ಡೇವಿಡ್ ಮಲಾನ್ ಹಾಗೂ ಮೊಯಿನ್ ಆಲಿ ಸ್ಫೋಟಕ ಬ್ಯಾಟಿಂಗ್ ನ್ಯೂಜಿಲೆಂಡ್ ತಂಡಕ್ಕೆ 167 ರನ್ ಟಾರ್ಗೆಟ್ ಅಬು ಧಾಬಿಯಲ್ಲಿ ನಡೆಯುತ್ತಿರುವ ಪಂದ್ಯ
ಅಬು ಧಾಬಿ(ನ.10): ಡೇವಿಡ್ ಮಲನ್ ಹಾಗೂ ಮೊಯಿನ್ ಆಲಿ ಅಬ್ಬರಿಂದ ನ್ಯೂಜಿಲೆಂಡ್ ವಿರುದ್ದ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು 166 ರನ್ ಸಿಡಿಸಿದೆ. ಆರಂಭದಲ್ಲಿ ಕುಸಿತ ಕಂಡಿದ್ದ ಇಂಗ್ಲೆಂಡ್ ತಂಡ ಸ್ಫೋಟಕ ಬ್ಯಾಟಿಂಗ್ ಮೂಲಕ ದಿಟ್ಟ ಹೋರಾಟ ನೀಡಿತು. ಇದೀಗ ನ್ಯೂಜಿಲೆಂಡ್ ಗೆಲುವಿಗೆ 167 ರನ್ ಸಿಡಿಸಬೇಕಿದೆ.
ಅಬು ಧಾಬಿಯಲ್ಲಿ ನಡೆಯುತ್ತಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಸೆಕೆಂಡ್ ಬ್ಯಾಟಿಂಗ್ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚು ಅನ್ನೋದು ಈ ಹಿಂದಿನ ಪಂದ್ಯಗಳಿಂದ ಸಾಬೀತಾಗಿದೆ. ಹೀಗಾಗಿ ವಿಲಿಯಮ್ಸನ್ ಇಂಗ್ಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಆಹ್ವಾನಿಸಿದರು.
Team India Squad:ನ್ಯೂಜಿಲೆಂಡ್ ವಿರುದ್ಧ T20ಗೆ ಬಲಿಷ್ಠ ತಂಡ ಪ್ರಕಟ, ರೋಹಿತ್ ನಾಯಕ, ಕೊಹ್ಲಿಗೆ ರೆಸ್ಟ್!
ಜೇಸನ್ ರಾಯ್ ಅಲಭ್ಯತೆಯಿಂದ ಜೋಸ್ ಬಟ್ಲರ್ ಹಾಗೂ ಜಾನಿ ಬೈರ್‌ಸ್ಟೋ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ಇಂಗ್ಲೆಂಡ್ ನಿರೀಕ್ಷಿಸಿದ ಆರಂಭ ಸಿಗಲಿಲ್ಲ. ಕಾರಣ ಜಾನಿ ಬೈರ್‌ಸ್ಟೋ 13 ರನ್ ಸಿಡಿಸಿ ಔಟಾದರು. ಈ ಮೂಲಕ ಇಂಗ್ಲೆಂಡ್ ಮೊದಲ ವಿಕೆಟ್‌ಗೆ 37 ರನ್ ಸಿಡಿತು. ಇತ್ತ ಜೋಸ್ ಬಟ್ಲರ್ 29 ರನ್ ಸಿಡಿಸಿ ನಿರ್ಗಮಿಸಿದರು. ಇಂಗ್ಲೆಂಡ್ ಅರ್ಧಶತಕ ಗಡಿ ದಾಡುತ್ತಿದ್ದಂತೆ 2 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಡೇವಿಡ್ ಮಲಾನ್ ಹಾಗೂ ಮೊಯಿನ್ ಆಲಿ ಬ್ಯಾಟಿಂಗ್‌ನಿಂದ ಇಂಗ್ಲೆಂಡ್ ತಂಡ ಚೇತರಿಸಿಕೊಂಡಿತು. ಮಲಾನ್ 30 ಎಸೆತದಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 42 ರನ್ ಕಾಣಿಕೆ ನೀಡಿದರು. ಪ್ರತಿ ಭಾರಿ ನ್ಯೂಜಿಲೆಂಡ್ ವಿರುದ್ಧ ಡೇವಿಡ್ ಮಲಾನ್ ಉತ್ತಮ ಹೋರಾಟ ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ದ ಡೇವಿಡ್ ಮಲಾನ್(ಟಿ20 ಪ್ರದರ್ಶನ)
42 ರನ್ (30) ಎಸೆತ
59 ರನ್(40) ಎಸೆತ
53 ರನ್(36) ಎಸೆತ
11 ರನ್(13) ಎಸೆತ
39 ರನ್(29) ಎಸೆತ
55 ರನ್(34) ಎಸೆತ
103* ರನ್(51) ಎಸೆತ
ಇತ್ತ ಲಿಯಾಮ್ ಲಿವಿಂಗ್‌ಸ್ಟೋನ್ 17 ರನ್ ಸಿಡಿಸಿ ಔಟಾದರು. ಮೊಯಿನ್ ಅಲಿ ಅಜೇಯ 51 ರನ್ ಸಿಡಿಸಿದರು. ಮಾರ್ಗನ್ ಅಜೇಯ 4 ರನ್ ಸಿಡಿಸಿ ಔಟಾದರು. ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ 166 ರನ್ ಸಿಡಿಸಿತು.
T20 World Cup; ಸೆಮೀಸ್‌ಗೆ ಏರದ ಭಾರತ, ಟಾಪ್ ಎತ್ತಿ 'ಎಲ್ಲ' ತೋರಿಸಿದ ಪಾಕ್ ಅಭಿಮಾನಿ!
ಸೆಮಿಫೈನಲ್ ಕದನ:
ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್ ಕದನ ತೀವ್ರ ಕುತೂಹಲ ಕೆರಳಿಸಿದೆ. ಅಲ್ಪ ಮೊತ್ತಕ್ಕೆ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕಬ್ಲ ಆಲೋಚನೆಯಲ್ಲಿದ್ದ ನ್ಯೂಜಿಲೆಂಡ್ ತಂಡ ಅಂತಿಮ ಹಂತದಲ್ಲಿ ಹೆಚ್ಚಿನ ರನ್ ಬಿಟ್ಟುಕೊಟ್ಟು ದುಬಾರಿಯಾಯಿತು. ಹೀಗಾಗಿ 167 ರನ್ ಟಾರ್ಗೆಟ್ ಪಡೆದಿದೆ. ಇಂಗ್ಲೆಂಡ್ ತಂಡ ಕೂಡ ಉತ್ತಮ ಬೌಲಿಂಗ್ ವಿಭಾಗ ಹೊಂದಿದೆ. ಹೀಗಾಗಿ ನ್ಯೂಜಿಲೆಂಡ್ ತಂಡಕ್ಕೆ ಚೇಸಿಂಗ್ ಅಷ್ಟು ಸುಲಭವಲ್ಲ. ಇಬ್ಬನಿಯ ಲಾಭ ಪಡೆದರೂ ಎಚ್ಚರಿಕೆಯ ಚೇಸಿಂಗ್ ಅಗತ್ಯವಿದೆ.
ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಇತ್ತ ಸೋತ ತಂಡ ಟೂರ್ನಿಯಿಂದ ಹೊರ ಬೀಳಲಿದೆ. ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡ ಬದ್ಧವೈರಿಗಳಲ್ಲದಿದ್ದರೂ, 2019ರ ವಿಶ್ವಕಪ್ ಟೂರ್ನಿ ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳಲು ನ್ಯೂಜಿಲೆಂಡ್ ಸಜ್ಜಾಗಿದೆ. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ಮಣಿಸಿ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತ್ತು. ಇದೀಗ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮಣಿಸಿ ಫೈನಲ್ ಪ್ರವೇಶಿಸುವ ಲೆಕ್ಕಾಚಾರದಲ್ಲಿರುವ ನ್ಯೂಜಿಲೆಂಡ್ತ ತಂಡ ಇದೀಗ 167 ರನ್ ಗಳಿಸಬೇಕಿದೆ.
