Chris Gayle: ಅಭಿಮಾನಿಗೆ ಗ್ಲೌವ್ಸ್ ಹಂಚಿ ವಿದಾಯ ಖಚಿತಪಡಿಸಿದ್ರಾ ಯುನಿವರ್ಸ್ ಬಾಸ್?
- ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಗೇಲ್ ಕೊನೆಯ ಪಂದ್ಯ?
- ಆಸಿಸ್ ವಿರುದ್ಧ 15 ರನ್ ಸಿಡಿಸಿ ಗೇಲ್ ಔಟ್
- ಪೆವಿಲಿಯನ್‌ಗೆ ವಾಪಾಸ್ಸಾದ ಗೇಲ್‌ನಿಂದ ವಿದಾಯದ ಸೂಚನೆ!
ಅಬು ಧಾಬಿ(ನ.6): ಯುನಿವರ್ಸ್ ಬಾಸ್ ಕ್ರಿಸ್ ಗೇಲ್(chris gayle) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ರಾ? ಇದೀಗ ಈ ಚರ್ಚೆ ಜೋರಾಗಿದೆ. ಆಸ್ಟ್ರೇಲಿಯಾ ವಿರುದ್ಧ ಕ್ರಿಸ್ ಗೇಲ್ ಕೊನೆಯಬಾರಿಗೆ ಮೈದಾನಕ್ಕಿಳಿದಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ. ಇದರ ನಡುವೆ ಗೇಲ್ ತಮ್ಮ ಕ್ರಿಕೆಟ್ ಗ್ಲೌವ್ಸ್ ಅಭಿಮಾನಿಗಳಿಗೆ ನೀಡಿದ್ದಾರೆ. ಇದು ಗೇಲ್ ವಿದಾಯಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
T20 World Cup: Aus vs WI ಮಾರ್ಶ್, ವಾರ್ನರ್ ಅಬ್ಬರ, ಆಸೀಸ್‌ಗೆ ಸುಲಭ ಜಯ
ಆಸ್ಟ್ರೇಲಿಯಾ(Austrlia) ವಿರುದ್ದದ ಪಂದ್ಯದಲ್ಲಿ ಕ್ರಿಸ್ ಗೇಲ್ ಕೇವಲ 15 ರನ್ ಸಿಡಿಸಿ ಔಟಾದರು. 2 ಸಿಕ್ಸರ್ ಸಿಡಿಸಿ ಅಬ್ಬರಿಸಿದರೂ ಗೇಲ್ ಬೃಹತ್ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ. 15 ರನ್ ಸಿಡಿಸಿ ಔಟಾದ ಬಳಿಕ ಪೆವಿಲಿಯನ್‌ನತ್ತ ತೆರಳಿದ ಗೇಲ್, ತಾವು ವಿದಾಯ(Retire) ಹೇಳುತ್ತಿರುವ ರೀತಿಯಲ್ಲಿ ಅಭಿಮಾನಿಗಳತ್ತ ಬ್ಯಾಟ್ ಬೀಸಿದ್ದಾರೆ.
ಪಂದ್ಯದ ಬಳಿಕ ಕ್ರಿಸ್ ಗೇಲ್ ತಮ್ಮ ಕ್ರಿಕೆಟ್ ಗ್ಲೌವ್ಸ್‌ನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಗ್ಲೌವ್ಸ್ ಪಡೆದ ಅಭಿಮಾನಿ ಸಂತಸದಲ್ಲಿ ತೇಲಾಡಿದ್ದಾರೆ. ಟಿ20 ಕ್ರಿಕೆಟ್ ಬಾಸ್ ಎಂದೇ ಗುರುತಿಸಿಕೊಂಡಿರುವ ಗೇಲ್ ಗ್ಲೌವ್ಸ್(gloves) ಪಡೆದು ಸಂತಸ ವ್ಯಕ್ತಪಡಿಸಿದ್ದಾರೆ.
T20 World Cupನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರು!
ಆಸ್ಟ್ರೇಲಿಯಾ ವಿರುದ್ಧ ಗೇಲ್ ಕೊನೆಯ ಪಂದ್ಯ ಆಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಗೇಲ್ ಲಭ್ಯವಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಕ್ರಿಸ್ ಗೇಲ್ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಬಳಿಕ ಗೇಲ್ ನಡತೆ ವಿದಾಯದ ಮಾತುಗಳನ್ನು ಪುಷ್ಠೀಕರಿಸಿದೆ.
ಗೇಲ್ ನಿರ್ಗಮನ ವಿಂಡೀಸ್ ತಂಡದಲ್ಲಿ ಆತಂಕ ತಂದಿತ್ತು. ಇತ್ತ ಪೆವಿಲಿಯನ್‌ಗೆ ಆಗಮಿಸಿದ ಗೇಲ್‌ಗೆ ಅಭಿಮಾನಿಗಳು, ವಿಂಡೀಸ್ ತಂಡದ ಸಹ ಆಟಗಾರರು ಎದ್ದು ನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ. ಗೇಲ್ ತಬ್ಬಿಕೊಂಡ ಮತ್ತೊರ್ವ ಸಹ ಆಟಗಾರ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಡ್ವೇನ್ ಬ್ರಾವೋ ಶುಭಾಶಯ ಹೇಳಿದ್ದಾರೆ.
IPL 2021: ಪಂಜಾಬ್‌ಗೆ ಗಾಯದ ಮೇಲೆ ಬರೆ, ಇದ್ದಕ್ಕಿದ್ದಂತೆಯೇ ತಂಡದಿಂದ ಹೊರನಡೆದ ಕ್ರಿಸ್ ಗೇಲ್..!
ಬ್ರಾವೋ ಆಸ್ಟ್ರೇಲಿಯಾ ವಿರುದ್ಧ ಪಂದ್ಯಕ್ಕೂ ಮುನ್ನವೇ ವಿದಾಯ ಘೋಷಿಸಿದ್ದರು. ಇತ್ತ ಗೇಲ್ ವಿದಾಯ ಹಲವು ಭಾರಿ ಚರ್ಚೆಯಾಗಿದೆ. ವಿದಾಯದ ಪರೋಕ್ಷ ಸೂಚನೆಗಳನ್ನು ನೀಡಿದ್ದ ಗೇಲ್, ಹಲವು ಬಾರಿ ಅಭಿಮಾನಿಗಳಿಗೆ ಶಾಕ್ ಜೊತೆ ಅಚ್ಚರಿ ನೀಡಿದ್ದಾರೆ.
ಕ್ರಿಸ್ ಗೇಲ್ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ 79 ಪಂದ್ಯಗಳಿಂದ 1,899 ರನ್ ಸಿಡಿಸಿದ್ದಾರೆ. 2 ಶತಕ ಹಾಗೂ 14 ಅರ್ಧಶತಕ ಸಿಡಿಸಿದ್ದಾರೆ. 117 ರನ್ ಗೇಲ್ ಬೆಸ್ಟ್ ಸ್ಕೋರ್. ಟಿ20 ಕ್ರಿಕೆಟ್‌ನಲ್ಲಿ ಗೇಲ್ 20 ವಿಕೆಟ್ ಕಬಳಿಸಿದ್ದಾರೆ.
ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಅಭಿಮಾನಿಗಳ ಮನದಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಕ್ರಿಸ್ ಗೇಲ್ ಸಿಕ್ಸರ್ ಮೂಲಕವೇ ಅಬ್ಬರಿಸುವ ಕ್ರಿಕೆಟಿಗ. ಇದೇ ಕಾರಣಕ್ಕೆ ಯನಿವರ್ಸ್ ಬಾಸ್ ಎಂದು ಪ್ರಖ್ಯಾತಿ ಪಡೆದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರೂ ಕ್ರಿಸ್ ಗೇಲ್ ಐಪಿಎಲ್ ಸೇರಿದಂತೆ ಲೀಗ್ ಟೂರ್ನಿಗಳಲ್ಲಿ ಮುಂದುವರಿಯುವ ಸಾಧ್ಯತೆ ಹೆಚ್ಚು. ಐಪಿಎಲ್ ಟೂರ್ನಿಯಲ್ಲಿ ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಗೇಲ್, ಮುಂದಿನ ಆವೃತ್ತಿಯಲ್ಲಿ ಮತ್ತೆ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ 142 ಪಂದ್ಯ ಆಡಿರುವ ಕ್ರಿಸ್ ಗೇಲ್, 4965 ರನ್ ಸಿಡಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ 6 ಶತಕ ಹಾಗೂ 31 ಅರ್ಧಶತಕ ಸಿಡಿಸಿದ್ದಾರೆ. 175 ರನ್ ಗೇಲ್ ಬೆಸ್ಟ್ ಸ್ಕೋರ್.
ಇದೀಗ ಕ್ರಿಸ್ ಗೇಲ್ ವಿದಾಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ. ಈ ರೀತಿ ಹಲವು ಬಾರಿ ಟ್ರೆಂಡ್ ಆಗಿದೆ. ಎಲ್ಲಾ ಸಂದರ್ಭದಲ್ಲಿ ಗೇಲ್ ಮತ್ತೆ ಬ್ಯಾಟ್ ಹಿಡಿದು ಮೈದಾನಕ್ಕಿಳಿದು ಅಬ್ಬರಿಸುವ ಮೂಲಕ ಅಬಿಮಾನಿಗಳಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ