Asianet Suvarna News Asianet Suvarna News

ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಪಾಕ್‌ ತಂಡದ ವಿರುದ್ಧ ದೇಶದ್ರೋಹದ ಕೇಸ್‌ ದಾಖಲು..!

ಪಾಕ್‌ ತಂಡದ ಪ್ರದರ್ಶನದ ಬಗ್ಗೆ ಅರ್ಜಿದಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇದರಿಂದ ಹಣ ವ್ಯರ್ಥವಾಗುತ್ತಿದೆ ಮತ್ತು ರಾಷ್ಟ್ರದ ನಂಬಿಕೆಗೆ ದ್ರೋಹ ಉಂಟಾಗಿದೆ. ಆಟಗಾರರು ದೇಶದ ಬಗ್ಗೆ ಗೌರವಕ್ಕಿಂತ ಆರ್ಥಿಕ ಲಾಭಕ್ಕೆ ಆದ್ಯತೆ ನೀಡಿದ್ದಾರೆ ಎಂದು ಅರ್ಜಿದಾರ ಉಲ್ಲೇಖಿಸಿದ್ದಾಗಿ ವರದಿಯಾಗಿದೆ.

T20 World Cup 2024 Petition seeks sedition case against Pakistan Cricket Team kvn
Author
First Published Jun 15, 2024, 1:12 PM IST

ಇಸ್ಲಾಮಾಬಾದ್‌: ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಮಾಜಿ ಚಾಂಪಿಯನ್‌ ಪಾಕಿಸ್ತಾನ ವಿರುದ್ಧ ಪಾಕ್‌ನ ಗುಜ್ರಾನ್ವಾಲಾ ನಗರದ ವಕೀಲರೊಬ್ಬರು ದೇಶದ್ರೋಹ ಕೇಸ್‌ ದಾಖಲಿಸಿದ್ದಾರೆ.

ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಕೇಸ್‌ನ ಬಗ್ಗೆ ಜೂ.21ಕ್ಕೆ ಮುನ್ನ ವರದಿ ಸಲ್ಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ ಎಂದು ತಿಳಿದುಬಂದಿದೆ. ಪಾಕ್‌ ತಂಡದ ಪ್ರದರ್ಶನದ ಬಗ್ಗೆ ಅರ್ಜಿದಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇದರಿಂದ ಹಣ ವ್ಯರ್ಥವಾಗುತ್ತಿದೆ ಮತ್ತು ರಾಷ್ಟ್ರದ ನಂಬಿಕೆಗೆ ದ್ರೋಹ ಉಂಟಾಗಿದೆ. ಆಟಗಾರರು ದೇಶದ ಬಗ್ಗೆ ಗೌರವಕ್ಕಿಂತ ಆರ್ಥಿಕ ಲಾಭಕ್ಕೆ ಆದ್ಯತೆ ನೀಡಿದ್ದಾರೆ ಎಂದು ಅರ್ಜಿದಾರ ಉಲ್ಲೇಖಿಸಿದ್ದಾಗಿ ವರದಿಯಾಗಿದೆ.

ಪಂದ್ಯದ ಬಳಿಕ ಅಮೆರಿಕ ಕ್ರಿಕೆಟಿಗ ನೇತ್ರವಾಲ್ಕರ್‌ ‘ವರ್ಕ್‌ ಫ್ರಮ್‌ ಹೋಟೆಲ್‌’!

ನ್ಯೂಯಾರ್ಕ್‌: ಮುಂಬೈ ಮೂಲದ, ಸದ್ಯ ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ತಂಡದ ಪರ ಆಡುತ್ತಿರುವ ಸೌರಭ್‌ ನೇತ್ರವಾಲ್ಕರ್‌ ಟೂರ್ನಿಯಲ್ಲಿ ನೀಡಿದ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಅಮೆರಿಕದಲ್ಲಿ ಖಾಸಗಿ ಕಂಪೆನಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿಯೂ ಕೆಲಸ ಮಾಡುತ್ತಿದ್ದಾರೆ. 

ಸೌರಭ್‌ರ ಜೀವನ ಕ್ರಮದ ಬಗ್ಗೆ ಅವರ ಸಹೋದರಿ ನಿಧಿ ಮಾಧ್ಯಮಗಳ ಜೊತೆ ಮಾತನಾಡಿದ್ದು, ‘ಪಂದ್ಯದ ಬಳಿಕ ಸೌರಭ್‌ ಹೋಟೆಲ್‌ ಕೋಣೆಯಲ್ಲೇ ಕುಳಿತು ಕಂಪೆನಿಯ ಕೆಲಸ ಮಾಡುತ್ತಿರುತ್ತಾರೆ’ ಎಂದಿದ್ದಾರೆ. ‘ಸೌರಭ್‌ ಕ್ರಿಕೆಟ್‌ ಹಾಗೂ ಕೆಲಸ ಎರಡಕ್ಕೂ ಶೇ.100ರಷ್ಟು ಪರಿಶ್ರಮ ಪಡುತ್ತಾರೆ. ಹೀಗಾಗಿ ಅವರು ಲ್ಯಾಪ್‌ಟಾಪ್‌ಅನ್ನು ಎಲ್ಲೆಡೆ ಒಯ್ಯುತ್ತಾರೆ. ಹೋದಲೆಲ್ಲಾ ಕಂಪೆನಿಯ ಕೆಲಸ ಮಾಡುತ್ತಾರೆ. ಭಾರತಕ್ಕೆ ಬಂದಾಗಲೂ ಲ್ಯಾಪ್‌ಟಾಪ್‌ ತಂದು ಕೆಲಸ ಮಾಡುತ್ತಿರುತ್ತಾರೆ’ ಎಂದು ತಿಳಿಸಿದ್ದಾರೆ.

ಅವಕಾಶ ಸಿಗದ್ದಕ್ಕೆ ಟಿ20 ವಿಶ್ವಕಪ್‌ ತೊರೆದು ಶುಭ್‌ಮನ್‌, ಆವೇಶ್‌ ಭಾರತಕ್ಕೆ ವಾಪಸ್‌?

ಫ್ಲೋರಿಡಾ: ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಜೊತೆ ಮೀಸಲು ಆಟಗಾರರಾಗಿ ಅಮೆರಿಕಕ್ಕೆ ಪ್ರಯಾಣಿಸಿರುವ ತಾರಾ ಬ್ಯಾಟರ್‌ ಶುಭ್‌ಮನ್ ಗಿಲ್‌ ಹಾಗೂ ವೇಗಿ ಆವೇಶ್‌ ಖಾನ್‌, ಜೂ.15ರ ಕೆನಡಾ ವಿರುದ್ಧದ ಪಂದ್ಯದ ಬಳಿಕ ಭಾರತಕ್ಕೆ ಮರಳಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಆದರೆ ಖಲೀಲ್‌ ಅಹ್ಮದ್‌, ರಿಂಕು ಸಿಂಗ್‌ ಸೂಪರ್‌-8 ಹಂತದಲ್ಲೂ ತಂಡದ ಜೊತೆಗಿರಲಿದ್ದಾರೆ ಎಂದು ಹೇಳಲಾಗುತ್ತಿದೆ. ಮುಖ್ಯ ತಂಡದಲ್ಲಿರುವ ಆಟಗಾರರಿಗೆ ಗಾಯವಾಗಿ, ಟೂರ್ನಿಯಿಂದ ಹೊರಬೀಳದ ಹೊರತು ಮೀಸಲು ತಂಡದಲ್ಲಿರುವವರಿಗೆ ಅವಕಾಶ ಸಿಗಲ್ಲ.

ತಂಡದಲ್ಲಿ ಈಗಾಗಲೇ ಹೆಚ್ಚುವರಿ ಆರಂಭಿಕನಾಗಿ ಯಶಸ್ವಿ ಜೈಸ್ವಾಲ್‌ ಇರುವುದರಿಂದ ಗಿಲ್‌ಗೆ ಅವಕಾಶ ಸಿಗುವ ಸಾಧ್ಯತೆಯಿಲ್ಲ. ಅಲ್ಲದೆ ಭಾರತ ಸೂಪರ್‌-8 ಪಂದ್ಯಗಳನ್ನು ಕೆರಿಬಿಯನ್‌ನಲ್ಲಿ ಆಡಲಿರುವ ಕಾರಣ ಸ್ಪಿನ್ನರ್ಸ್‌ಗೆ ಹೆಚ್ಚಿನ ಆದ್ಯತೆ ಸಿಗಲಿದ್ದು, ಹೀಗಾಗಿ ಆವೇಶ್‌ ಮುಖ್ಯ ತಂಡಕ್ಕೇರುವ ಸಾಧ್ಯತೆ ಕಡಿಮೆ. ಹೀಗಾಗಿ ಅವರನ್ನು ಭಾರತಕ್ಕೆ ವಾಪಸ್‌ ಆಗಬಹುದು ಎಂದು ತಿಳಿದುಬಂದಿದೆ.
 

Latest Videos
Follow Us:
Download App:
  • android
  • ios