ಟೀಂ ಇಂಡಿಯಾಗೆ ಪಾಕ್‌ ಎದುರು ಆರಂಭಿಕ ಆಘಾತಮೊದಲ 7 ಓವರ್‌ನಲ್ಲೇ 4 ವಿಕೆಟ್ ಕಳೆದುಕೊಂಡ ಭಾರತ 160 ರನ್‌ಗಳ ಸವಾಲಿನ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ

ಮೆಲ್ಬರ್ನ್‌(ಆ.23): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ನೀಡಿರುವ 160 ರನ್‌ಗಳ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಮೊದಲ 6.1 ಓವರ್‌ ಮುಕ್ತಾಯದ ವೇಳೆಗೆ ಭಾರತ 4 ವಿಕೆಟ್ ಕಳೆದುಕೊಂಡು ಕೇವಲ 31 ರನ್ ಬಾರಿಸಿದೆ.

ಮೆಲ್ಬರ್ನ್‌ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಮತ್ತೊಮ್ಮೆ ಪಾಕ್ ವೇಗಿಗಳೆದುರು ರನ್‌ಗಳಿಸಲು ಪರದಾಡಿದರು. ಮೊದಲಿಗೆ ನೀಳಕಾಯದ ವೇಗಿ ನಸೀಂ ಶಾ, ಆರಂಭದಲ್ಲೇ ಕೆ ಎಲ್ ರಾಹುಲ್ ಅವರನ್ನು ಬೌಲ್ಡ್‌ ಮಾಡುವಲ್ಲಿ ಯಶಸ್ವಿಯಾದರು. ಕೆ ಎಲ್ ರಾಹುಲ್ 4 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಇದರ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ 4 ರನ್ ಬಾರಿಸಿ ಹ್ಯಾರಿಸ್ ರೌಫ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಸ್ಪೋಟಕ ಬ್ಯಾಟಿಂಗ್ ನಡೆಸುವ ಸೂಚನೆ ನೀಡಿದ ಸೂರ್ಯಕುಮಾರ್ ಯಾದವ್ 15 ರನ್ ಬಾರಿಸಿ ಹ್ಯಾರಿಸ್ ರೌಫ್‌ಗೆ ಎರಡನೇ ಬಲಿಯಾದರು. ಪವರ್‌ ಪ್ಲೇ ಅಂತ್ಯದ ವೇಳೆಗೆ ಭಾರತ 3 ವಿಕೆಟ್ ಕಳೆದುಕೊಂಡು 31 ರನ್ ಬಾರಿಸಿತ್ತು. ಇನ್ನು 7ನೇ ಓವರ್ ಮೊದಲ ಎಸೆತದಲ್ಲೇ ಅಕ್ಷರ್ ಪಟೇಲ್ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆಗುವ ಮೂಲಕ ಪೆವಿಲಿಯನ್ ಸೇರಿದರು.

Scroll to load tweet…

ಕ್ರೀಸ್‌ನಲ್ಲಿ ಕೊಹ್ಲಿ-ಪಾಂಡ್ಯ: ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿರುವ ಹಿನ್ನೆಲೆಯಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ರಕ್ಷಣಾತ್ಮಕ ಬ್ಯಾಟಿಂಗ್ ಮೊರೆ ಹೋಗಿದ್ದಾರೆ. ಸದ್ಯ ಎಂಟು ಓವರ್ ಅಂತ್ಯದ ವೇಳೆಗೆ ಭಾರತ 4 ವಿಕೆಟ್ ಕಳೆದುಕೊಂಡು 38 ರನ್ ಬಾರಿಸಿದ್ದು, ವಿರಾಟ್ ಕೊಹ್ಲಿ 9 ಹಾಗೂ ಹಾರ್ದಿಕ್ ಪಾಂಡ್ಯ 3 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

T20 World Cup: ಆರ್ಶದೀಪ್, ಪಾಂಡ್ಯ ಮಾರಕ ದಾಳಿ, ಟೀಂ ಇಂಡಿಯಾಗೆ ಸ್ಪರ್ಧಾತ್ಮಕ ಗುರಿ..!

ಪಾಕಿಸ್ತಾನ ಕೂಡಾ ಆರಂಭಿಕ ಆಘಾತ ಅನುಭವಿಸಿತ್ತು: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಪಾಕಿಸ್ತಾನ ತಂಡ ಕೂಡಾ ಆರಂಭಿಕ ಆಘಾತಕ ಅನುಭವಿಸಿತ್ತು. ಪಾಕಿಸ್ತಾನ ತಂಡದ ಇಬ್ಬರು ಸ್ಟಾರ್ ಆಟಗಾರರಾದ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು. ಪಾಕಿಸ್ತಾನ ತಂಡವು 15 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರನ್ನು ಕಳೆದುಕೊಂಡಿತ್ತು. 

ಮೆಲ್ಬರ್ನ್‌ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ತಂಡದ ಪರ ಇಫ್ತಿಕಾರ್ ಅಹಮ್ಮದ್(51), ಶಾನ್ ಮಸೂದ್(52*) ಹಾಗೂ ಶಾಹೀನ್ ಅಫ್ರಿದಿ(16) ಹೊರತುಪಡಿಸಿ ಪಾಕಿಸ್ತಾನದ ಯಾವೊಬ್ಬ ಬ್ಯಾಟರ್‌ ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಭಾರತದ ಶಿಸ್ತುಬದ್ದ ದಾಳಿಗೆ ಪಾಕ್ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರು.