Asianet Suvarna News Asianet Suvarna News

T20 World Cup: ಸತತ 5ನೇ ಗೆಲುವಿನ ಕಾತರದಲ್ಲಿ ಪಾಕಿಸ್ತಾನ!

*ನಾಲ್ಕರಲ್ಲೂ ಸೋತಿರುವ ಸ್ಕಾಟ್ಲೆಂಡ್‌ಗೆ ಮೊದಲ ಜಯದ ಗುರಿ
*ಸತತ 5ನೇ ಗೆಲುವಿನ ನಿರೀಕ್ಷೆಯಲ್ಲಿ ಪಾಕಿಸ್ತಾನ
*ಅರ್ಹತಾ ಸುತ್ತಿನಲ್ಲಿ ಮೂರೂ ಪಂದ್ಯಗಳಲ್ಲಿ ಗೆದ್ದಿದ್ದ ಸ್ಕಾಟ್ಲೆಂಡ್‌ 
 

Pakistan Vs Scotland match in ICC T20 World Cup in Sharjah
Author
Bengaluru, First Published Nov 7, 2021, 6:51 AM IST

ಶಾರ್ಜಾ(ನ. 7) : ಮಾಜಿ ಚಾಂಪಿಯನ್‌ ಪಾಕಿಸ್ತಾನ (Pakistan) ತಂಡ ಟಿ20 ವಿಶ್ವಕಪ್‌ನ (T20 World Cup) ಪ್ರಧಾನ ಸುತ್ತಿನಲ್ಲಿ ಅಜೇಯ ತಂಡವಾಗಿ ಸೆಮಿಫೈನಲ್‌ ಪ್ರವೇಶಿಸಲು ಕಾತರದಲ್ಲಿದ್ದು, ಭಾನುವಾರ ಸ್ಕಾಟ್ಲೆಂಡ್‌ (Scotland) ವಿರುದ್ಧ ಸ್ಪರ್ಧಿಸಲಿದೆ. ಈಗಾಗಲೇ ತಾನಾಡಿದ 4 ಪಂದ್ಯಗಳಲ್ಲೂ ಗೆದ್ದಿರುವ ಪಾಕ್‌, ಗುಂಪು 1ರಲ್ಲಿ ಮೊದಲ ತಂಡವಾಗಿ ಸೆಮೀಸ್‌ ತಲುಪಿದೆ. ಸ್ಕಾಟ್ಲೆಂಡ್‌ ನಾಲ್ಕೂ ಪಂದ್ಯಗಳಲ್ಲಿ ಸೋತು ರೇಸ್‌ನಿಂದ ಈಗಾಗಲೇ ಹೊರಬಿದ್ದಿದೆ. ಹೀಗಾಗಿ ಇದು ಔಪಚಾರಿಕ ಪಂದ್ಯವಾಗಿದ್ದು, ಅರ್ಹತಾ ಸುತ್ತಿನಲ್ಲಿ ಮೂರೂ ಪಂದ್ಯಗಳಲ್ಲಿ ಗೆದ್ದು ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದ ಸ್ಕಾಟ್ಲೆಂಡ್‌ ಸೂಪರ್‌-12ರ ಹಂತದಲ್ಲಿ ಸತತ 5ನೇ ಸೋಲು ತಪ್ಪಿಸಲು ಹೋರಾಡಬೇಕಿದೆ.

ಸಂಭವನೀಯ ಆಟಗಾರರ ಪಟ್ಟಿ

ಸ್ಕಾಟ್ಲೆಂಡ್: ಜಾರ್ಜ್ ಮುನ್ಸೆ, ಕೈಲ್ ಕೋಟ್ಜರ್ (Kyle Coetzer) (ನಾಯಕ), ಮ್ಯಾಥ್ಯೂ ಕ್ರಾಸ್ (Matthew Cross), ರಿಚಿ ಬೆರಿಂಗ್ಟನ್, ಕ್ಯಾಲಮ್ ಮ್ಯಾಕ್ಲಿಯೋಡ್, ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಅಲಾಸ್ಡೈರ್ ಇವಾನ್ಸ್, ಸಫ್ಯಾನ್ ಷರೀಫ್, ಬ್ರಾಡ್ಲಿ ವೀಲ್

Chris Gayle: ಅಭಿಮಾನಿಗೆ ಗ್ಲೌವ್ಸ್ ಹಂಚಿ ವಿದಾಯ ಖಚಿತಪಡಿಸಿದ್ರಾ ಯುನಿವರ್ಸ್ ಬಾಸ್?

ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್ (Mohammad Rizwan), ಬಾಬರ್ ಅಜಮ್ (Babar Azamc) (ನಾಯಕ), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಶಾದಾಬ್ ಖಾನ್, ಇಮಾದ್ ವಾಸಿಮ್, ಹಸನ್ ಅಲಿ, ಹಾರಿಸ್ ರೌಫ್, ಶಾಹೀನ್ ಅಫ್ರಿದಿ

ಪಿಚ್ ರಿಪೋರ್ಟ್‌:

ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್: 145 (T20 ವಿಶ್ವಕಪ್ 2021ನಲ್ಲಿ ಶಾರ್ಜಾದಲ್ಲಿ 9 T20 ಪಂದ್ಯಗಳು )
ಚೇಸಿಂಗ್ ತಂಡಗಳ ದಾಖಲೆ: ಗೆಲುವು – 5, ಸೋಲು – 4, ಡ್ರಾ – 0

ಇಂಗ್ಲೆಂಡ್ ಮಣಿಸಿದರೂ ಟೂರ್ನಿಯಿಂದ ಹೊರಬಿದ್ದ ಸೌತ್ ಆಫ್ರಿಕಾ!

ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಸೌತ್ ಆಫ್ರಿಕಾ 10 ರನ್ ರೋಚಕ ಗೆಲುವು ಸಾಧಿಸಿದೆ. ಆದರೆ ಸೌತ್ ಆಫ್ರಿಕಾ T20 World Cup 2021 ಟೂರ್ನಿಯಿಂದ ಹೊರಬಿದ್ದಿದೆ. ಇಂಗ್ಲೆಂಡ್ 132 ರನ್ ಸಿಡಿಸುತ್ತಿದ್ದಂತೆ ಸೌತ್ ಆಫ್ರಿಕಾ ತಂಡ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿತ್ತು. ಇಷ್ಟೇ ಅಲ್ಲ ಆಸ್ಟ್ರೇಲಿಯಾ ಅಧಿಕೃತವಾಗಿ ಸೆಮಿಫೈನಲ್ ಸುತ್ತಿಗೆ ಪ್ರವೇಶ ಪಡೆಯಿತು. 

Aus vs WI ಮಾರ್ಶ್‌, ವಾರ್ನರ್ ಅಬ್ಬರ, ಆಸೀಸ್‌ಗೆ ಸುಲಭ ಜಯ

ಆರಂಭಿಕ ಬ್ಯಾಟರ್‌ ಡೇವಿಡ್ ವಾರ್ನರ್‌ (David Warner) (89*) ಹಾಗೂ ಮಿಚೆಲ್ ಮಾರ್ಶ್‌ (Mitchell Marsh) (53) ಸಿಡಿಲಬ್ಬದರ ಅರ್ಧಶತಕದ ನೆರವಿನಿಂದ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಎದುರು ಆಸ್ಟ್ರೇಲಿಯಾ ತಂಡವು 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಪಂದ್ಯ ಮುಕ್ತಾಯಕ್ಕೆ ಇನ್ನೂ 22 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದ ಆಸೀಸ್‌ ತಂಡವು ನೆಟ್‌ ರನ್‌ರೇಟ್‌ ಮತ್ತಷ್ಟು ಉತ್ತಮ ಪಡಿಸಿಕೊಂಡಿದ್ದು, ಬಹುತೇಕ ಸೆಮೀಸ್‌ಗೆ ತನ್ನ ಸ್ಥಾನವನ್ನು ಖಚಿತ ಪಡಿಸಿಕೊಂಡಿದೆ.

ಅಂಕಪಟ್ಟಿ

ಸೂಪರ್‌-12 ಗ್ರೂಪ್‌ 1 ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಲಾ ನಾಲ್ಕು ಪಂದ್ಯಗಳನ್ನು ಗೆಲ್ಲುವುದರ ಮೂಲಕ ಅಂಕಪಟ್ಟಿಯಲ್ಲಿ ಕ್ರಮವಾಗಿ ಮೊದಲನೇ, ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಎರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಶ್ರೀ ಲಂಕಾ ನಾಲ್ಕನೇ ಸ್ಥಾನದಲ್ಲಿದೆ.  ಕೇವಲ ಒಂದು ಗೆಲುವನ್ನು ಕಂಡಿರುವ ವೆಸ್ಟ್‌ ಇಂಡೀಸ್ ಐದನೇ ಸ್ಥಾನದಲ್ಲಿದ್ದರೆ ಯಾವುದೇ ಗೆಲುವು ಕಾಣದ ಬಾಂಗ್ಲಾದೇಶ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

IPL 2022: ಹರಾಜಿಗೂ ಮುನ್ನ CSK ಈ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಬಹುದು..!

ಸೂಪರ್‌-12 ಗ್ರೂಪ್‌ 2 ರಲ್ಲಿ ಪಾಕಿಸ್ತಾನ ನಾಲ್ಕು ಪಂದ್ಯಗಳನ್ನು ಗೆಲ್ಲುವುದರ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಮೂರು ಪಂದ್ಯಗಳನ್ನು ಗೆದ್ದಿರುವ ನ್ಯೂಜೆಲೆಂಡ್‌ ಎರಡನೇ ಸ್ಥಾನದಲ್ಲಿದೆ. ಭಾರತ ಹಾಗೂ ಅಫ್ಘಾನಿಸ್ತಾನ ತಲಾ ಎರಡು ಪಂದ್ಯಗಳಲ್ಲಿ ಗೆದ್ದು ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಕೇವಲ ಒಂದು ಗೆಲುವನ್ನು ಕಂಡಿರುವ ನಮಿಬಿಯಾ ಐದನೇ ಸ್ಥಾನದಲ್ಲಿದ್ದರೆ ಯಾವುದೇ ಗೆಲುವು ಕಾಣದ ಸ್ಕಾಟ್ಲೆಂಡ್‌ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

Follow Us:
Download App:
  • android
  • ios