IND vs PAK ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಬದ್ಧವೈರಿಗಳ ಹೋರಾಟಕ್ಕೆ ಮಳೆ ಸಾಧ್ಯತೆ ಎಷ್ಟು?
ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಟೂರ್ನಿ ಪಂದ್ಯ ನಾಳೆ(ಅ.23) ನಡೆಯಲಿದೆ. ಈ ಪಂದ್ಯಕ್ಕೆ ಮಳೆ ಭೀತಿಯೂ ಕಾಡುತ್ತಿದೆ. ಹವಾಮಾನ ವರದಿ ಪ್ರಕಾರ ನಾಳೆ ಮಳೆ ಸಾಧ್ಯತೆ ಎಷ್ಟಿದೆ?
ಮೆಲ್ಬೋರ್ನ್(ಅ.22): ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯಕ್ಕಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಅಕ್ಟೋಬರ್ 23 ರಂದು ನಡೆಯಲಿರುವ ಈ ಹೋರಾಟಕ್ಕಾಗಿ ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದೆ. ಅಭಿಮಾನಿಗಳು ಕೂಡ ಈ ಸೂಪರ್ ಕ್ಲಾಶ್‌ಗೆ ತಯಾರಾಗಿದ್ದಾರೆ. ಆದರೆ ಈ ಮಹತ್ವದ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಹವಾಮಾನ ವರದಿ ಪ್ರಕಾರ ಭಾರತ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಳೆಗೆ ಅಡ್ಡಿಯಾಗಲಿದೆ ಎಂದಿದೆ. ಇದೀಗ ಭಾನುವಾರದ ಮೆಘಾ ಹೋರಾಟಕ್ಕೆ ಮಳೆ ಎಷ್ಟರ ಮಟ್ಟಿಗೆ ಕಾಡಲಿದೆ ಅನ್ನೋ ವರದಿ ಬಹಿರಂಗವಾಗಿದೆ. ಮೆಲ್ಬೋರ್ನ್ ಹವಾಮಾನ ವರದಿ ಪ್ರಕಾರ ಅಕ್ಟೋಬರ್ 23 ರಂದು ಮಳೆ ಬರುವ ಸಾಧ್ಯತೆ ಶೇಕಡಾ 70. ಇಷ್ಟೇ ಅಲ್ಲ ಮಳೆ ಸಾಧ್ಯತೆ ಮಧ್ಯಾಹ್ನ ಹಾಗೂ ಸಂಜೆ ವೇಳೆ ಸುರಿಯಲಿದೆ ಎಂದಿದೆ. ಆಸ್ಟ್ರೇಲಿಯಾ ಕಾಲಮಾನದ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮಧ್ಯಾಹ್ನದ ಬಳಿಕ ಅಂದರೆ 3.30ಕ್ಕೆ ನಡೆಯಲಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಳೆ ಸಾಧ್ಯತೆಗಳು ಹೆಚ್ಚಿದೆ. ಶೇಕಡಾ 70 ರಷ್ಟು ಮಳೆ ಬರುವ ಸಾಧ್ಯತೆಯನ್ನು ಹವಾಮಾನ ವರದಿ ಹೇಳುತ್ತಿದೆ. ಹೀಗಾಗಿ ಈ ರೋಚಕ ಹೋರಾಟಕ್ಕೆ ಕಾದು ಕುಳಿತ ಅಭಿಮಾನಿಗಳಿಗೆ ನಿರಾಸೆಯಾಗುವ ಸಾಧ್ಯತೆ ಹೆಚ್ಚಿದೆ. ಮಳೆ ಬಂದು ನಿಂತರೆ ಅಥವಾ ಮಳೆಯಿಂದ ಪಂದ್ಯ ವಿಳಂಬವಾದರೆ ಪಂದ್ಯದ ಓವರ್ ಕಡಿತಗೊಳ್ಳಲಿದೆ. ಇದಕ್ಕೂ ನಾವು ಸಜ್ಜಾಗಿದ್ದೇವೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಹೇಳಿದ್ದಾರೆ.
ಟೀಂ ಇಂಡಿಯಾ ಏಷ್ಯಾಕಪ್ ಆಡಲು ಪಾಕ್ ಪ್ರವಾಸ ಕೈಗೊಳ್ಳದಿರುವ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು..?
ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭಗೊಳ್ಳಬೇಕಿದೆ. ಆ ದಿನ 10ರಿಂದ 25 ಮಿಲಿ ಮೀಟರ್ ಮಳೆ ಮುನ್ಸೂಚನೆಯನ್ನು ಅಲ್ಲಿನ ಹವಾಮಾನ ಇಲಾಖೆ ನೀಡಿದೆ. ಪಂದ್ಯ ಫಲಿತಾಂಶ ಕಾಣಲು ಎರಡೂ ಇನ್ನಿಂಗ್ಸ್‌ಗಳಲ್ಲಿ ಕನಿಷ್ಠ 5 ಓವರ್ ಆಟ ನಡೆಯಬೇಕು. ಇಲ್ಲವಾದಲ್ಲಿ ಪಂದ್ಯ ರದ್ದು ಎಂದು ಪರಿಗಣಿಸಿ ಅಂಕ ಹಂಚಲಾಗುತ್ತದೆ. ಗುಂಪು ಹಂತದ ಪಂದ್ಯಗಳಿಗೆ ಮೀಸಲು ದಿನದ ವ್ಯವಸ್ಥೆ ಇಲ್ಲ, ಆದರೆ ಸೆಮಿಫೈನಲ್ ಹಾಗೂ ಫೈನಲ್‌ಗೆ ಮೀಸಲು ದಿನವನ್ನು ಐಸಿಸಿ ನಿಗದಿ ಪಡಿಸಿದೆ.
ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಮಾತ್ರವಲ್ಲ, ಅ.22ರಂದು ಸಿಡ್ನಿಯಲ್ಲಿ ನಡೆಯಬೇಕಿರುವ ಆಸ್ಪ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಸೂಪರ್-12 ಹಂತದ ಮೊದಲ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
T20 World Cup ಪಟ್ಟಕ್ಕೆ 12 ತಂಡ ಕಾದಾಟ..! ಯಾವ ತಂಡ ಎಷ್ಟು ಸ್ಟ್ರಾಂಗ್...?
ಜಿಂಬಾಬ್ವೆ ಮೊದಲ ಬಾರಿ ಪ್ರಧಾನ ಸುತ್ತಿಗೆ ಪ್ರವೇಶ!
ಜಿಂಬಾಬ್ವೆ ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿ ಪ್ರಧಾನ ಸುತ್ತು ಪ್ರವೇಶಿಸಲು ಯಶಸ್ವಿಯಾಗಿದ್ದು, ಆರಂಭಿಕ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ಗೆ ಆಘಾತ ನೀಡಿದ್ದ ಸ್ಕಾಟ್ಲೆಂಡ್ ಅರ್ಹತಾ ಸುತ್ತಿನಲ್ಲೇ ಹೊರಬಿದ್ದಿದೆ. ಶುಕ್ರವಾದ ‘ಬಿ’ ಗುಂಪಿನ ಪಂದ್ಯದಲ್ಲಿ ಜಿಂಬಾಬ್ವೆ, ಸ್ಕಾಟ್ಲೆಂಡ್ ವಿರುದ್ಧ 5 ವಿಕೆಟ್ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ 6 ವಿಕೆಟ್‌ಗೆ 132 ರನ್ ಕಲೆಹಾಕಿತು. ಏಕಾಂಗಿ ಹೋರಾಟ ನಡೆಸಿದ ಜಾಜ್‌ರ್ ಮನ್ಸಿ(54) ಅರ್ಧಶತಕ ಬಾರಿಸಿದರೆ, ಮ್ಯಾಕ್‌ಲಿಯೋಡ್ 25 ರನ್ ಗಳಿಸಿದರು. ತೆಂಡಾಯ್ ಚತಾರ 4 ಓವರಲ್ಲಿ 1 ಮೇಡನ್ ಸಹಿತ 14 ರನ್‌ಗೆ 2 ವಿಕೆಟ್ ಕಿತ್ತರು. ಸುಲಭ ಗುರಿ ಬೆನ್ನತ್ತಿ ಜಿಂಬಾಬ್ವೆ 18.3 ಓವರಲ್ಲಿ ಜಯಗಳಿಸಿತು. ನಾಯಕ ಕ್ರೇಗ್ ಎರ್ವಿನ್ 58 ರನ್ ಬಾರಿಸಿದರೆ, ಸಿಕಂದರ್ ರಾಜಾ 23 ಎಸೆತಗಳಲ್ಲಿ 40 ರನ್ ಗಳಿಸಿ ಮತ್ತೊಮ್ಮೆ ತಂಡಕ್ಕೆ ಆಸರೆಯಾದರು.