Asianet Suvarna News Asianet Suvarna News

ಮಹಾರಾಷ್ಟ್ರ ವಿಧಾನಸಭೆಯಲ್ಲಿ ರೋಹಿತ್‌, ಸೂರ್ಯಕುಮಾರ್‌ಗೆ ಸನ್ಮಾನ; 11 ಕೋಟಿ ಬಹುಮಾನ

ಭಾರತಕ್ಕೆ ದಶಕದ ಬಳಿಕ ಟಿ20 ವಿಶ್ವಕಪ್ ಟ್ರೋಫಿ ಗೆದ್ದುಕೊಟ್ಟ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸೇರಿದಂತೆ ನಾಲ್ವರು ಮುಂಬೈ ಆಟಗಾರರಿಗೆ ಮಹಾರಾಷ್ಟ್ರ ಸರ್ಕಾರ, ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸನ್ಮಾನ ಮಾಡಿ ನಗದು ಬಹುಮಾನ ವಿತರಿಸಿತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

T20 World Cup 2024 Maharashtra CM Eknath Shinde Felicitates Rohit Sharma Suryakumar Yadav Shivam Dube and Yashasvi Jaiswal kvn
Author
First Published Jul 6, 2024, 3:17 PM IST

ಮುಂಬೈ: ಟಿ20 ವಿಶ್ವಕಪ್‌ ವಿಜೇತ ಭಾರತ ತಂಡದ ನಾಲ್ವರು ಆಟಗಾರರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಶುಕ್ರವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸನ್ಮಾನ ಮಾಡಿದರು.

ಮುಂಬೈ ಆಟಗಾರರಾದ ರೋಹಿತ್‌ ಶರ್ಮಾ, ಸೂರ್ಯಕುಮಾರ್ ಯಾದವ್‌, ಯಶಸ್ವಿ ಜೈಸ್ವಾಲ್‌ ಹಾಗೂ ಶಿವಂ ದುಬೆಯನ್ನು ವಿಧಾನಸಭೆಗೆ ಆಹ್ಮಾನಿಸಿದ ಮುಖ್ಯಮಂತ್ರಿ ಶಿಂಧೆ, ಆಟಗಾರರಿಗೆ ಶಾಲು ಹೊದಿಸಿ, ಹೂಗುಚ್ಚ, ಗಣೇಶ ಮೂರ್ತಿ ನೀಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭ ಉಪಮುಖ್ಯಮಂತ್ರಿಗಳಾದ ಅಜಿತ್‌ ಪವಾರ್‌, ದೇವೇಂದ್ರ ಪಡ್ನವೀಸ್‌ ಕೂಡಾ ಉಪಸ್ಥಿತರಿದ್ದರು.

ಕೊಹ್ಲಿ, ರೋಹಿತ್, ಜಡ್ಡು ಟಿ20 ಗುಡ್‌ಬೈ: ತ್ರಿಮೂರ್ತಿಗಳ ಸ್ಥಾನ ತುಂಬಲು ಹಲವರ ನಡುವೆ ಪೈಪೋಟಿ..!

₹11 ಕೋಟಿ ಬಹುಮಾನ

ಮುಂಬೈನ ಆಟಗಾರರಾದ ರೋಹಿತ್‌ ಶರ್ಮಾ, ಶಿವಂ ದುಬೆ, ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್‌ಗೆ ಮುಖ್ಯಮಂತ್ರಿ ಶಿಂಧೆ ಅವರು ವಿಧಾನಸಭೆಯಲ್ಲಿ 11 ಕೋಟಿ ರು. ನಗದು ಬಹುಮಾನ ಘೋಷಿಸಿದರು. ಇದೇ ವೇಳೆ ವಿಶ್ವಕಪ್‌ ಗೆಲುವಿಗೆ ಭಾರತದ ಸಹಾಯಕ ಕೋಚ್‌ಗಳಾದ ಪರಾಸ್‌ ಮಾಂಬ್ರೆ, ಅರುಣ್‌ ಕನಡೆ ಕೊಡುಗೆಯನ್ನೂ ಶಿಂಧೆ ಸ್ಮರಿಸಿದರು.

ಹೈದರಾಬಾದ್‌ನಲ್ಲಿ ಕ್ರಿಕೆಟಿಗ ಸಿರಾಜ್‌ಗೆ ಅದ್ಧೂರಿ ಸ್ವಾಗತ

ಹೈದರಾಬಾದ್‌: ಟಿ20 ವಿಶ್ವಕಪ್‌ ವಿಜೇತ ಭಾರತ ತಂಡದಲ್ಲಿದ್ದ ವೇಗಿ ಮೊಹಮದ್‌ ಸಿರಾಜ್‌ ಶುಕ್ರವಾರ ತಮ್ಮ ತವರು ಹೈದರಾಬಾದ್‌ಗೆ ಆಗಮಿಸಿದ್ದು, ಈ ವೇಳೆ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಸಂಜೆ ಹೈದರಾಬಾದ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿರಾಜ್‌, ಮೆಹದಿಪಟ್ನಂನಿಂದ ಈದ್ಗಾ ಮೈದಾನದ ವರೆಗೆ ತೆರೆದ ಕಾರಿನಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಈ ವೇಳೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಪಾಲ್ಗೊಂಡರು.

ರಿಷಭ್‌ಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸಲು ವೈದ್ಯರಿಗೆ ಸೂಚಿಸಿದ್ದ ಮೋದಿ!

ನವದೆಹಲಿ: 2022ರ ಡಿಸೆಂಬರ್‌ನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದ ಭಾರತದ ತಾರಾ ಕ್ರಿಕೆಟಿಗ ರಿಷಭ್‌ ಪಂತ್‌ಗೆ ವಿದೇಶದಲ್ಲಿ ಚಿಕಿತ್ಸೆ ಅಗತ್ಯವಿದ್ದರೆ ಕೊಡಿಸಿ ಎಂದು ವೈದ್ಯರಲ್ಲಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದರು. ಇದನ್ನು ಸ್ವತಃ ಮೋದಿ ಗುರುವಾರ ಭಾರತ ತಂಡದ ಆಟಗಾರರೊಂದಿಗೆ ನಡೆಸಿದ ಸಂವಾದದ ವೇಳೆ ಬಹಿರಂಗಪಡಿಸಿದ್ದಾರೆ.

‘ರಿಷಭ್‌, ನೀವು ಅಪಘಾತದ ಬಳಿಕ ತುಂಬಾ ಕಷ್ಟದಿಂದ ಚೇತರಿಸಿಕೊಂಡಿದ್ದೀರಿ. ನೀವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ವೈದ್ಯರ ಬಳಿ ಮಾತನಾಡಿದ್ದೆ. ಅಗತ್ಯವಿದ್ದರೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸಿ ಎಂದು ಹೇಳಿದ್ದೆ. ಬಳಿಕ ನಿಮ್ಮ ತಾಯಿಯ ಜೊತೆಗೂ ಮಾತನಾಡಿದ್ದೆ’ ಎಂದಿದ್ದಾರೆ. ಭೀಕರ ಅಪಘಾತಕ್ಕೆ ಒಳಗಾಗಿದ್ದ ರಿಷಭ್‌, ಇತ್ತೀಚೆಗೆ ಐಪಿಎಲ್‌ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದರು.
 

Latest Videos
Follow Us:
Download App:
  • android
  • ios