Asianet Suvarna News Asianet Suvarna News

T20 World Cup 2021: ರಸಿ ವ್ಯಾಂಡರ್ ಅಬ್ಬರ, ಇಂಗ್ಲೆಂಡ್‌ಗೆ 190 ರನ್ ಟಾರ್ಗೆಟ್!

  • ಸೌತ್ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ರೋಚಕ ಪಂದ್ಯ
  • ರಸಿ ವ್ಯಾಂಡರ್ ಅಜೇಯ 94 ರನ್, ಆ್ಯಡಿನ್ ಅಜೇಯ 52 ರನ್
  • ಇಂಗ್ಲೆಂಡ್ ತಡಕ್ಕೆ 190 ರನ್ ಟಾರ್ಗೆಟ್
T20 World Cup 2021 ENG vs SA Rassie van der Dussen helps south africa set to 190 runs target to England ckm
Author
Bengaluru, First Published Nov 6, 2021, 9:21 PM IST | Last Updated Nov 6, 2021, 9:26 PM IST

ಶಾರ್ಜಾ(ನ.06): ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ ನಡುವಿನ ಮಹತ್ವದ ಪಂದ್ಯ ರೋಚಕ ಘಟ್ಟ ತಲುಪಿದೆ. ರಸಿ ವ್ಯಾಂಡರ್ ಡಸೆನ್ ಆಕರ್ಷಕ ಅರ್ಧಶತಕದಿಂದ ಇಂಗ್ಲೆಂಡ್(England) ವಿರುದ್ಧ ಸೌತ್ ಆಫ್ರಿಕಾ(South Africa) 2 ವಿಕೆಟ್ ನಷ್ಟಕ್ಕೆ 189 ರನ್ ಸಿಡಿಸಿದೆ. ಇದೀಗ ಇಂಗ್ಲೆಂಡ್ ಗೆಲುವಿಗೆ 190 ರನ್ ಟಾರ್ಗೆಟ್ ನೀಡಲಾಗಿದೆ.

Chris Gayle: ಅಭಿಮಾನಿಗೆ ಗ್ಲೌವ್ಸ್ ಹಂಚಿ ವಿದಾಯ ಖಚಿತಪಡಿಸಿದ್ರಾ ಯುನಿವರ್ಸ್ ಬಾಸ್?

ಶಾರ್ಜಾದಲ್ಲಿ ಟಾಸ್(Toss) ಗೆದ್ದ ಇಂಗ್ಲೆಂಡ್ ನೇರವಾಗಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಚೇಸಿಂಗ್ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚಿರುವ ಕಾರಣ ಇಂಗ್ಲೆಂಡ್, ಹರಿಗಣಗಳನ್ನು ಬ್ಯಾಟಿಂಗ್‌ ಆಹ್ವಾನಿಸಿತು. ಇಂಗ್ಲೆಂಡ್ ಆರಂಭದಲ್ಲೇ ವಿಕೆಟ್ ಕಬಳಿಸಿ ಸಂಭ್ರಮಿಸಿತು, ರೀಜಾ ಹೆಂಡ್ರಿಕ್ಸ್ ಕೇವಲ 2 ರನ್ ಸಿಡಿಸಿ ಔಟಾದರು. ಸೌತ್ ಆಫ್ರಿಕಾ 15 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು.

ಕ್ವಿಂಟನ್ ಡಿಕಾಕ್ ಹಾಗೂ ರಸಿ ವ್ಯಾಂಡರ್ ಡಸೆನ್(Rassie van der Dussen) ಹೋರಾಟದಿಂದ ಸೌತ್ ಆಫ್ರಿಕಾ ಚೇತರಿಸಿಕೊಂಡಿತು.  ಕ್ವಿಂಟನ್ ಡಿಕಾಕ್ 27 ಎಸೆತದಲ್ಲಿ 34 ರನ್ ಸಿಡಿಸಿ ಔಟಾದರು.  ಇತ್ತ ರಸಿ ವ್ಯಾಂಡರ್ ಹೋರಾಟ ಮುಂದುವರಿಸಿದರು. ಆಕರ್ಷಕ ಹಾಫ್ ಸೆಂಚುರಿ ಸಿಡಿಸಿದರು. ವ್ಯಾಂಡರ್ ಡಸೆನ್‌ಗೆ ಆ್ಯಡಿನ್ ಮಾರ್ಕ್ರಮ್ ಉತ್ತಮ ಸಾಥ್ ನೀಡಿದರು.

T20 World Cup: Aus vs WI ಮಾರ್ಶ್‌, ವಾರ್ನರ್ ಅಬ್ಬರ, ಆಸೀಸ್‌ಗೆ ಸುಲಭ ಜಯ

ಅಬ್ಬರಿಸಿದ ಆ್ಯಡಿನ್ ಹಾಫ್ ಸೆಂಚುರಿ ಸಿಡಿಸಿದರು. ಇತ್ತ ವ್ಯಾಂಡರ್ ಭರ್ಜರಿ ಸಿಕ್ಸರ್ ಮೂಲಕ ಇಂಗ್ಲೆಂಡ್ ಬೌಲರ್‌ಗಳಿಗೆ ತಲೆನೋವಾಗಿ ಪರಿಮಿಸಿದರು. ವ್ಯಾಂಡರ್ 60 ಎಸೆತದಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ ಅಜೇಯ 94 ರನ್  ಸಿಡಿಸಿದರು. ಆ್ಯಡಿನ್ 25 ಎಸೆತದಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ ಅಜೇಯ 52 ರನ್ ಸಿಡಿಸಿದರು. ಈ ಮೂಲಕ ಸೌತ್ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 189 ರನ್ ಸಿಡಿಸಿತು.

ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ರನ್ ಸಿಡಿಸಿದ ಸೌತ್ ಆಫ್ರಿಕಾ ಬ್ಯಾಟರ್:
94* ರಸಿ ವ್ಯಾಂಡರ್ ಡಸೆನ್ vs ಇಂಗ್ಲೆಂಡ್, 2021
90* ಹರ್ಷೆಲ್ ಗಿಬ್ಸ್ vs ವೆಸ್ಚ್ ಇಂಡೀಸ್, 2007
89* ಜಸ್ಟಿನ್ ಕೆಂಪ್ vs ನ್ಯೂಜಿಲೆಂಡ್, 2007
86* Jಜೆಪಿ ಡುಮಿನಿ vs ನ್ಯೂಜಿಲೆಂಡ್, 2014
79* ಎಬಿ ಡಿವಿಲಿಯರ್ಸ್ vs ಸ್ಕಾಟ್‌ಲೆಂಡ್, 2009

ಸೌತ್ ಆಫ್ರಿಕಾ ಹಾಗೂ ಇಂಗ್ಲೆಂಡ್ ಪಂದ್ಯಕ್ಕೂ ಮೊದಲು ನಡೆದ ಪಂದ್ಯದ ಮೇಲೆ ಸೌತ್ ಆಫ್ರಿಕಾ ಅಭಿಮಾನಿಗಳು ಕಣ್ಣಿಟ್ಟಿದ್ದರು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆಲುವಿಗಾಗಿ ಸೌತ್ ಆಫ್ರಿಕಾ ಅಭಿಮಾನಿಗಳು ಪ್ರಾರ್ಥಿಸಿದ್ದರು. ಆದರೆ ಆಸ್ಟ್ರೇಲಿಯಾ ದಿಟ್ಟ ಹೋರಾಟ ನೀಡಿ ಗೆಲುವು ಸಾಧಿಸಿತು. ಈ ಮೂಲಕ ಆಸ್ಟ್ರೇಲಿಯಾ ರನ್‌ರೇಟ್ +1.216 ಆಗಿದೆ. ಆಸ್ಟ್ರೇಲಿಯಾ ನೆಟ್‌ರನ್ ರೇಟ್ ಹಿಂದಿಕ್ಕಲು ಸೌತ್ ಆಫ್ರಿಕಾ ತಂಡಕ್ಕೆ ಭಾರಿ ಅಂತರದ ಗೆಲುವಿನ ಅವಶ್ಯಕತೆ ಇದೆ.

ಇಂಗ್ಲೆಂಡ್ ತಂಡದ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತಗೊಂಡಿದೆ. ಇದೀಗ ಮತ್ತೊಂದು ಸ್ಥಾನಕ್ಕಾಗಿ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ತೀವ್ರ ಪೈಪೋಟಿ ನಡೆಸುತ್ತಿದೆ. ಸದ್ಯ ಸೌತ್ ಆಫ್ರಿಕಾ ನೆಟ್‌ರನ್ ರೇಟ್ +0.742. 

ಇಂಗ್ಲೆಂಡ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 4 ಪಂದ್ಯ ಗೆದ್ದು 8 ಅಂಕ ಸಂಪಾದಿಸಿದೆ. ಆಸ್ಟ್ರೇಲಿಯಾ 5ರಲ್ಲಿ 4 ಗೆಲುವಿನ ಮೂಲಕ 8 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಇತತ್ತ ಸೌತ್ ಆಫ್ರಿಕಾ 4 ಪಂದ್ಯದಲ್ಲಿ 3 ಗೆಲುವಿನೊಂದಿಗೆ 3ನೇ ಸ್ಥಾನದಲ್ಲಿದೆ. ಇನ್ನು ಶ್ರೀಲಂಕಾ, ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ಈಗಾಗಲೇ T20 World Cup 2021 ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ.

Latest Videos
Follow Us:
Download App:
  • android
  • ios