Asianet Suvarna News Asianet Suvarna News

T20 World cup 2021; ನ್ಯೂಜಿಲೆಂಡ್ ಮಣಿಸಿದ ಆಸ್ಟ್ರೇಲಿಯಾ ಟಿ20 ಚಾಂಪಿಯನ್!

  • ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಆಘಾತ
  • ಕಿವಿಸ್ ಮಣಿಸಿ ಚೊಚ್ಚಲ ಟಿ20 ಟ್ರೋಫಿ ಗೆದ್ದ ಆಸ್ಟ್ರೇಲಿಯಾ
  • ಆಸ್ಟ್ರೇಲಿಯಾಗೆ 8 ವಿಕೆಟ್ ಭರ್ಜರಿ ಗೆಲುವು
T20 World cup 2021 final australia beat new zealand by 8 wickets and clich t20 world cup title for first time ckm
Author
Bengaluru, First Published Nov 14, 2021, 11:02 PM IST

ದುಬೈ(ನ.14): T20 World cup 2021 ವಿಶ್ವಕಪ್ ಟೂರ್ನಿ ಚಾಂಪಿಯನ್ ಕಿರೀಟ ಆಸ್ಟ್ರೇಲಿಯಾ ಪಾಲಾಗಿದೆ.  ಈ ಮೂಲಕ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ ಗೆಲುವು ದಾಖಲಿಸಿದೆ ಆಸ್ಟ್ರೇಲಿಯಾ, ಹೊಸ ಇತಿಹಾಸ ರಚಿಸಿದೆ.

ಟಿ20 ವಿಶ್ವಕಪ್ ಚಾಂಪಿಯನ್ಸ್:
2007, ಭಾರತ
2009, ಪಾಕಿಸ್ತಾನ
2010, ಇಂಗ್ಲೆಂಡ್
2012, ವೆಸ್ಟ್ ಇಂಡೀಸ್
20214, ಶ್ರೀಲಂಕಾ
2016,ವೆಸ್ಟ್ ಇಂಡೀಸ್
2021, ಆಸ್ಟ್ರೇಲಿಯಾ

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡಕ್ಕೆ ನಾಯಕ ಕೇನ್ ವಿಲಿಯಮ್ಸ್ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವಿಲಿಯಮ್ಸನ್ 85 ರನ್ ಸಿಡಿಸಿದರು. ಈ ಮೂಲಕ ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 172 ರನ್ ಸಿಡಿಸಿತು. 

173 ರನ್ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾ ಆರಂಭದಲ್ಲೇ ನಾಯಕ ಆ್ಯರೋನ್ ಫಿಂಚ್ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಫಿಂಚ್ ಕೇವಲ 5 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಡೇವಿಡ್ ವಾರ್ನರ್ ಹಾಗೂ ಮೆಚೆಲ್ ಮಾರ್ಶ್ ಹೋರಾಟದಿಂದ ಆಸ್ಟ್ರೇಲಿಯಾ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು. 

ಅಬ್ಬರಿಸಿದ ಡೇವಿಡ್ ವಾರ್ನರ್ 38 ಎಸೆತದಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ 53 ರನ್ ಸಿಡಿಸಿ ಔಟಾದರು. ವಾರ್ನರ್ ಬಳಿಕ ಮಿಚೆಲ್ ಮಾರ್ಶ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರ ಆರಂಭಗೊಂಡಿತು. ಕೇವಲ 31 ಎಸೆತದಲ್ಲಿ ಮಾರ್ಶ್ ಹಾಫ್ ಸೆಂಚುರಿ ಪೂರೈಸಿದರು. ಈ ಮೂಲಕ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅತೀ ಕಡಿಮೆ ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು.

ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅತೀ ಕಡಿಮೆ ಎಸೆತದಲ್ಲಿ ಅರ್ಧಶತಕ;
31 ಎಸೆತ, ಮಿಚೆಲ್ ಮಾರ್ಶ್, v ನ್ಯೂಜಿಲೆಂಡ್, 2021
32 ಎಸೆತ, ಕೇನ್ ವಿಲಿಯಮ್ಸನ್ v ಆಸ್ಟ್ರೇಲಿಯಾ, 2021
33 ಎಸೆತ, ಕುಮಾರ ಸಂಗಕ್ಕಾರ v ಭಾರತ 2014
33 ಎಸೆತ, ಜೋ ರೂಟ್ v ವೆಸ್ಟ್ ಇಂಡೀಸ್,  2016
34 ಎಸೆತ, ಡೇವಿಡ್ ವಾರ್ನರ್ v ನ್ಯೂಜಿಲೆಂಡ್ 2021

ಮಾರ್ಶ್ ಅಜೇಯ ರನ್ ಸಿಡಿಸಿದರೆ, ಮ್ಯಾಕ್ಸ್‌ವೆಲ್ ಅಜೇಯ 22 ರನ್ ಸಿಡಿಸಿದರು. ಈ ಮೂಲಕ ಆಸ್ಟ್ರೇಲಿಯಾ 2 ವಿಕೆಟ್ ಕಳೆದುಕೊಂಡು ಓವರ್‌ಗಳಲ್ಲಿ ಗುರಿ ತಲುಪಿತು. 8 ವಿಕೆಟ್ ಭರ್ಜರಿ ಗೆಲುವು ಕಂಡ ಆಸ್ಟ್ರೇಲಿಯಾ ಚೊಚ್ಚಲ ಟಿ20 ಟ್ರೋಫಿಗೆ ಮುತ್ತಿಕ್ಕಿತು. 

ICC ಟೂರ್ನಿಯಲ್ಲಿ ಆಸ್ಟ್ರೇಲಿಯಾ ಸಾಧನೆ
ಏಕದಿನ ವಿಶ್ವಕಪ್ ಚಾಂಪಿಯನ್; 1987, 1999, 2003, 2007, 2015
ಚಾಂಪಿಯನ್ಸ್ ಟ್ರೋಫಿ; 2006, 2009,
ಟಿ20 ವಿಶ್ವಕಪ್: 2021

ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ವಿಜೇತರು
(2007)ಇರ್ಫಾನ್ ಪಠಾಣ್ (3/16)
(2009)ಶಾಹೀದಿ ಆಫ್ರಿದಿ (54* & 1/20)
(2010)ಕ್ರೈಗ್ ಕೀಸ್ವೆಟರ್ (63)
(2012)ಮರ್ಲಾನ್ ಸಾಮ್ಯುಯೆಲ್ಸ್ (78 & 1/15)
(2014)ಕುಮಾರ ಸಂಗಕ್ಕಾರ (52*)
(2016)ಮರ್ಲಾನ್ ಸಾಮ್ಯುಯೆಲ್ಸ್ (85*)
(2021)ಮಿಚೆಲ್ ಮಾರ್ಶ್ (77*)

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ವಿಜೇತರು
ಶಾಹಿದ್ ಆಫ್ರಿದಿ (2007)
ತಿಲಕರತ್ನೆ ದಿಲ್ಶಾನ್ (2009)
ಕೇವಿನ್ ಪೀಟರ್ಸನ್ (2010)
ಶೇನ್ ವ್ಯಾಟ್ಸನ್ (2012)
ವಿರಾಟ್ ಕೊಹ್ಲಿ (2014)
ವಿರಾಟ್ ಕೊಹ್ಲಿ (2016)
ಡೇವಿಡ್ ವಾರ್ನರ್ (2021

Follow Us:
Download App:
  • android
  • ios