Asianet Suvarna News Asianet Suvarna News

T20 World Cup 2021: ಭಾರತೀಯರ ಪ್ರಾರ್ಥನೆಯಂತೆ ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಆಫ್ಘಾನಿಸ್ತಾನ!

  • ನ್ಯೂಜಿಲೆಂಡ್ ಹಾಗೂ ಆಫ್ಘಾನಿಸ್ತಾನ ನಡುವಿನ ರೋಚಕ ಪಂದ್ಯ
  • ಟಾಸ್ ಗೆದ್ದ ಆಫ್ಘಾನಿಸ್ತಾನ ಬ್ಯಾಟಿಂಗ್ ಆಯ್ಕೆ
  • ಆಫ್ಘಾನಿಸ್ತಾನ ಗೆಲುವಿಗೆ ಭಾರತೀಯರ ಪಾರ್ಥನೆ
T20 World Cup 2021 NZ vs AFG Afghanistan won toss chose bat first against New zealand ckm
Author
Bengaluru, First Published Nov 7, 2021, 3:13 PM IST

ಅಬು ಧಾಬಿ(ನ.07): ನ್ಯೂಜಿಲೆಂಡ್(New zealand) ಹಾಗೂ ಆಫ್ಘಾನಿಸ್ತಾನ(Afghanistan) ನಡುವಿನ ಪಂದ್ಯ ಟೀಂ ಇಂಡಿಯಾಗೂ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಟಾಸ್(Toss) ಗೆದ್ದಿರುವ ಆಫ್ಘಾನಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆಫ್ಘಾನಿಸ್ತಾನ ತಂಡದಲ್ಲಿಒಂದು ಬದಲಾವಣೆ ಮಾಡಲಾಗಿದೆ. ಮುಜೀಬ್ ಯುಆರ್ ರೆಹಮಾನ್ ತಂಡ ಸೇರಿಕೊಂಡಿದ್ದಾರೆ. ಇತ್ತ ನ್ಯೂಜಿಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

T20 World Cup - AFG vs NZ: ಅಫ್ಘಾನಿಸ್ತಾನ ಕೈಲಿ ಟೀಂ ಇಂಡಿಯಾ ಭವಿಷ್ಯ!

ನ್ಯೂಜಿಲೆಂಡ್ ತಂಡ:
ಮಾರ್ಟಿನ್ ಗಪ್ಟಿಲ್, ಡರಿಲ್ ಮಿಚೆಲ್, ಕೇನ್ ವಿಲಿಯಮ್ಸನ್(ನಾಯಕ), ಡಿವೊನ್ ಕೊನ್ವೆ, ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆ್ಯಮ್ ಮಿಲ್ನೆ, ಟಿಮ್ ಸೌಥಿ, ಐಶ್ ಸೋಧಿ, ಟ್ರೆಂಟ್ ಬೋಲ್ಟ್

ಆಫ್ಘಾನಿಸ್ತಾನ ತಂಡ:
ಹಜ್ರತುಲ್ಲಾ ಜೈಜೈ, ಮೊಹಮ್ಮದ್ ಶೆಹಜಾದ್, ರಹಮಾನುಲ್ಲಾ ಗುರ್ಬಾಜ್, ನಜೀಬುಲ್ಲಾ ಜರ್ದಾನ್, ಗುಲ್ಬಾದಿನ್ ನೈಬ್, ಮೊಹಮ್ದ್ ನಬಿ(ನಾಯಕ), ಕರಿಮ್ ಜನತ್, ರಶೀದ್ ಖಾನ್, ನವೀನ್ ಉಲ್ ಹಕ್, ಹಮೀದ್ ಹಸನ್, ಮುಜೀಬ್ ಯುಆರ್ ರೆಹಮಾನ್

ಈ ಪಂದ್ಯದಲ್ಲಿ ನ್ಯೂಜಿಂಡ್ ಗೆಲುವು ಸಾಧಿಸಿದರೆ ನೇರವಾಗಿ ಸೆಮಿಫೈನಲ್(Semifinal) ಪ್ರವೇಶಿಸಲಿದೆ. ಆದರೆ ಟೀಂ ಇಂಡಿಯಾ(Team India) ಸೆಮಿಫೈನಲ್ ಕನಸು ಛಿದ್ರವಾಗಲಿದೆ. ಕಾರಣ ಭಾರತ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಟೀಂ ಇಂಡಿಯಾ ಅಭಿಮಾನಿಗಳು(Fans) ಆಫ್ಘಾನಿಸ್ತಾನ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ.

T20 World Cup 2021: ಇಂಗ್ಲೆಂಡ್ ಮಣಿಸಿದರೂ ಟೂರ್ನಿಯಿಂದ ಹೊರಬಿದ್ದ ಸೌತ್ ಆಫ್ರಿಕಾ!

ಪಂದ್ಯದಲ್ಲಿ ಗೆಲುವಿಗಾಗಿ ನಾವು ಶ್ರಮಿಸುತ್ತೇವೆ.  ಪ್ರತಿ ಪಂದ್ಯ ನಮಗೆ ಮುಖ್ಯ. ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ರನ್ ಸಿಡಿಸುವ ವಿಶ್ವಾಸದಲ್ಲಿದ್ದೇವೆ. ಈ ಮೂಲಕ ನ್ಯೂಜಿಲೆಂಡ್ ತಂಡದ ಮೇಲೆ ಒತ್ತಡ ಹೇರಿ ಗೆಲುವು ಸಾಧಿಸಲು ಪ್ರಯತ್ನಿಸಲಿದ್ದೇವೆ ಎಂದು ಆಫ್ಘಾನಿಸ್ತಾನ ನಾಯಕ ಮೊಹಮ್ಮದ್ ನಬಿ ಹೇಳಿದ್ದಾರೆ. ನ್ಯೂಜಿಲೆಂಡ್ ಕೂಡ ಮೊದಲು ಬ್ಯಾಟಿಂಗ್ ಮಾಡಲು ಬಯಸಿತ್ತು ಎಂದು ಕೇನ್ ವಿಲಿಯಮ್ಸನ್ ಹೇಳಿದ್ದಾರೆ. ಈ ಮಾತು ಟೀಂ ಇಂಡಿಯಾ ಅಭಿಮಾನಿಗಳ ನೆಮ್ಮೆದಿಗೆ ಕಾರಣವಾಗಿದೆ.

ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯಕ್ಕ ಬಳಲಾಗಿವ ಪಿಚನ್ನೇ ಇಂದಿನ ಪಂದ್ಯಕ್ಕೆ ಬಳಸಲಾಗಿದೆ. ಸ್ಪಿನ್ನರ್‌ಗಳಿಗೆ ಈ ಪಿಚ್ ಕೊಂಚ ನೆರವು ನೀಡುವಂತೆ ಕಾಣುತ್ತಿದೆ. ಹೀಗಾಗಿ ಆಫ್ಘಾನಿಸ್ತಾನ ಉತ್ತಮ ಸ್ಪಿನ್ ಆ್ಯಟಾಕ್ ಹೊಂದಿದ್ದು, ನ್ಯೂಜಿಲೆಂಡ್‌ಗೆ ಕಠಿಣ ಸವಾಲು ನೀಡಲಿದೆ.

2016ರ ಬಳಿಕ UAEನಲ್ಲಿ ಆಫ್ಘಾನಿಸ್ತಾನ ಆಡಿದ 9 ಪಂದ್ಯಗಳಲ್ಲಿ 8 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಗೆಲುವು ಸಾಧಿಸಿದೆ. ಇದೀಗ ನ್ಯೂಜಿಲೆಂಡ್ ವಿರುದ್ಧ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆಫ್ಘಾನಿಸ್ತಾನದ ಅಂಕಿ ಅಂಶ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಸಮಾಧಾನ ತಂದಿದೆ.

ಅಬು ಧಾಬಿ ಮೈದಾನದಲ್ಲಿ ಕಳೆದ 6 ಪಂದ್ಯದಲ್ಲಿ 4 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ಎಲ್ಲಾ ಅಂಕಿ ಅಂಶ ಆಫ್ಘಾನಿಸ್ತಾನ ಪರವಾಗಿದೆ. ಆದರೆ ನ್ಯೂಜಿಲೆಂಡ್ ವಿರುದ್ಧ ಗೆಲುವು ಸುಲಭವಲ್ಲ. 

ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಆಡಿರುವ 4 ಪಂದ್ಯದಲ್ಲಿ 3 ಗೆಲುವು ಸಾಧಿಸಿದೆ. ಪಾಕಿಸ್ತಾನ ವಿರುದ್ಧ ಸೋಲು ಕಂಡಿದೆ. ಇಂದಿನ ಗೆಲುವು ನ್ಯೂಜಿಲೆಂಡ್ ತಂಡದ ಸೆಮಿಫೈನಲ್ ಪ್ರವೇಶ ಖಚಿತಪಡಿಸಲಿದೆ. ಟೀಂ ಇಂಡಿಯಾ 4 ಪಂದ್ಯದಲ್ಲಿ 2 ಗೆಲುವು ಸಾಧಿಸಿ 3ನೇ ಸ್ಥಾನದಲ್ಲಿದೆ. ಹೀಗಾಗಿ ಟೀಂ ಇಂಡಿಯಾ ಅಭಿಮಾನಿಗಳು ಆಫ್ಘಾನಿಸ್ತಾನ ಗೆಲುವಿಗೆ ಪಾರ್ಥಿಸುತ್ತಿದ್ದಾರೆ.

ಆಫ್ಘಾನಿಸ್ತಾನ 4ನೇ ಸ್ಥಾನದಲ್ಲಿದೆ. ನಮಿಬಿಯಾ ಹಾಗೂ ಸ್ಕಾಟ್‌ಲೆಂಡ್ 5 ಮತ್ತು 6ನೇ ಸ್ಥಾನದಲ್ಲಿದೆ. ಮೊದಲ ಗುಂಪಿನಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಎರಡನೇ ಗುಂಪಿನಲ್ಲಿ  ಪಾಕಿಸ್ತಾನ ಮಾತ್ರ ಸೆಮಿಫೈನಲ್ ಪ್ರವೇಶ ಖಚಿತಪಡಿಸಿದೆ.

Follow Us:
Download App:
  • android
  • ios