Asianet Suvarna News Asianet Suvarna News

T20 World Cup 2021: ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ!

  • ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ರೋಚಕ ಹೋರಾಟ
  • T20 World Cup ಟೂರ್ನಿಯಲ್ಲಿ ನ್ಯೂಜಿಲೆಂಡ್‌ಗೆ ಮೊದಲ ಪಂದ್ಯ
  • ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ
T20 World Cup 2021 pakistan wins toss and chose bowl first against New zealand in Sharjah ckm
Author
Bengaluru, First Published Oct 26, 2021, 7:10 PM IST

ಶಾರ್ಜಾ(ಅ.26):  T20 World Cup 2021 ಟೂರ್ನಿಯಲ್ಲಿ ಇಂದ ಮತ್ತೊಂದು ಹೈವೋಲ್ಟೇಜ್ ಪಂದ್ಯ. ಗೆಲುವಿನೊಂದಿಗೆ ಟೂರ್ನಿ ಆರಂಭಿಸಿರುವ ಪಾಕಿಸ್ತಾನ(Pakistan) ಹಾಗೂ ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಪಂದ್ಯ ಆಡುತ್ತಿರುವ ನ್ಯೂಜಿಲೆಂಡ್(New Zealand) ಮುಖಾಮುಖಿಯಾಗುತ್ತಿದೆ. ಈ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ಟಾಸ್(Toss) ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

 

ಭಾರತ ವಿರುದ್ಧ ಘೋಷಣೆ, ಪಾಕ್ ಗೆಲುವಿಗೆ ಸಂಭ್ರಮ; ಕಾಶ್ಮೀರ ವಿದ್ಯಾರ್ಥಿ, ರಾಜಸ್ಥಾನ ಶಿಕ್ಷಕಿ ಮೇಲೆ ಕೇಸ್!

ಇಷ್ಟು ವರ್ಷ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಬದ್ಧವೈರಿಗಳಾಗಿರಲಿಲ್ಲ. ಆದರೆ ಇತ್ತೀಚಗೆ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಆದರೆ ಮೊದಲ ಪಂದ್ಯಕ್ಕೆ ಕೆಲ ನಿಮಿಷಗಳಿರುವಾಗಲೇ ಭದ್ರತಾ ಕಾರಣದಿಂದ ಟೂರ್ನಿ ಮೊಟಕುಗೊಳಿಸಿ ತವರಿಗೆ ವಾಪಾಸ್ಸಾಗಿತ್ತು. ಇದು ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆ ತಂದಿತ್ತು. ಈ ಘಟನೆ ಬಳಿಕ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಬದ್ಧವೈರಿಗಳಾಗಿದೆ.

ಪಾಕ್ ವಿರುದ್ದ ಭಾರತ ಸೋಲಿಗೆ ಕೊಹ್ಲಿ ಮಾಡಿದ ಒಂದು ತಪ್ಪು ಕಾರಣ ಎಂದ ಇಂಜಮಾಮ್!

ಎರಡು ಬಲಿಷ್ಠ ತಂಡಗಳ ಹೋರಾಟಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಅದರಲ್ಲೂ ಪಾಕಿಸ್ತಾನ ಈ ವಿಶ್ವಕಪ್ ಟೂರ್ನಿಯಲ್ಲಿ ಹಿಂದೆಂದಿಗಿಂತ ಬಲಿಷ್ಠವಾಗಿದೆ. ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ 10 ವಿಕೆಟ್ ಭರ್ಜರಿ ಗೆಲುವು ಸಾಧಿಸಿದ ಪಾಕಿಸ್ತಾನ ಇತಿಹಾಸ ರಚಸಿದೆ. ಇದೇ ಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಭಾರತವನ್ನು ಬಗ್ಗು ಬಡಿದಿದೆ.  ಟಿ20 ಟೂರ್ನಿಯಲ್ಲಿ ಬಲಿಷ್ಠವಾಗಿರುವ ನ್ಯೂಜಿಲೆಂಡ್, ಪಾಕಿಸ್ತಾನ ಸವಾಲು ಎದುರಿಸಲು ಸಜ್ಜಾಗಿದೆ.

 

Pak ವಿರುದ್ಧ ಸೋತ ಭಾರತ: ನಿಂದನೆಗೀಡಾದ ಶಮಿ ಬೆಂಬಲಕ್ಕೆ ಬಂದ ಕ್ರಿಕೆಟ್‌ ದೇವರು!

UAEನಲ್ಲಿ 12 ಗೆಲುವಿನ ಮೂಲಕ ಪಾಕಿಸ್ತಾನ ಗೆಲುವಿನ ಅಜೇಯ ಓಟ ಮುಂದುವರಿಸಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ಈ ಓಟಕ್ಕೆ ಬ್ರೇಕ್ ಬೀಳಲಿದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಈ ಹೋರಾಟದಲ್ಲಿ ಭಾರತದ ಅಜೇಯ ಓಟ ದಾಖಲೆ ಮುರಿದಿದೆ. ಇದೀಗ ನ್ಯೂಜಿಂಡ್ ತಂಡ ಪಾಕಿಸ್ತಾನ ದಾಖಲೆ ಮುರಿಯುವ ವಿಶ್ವಾಸದಲ್ಲಿದೆ.

ಉತ್ತಮ ರನ್‌ರೇಟ್ ಹೊಂದಿರುವ ಪಾಕಿಸ್ತಾನ, ನ್ಯೂಜಿಲೆಂಡ್ ವಿರುದ್ದ ಅದೇ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಹೀಗಾಗಿ ಇಂದು ರೋಚಕ ಹೋರಾಟ ಏರ್ಪಡಲಿದೆ. ನ್ಯೂಜಿಲೆಂಡ್ ತಂಡಕ್ಕೆ ಇಂಜುರಿ ಸಮಸ್ಯೆ ಕಾಡುತ್ತಿದೆ. ಆದರೆ ಚುಟುಕು ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಬಲಿಷ್ಠ ತಂಡ ಅನ್ನೋದರಲ್ಲಿ ಎರಡು ಮಾತಿಲ್ಲ.

ಯುಎನಲ್ಲಿ ಪಾಕಿಸ್ತಾನ ವಿರುದ್ದ ಆಡಿದ 7 ಟಿ20 ಪಂದ್ಯದಲ್ಲಿ 6ರಲ್ಲಿ ನ್ಯೂಜಿಲೆಂಡ್ ಸೋಲು ಕಂಡಿದೆ. ಇನ್ನು ಇವರಿಬ್ಬರು ಟಿ20 ಕ್ರಿಕೆಟ್‌ನಲ್ಲಿ 24 ಬಾರಿ ಮುಖಾಮುಖಿಯಾಗಿದ್ದಾರೆ. ಇದರಲ್ಲಿ 14 ಬಾರಿ ಪಾಕಿಸ್ತಾನ ಗೆಲುವು ಸಾಧಿಸಿದರೆ, 10 ಬಾರಿ ನ್ಯೂಜಿಲೆಂಡ್ ಗೆಲುವು ಸಾಧಿಸಿದೆ.

ಇಂಜುರಿಗೆ ತುತ್ತಾಗಿರುವ ಲ್ಯೂಕಿ ಫರ್ಗ್ಯೂಸನ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದೀಗ ಫರ್ಗ್ಯೂಸನ್ ಬದಲು ಆ್ಯಡಮ್ ಮಿಲ್ನೆ ತಂಡ ಸೇರಿಸಿಕೊಳ್ಳಲು ಐಸಿಸಿಗೆ ನ್ಯೂಜಿಲೆಂಜ್ ಮನವಿ ಮಾಡಿದೆ.

Follow Us:
Download App:
  • android
  • ios