ ಈವರೆಗೂ 41 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದು, ಜಸ್ಟ್ 127.64ರ ಸ್ಟ್ರೈಕ್ರೇಟ್ನಲ್ಲಿ 1,062 ರನ್ಗಳಿಸಿದ್ದಾರೆ.
ಅದೇನೆ ಇರಲಿ, ಮುಂದಿನ ಪಂದ್ಯಗಳಲ್ಲಿ ಈ ಇಬ್ಬರು ಸೀನಿಯರ್ಸ್, ಅಬ್ಬರಿಸಲಿ. ಬಿಗ್ ಇನ್ನಿಂಗ್ಸ್ ಆಡಲಿ ಅನ್ನೋದೆ ನಮ್ಮ ಆಶಯ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್