Asianet Suvarna News Asianet Suvarna News

T20 World Cup 2021: ವಿಂಡೀಸ್ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ!

  • ವೆಸ್ಟ್ ಇಂಡೀಸ್ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ
  • ಬೌಲಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ
  • ಆಸೀಸ್ ಸೆಮಿಫೈನಲ್ ಕನಸು ಛಿದ್ರ ಮಾಡುತ್ತಾ ವಿಂಡೀಸ್?
T20 World Cup 2021 AUS vs WI Australia won toss and chose bowl first against west indies ckm
Author
Bengaluru, First Published Nov 6, 2021, 3:26 PM IST

ಅಬು ಧಾಬಿ(ನ.06):  ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ಹೋರಾಟಕ್ಕೆ ಅಬು ಧಾಬಿ ಕ್ರೀಡಾಂಗಣ ಸಜ್ಜಾಗಿದೆ.  ವೆಸ್ಟ್ ಇಂಡೀಸ್ ವಿರುದ್ಧ ಲೀಗ್ ಸುತ್ತಿನಲ್ಲಿ ಆಸ್ಟ್ರೇಲಿಯಾ(Australia) ಟಾಸ್(Toss) ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. 

T20 World Cup 2021| ಪಂದ್ಯದ ಜೊತೆ ಹೃದಯ ಗೆದ್ದ ಟೀಂ ಇಂಡಿಯಾ, ಸೋತ ತಂಡಕ್ಕೆ ಪ್ರೋತ್ಸಾಹ!

ವೆಸ್ಟ್ ಇಂಡೀಸ್(West Indies) ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ರವಿ ರಾಂಪಾಲ್ ಬದಲು ಹೈಡನ್ ವಾಲ್ಶ್ ತಂಡ ಸೇರಿಕೊಂಡಿದ್ದಾರೆ. ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 

ವೆಸ್ಟ್ ಇಂಡೀಸ್ ತಂಡ: (West Indies Squad)
ಕ್ರಿಸ್ ಗೇಲ್, ಇವಿನ್ ಲಿವಿಸ್, ನಿಕೋಲಸ್ ಪೂರನ್, ರೋಸ್ಟನ್ ಚೇಸ್, ಶಿಮ್ರೊನ್ ಹೆಟ್ಮೆಯರ್, ಕೀರನ್ ಪೋಲಾರ್ಡ್(ನಾಯಕ), ಆ್ಯಂಡ್ರೆ ರಸೆಲ್, ಜೇಸನ್ ಹೋಲ್ಡರ್, ಡ್ವೇನ್ ಬ್ರಾವೋ, ಹೈಡನ್ ವಾಲ್ಶ್, ಆಕೇಲ್ ಹುಸೈನ್

ಆಸ್ಟ್ರೇಲಿಯಾ ತಂಡ: (Australia Squad)
ಡೇವಿಡ್ ವಾರ್ನರ್, ಆ್ಯರೋನ್ ಫಿಂಚ್(ನಾಯಕ), ಮಿಚೆಲ್ ಮಾರ್ಶ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೊಯ್ನಿಸ್, ಮಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆ್ಯಡಮ್ ಜಂಪಾ, ಜೋಶ್ ಹೇಜಲ್‌ವುಡ್

T20 World Cup 2021 ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ನಾಯಕ ಕೀರನ್ ಪೋಲಾರ್ಡ್ ಕಳೆದ 5 ಪಂದ್ಯಗಳಲ್ಲಿ ಒಂದು ಬಾರಿ ಮಾತ್ರ ಟಾಸ್ ಗೆದ್ದಿದ್ದಾರೆ. ಇನ್ನುಳಿದ 4 ಪಂದ್ಯದಲ್ಲಿ ಟಾಸ್ ಸೋತಿದ್ದಾರೆ. ಪಂದ್ಯವನ್ನು ಸೋತಿದ್ದಾರೆ.

T20 World Cup: ಸ್ಕಾಟ್ಲೆಂಡ್ ಎದುರು ಅಬ್ಬರಿಸಿ ಆತಿಯಾ ಶೆಟ್ಟಿ ಜತೆಗಿನ ಪ್ರೀತಿ ಅನಾವರಣ ಮಾಡಿದ ರಾಹುಲ್

ವೆಸ್ಟ್ ಇಂಡೀಸ್ ತಂಡ ಈಗಾಗಲೇ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಇತ್ತ ಆಸ್ಟ್ರೇಲಿಯಾ ತಂಡಕ್ಕೆ ವಿಂಡೀಸ್ ವಿರುದ್ಧದ ಪಂದ್ಯ ಗೆದ್ದರೆ ಮಾತ್ರ ಸೆಮಿಫೈನಲ್ ಪ್ರವೇಶಕ್ಕೆ ಅವಕಾಶ. ಇದರ ಜೊತೆಗೆ ವೆಸ್ಟ್ ಇಂಡೀಸ್ ತಂಡ ಟೂರ್ನಿಯಿಂದ ಹೊರಬಿದ್ದರೂ ಪಂದ್ಯ ಗೆಲ್ಲಲೇಬೇಕಾದ ಒತ್ತಡಲ್ಲಿದೆ. ಕಾರಣ ಮುಂದಿನ ಟಿ20 ಟೂರ್ನಿಯಲ್ಲಿ ಸೂಪರ್ 12 ಹಂತಕ್ಕೆ ನೇರ ಪ್ರವೇಶ ಪಡೆಯಲು ಈ ಪಂದ್ಯ ಗೆಲ್ಲಬೇಕಿದೆ. ಈ ಪಂದ್ಯ ಸೋತರೆ ವಿಂಡೀಸ್ ತಂಡ ಅರ್ಹತಾ ಸುತ್ತಿನ ಮೂಲಕ ಸೂಪರ್ 12 ಹಂತಕ್ಕೆ ಪ್ರವೇಶ ಪಡೆಯಬೇಕಿದೆ.

ಸದ್ಯ ವೆಸ್ಟ್ ಇಂಡೀಸ್ ರ್ಯಾಕಿಂಗ್‌ನಲ್ಲಿ 8ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ 9ನೇ ಸ್ಥಾನದಲ್ಲಿದೆ. 8 ತಂಡಗಳು ಟಿ20 ವಿಶ್ವಕಪ್ ಟೂರ್ನಿಗೆ ನೇರವಾಗಿ ಅರ್ಹತೆ ಪಡೆಯಲಿದೆ. ಹೀಗಾಗಿ ವೆಸ್ಟ್ ಇಂಡೀಸ್ ಇಂದಿನ ಪಂದ್ಯ ಸೋತರೆ 8ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಕುಸಿಯಲಿದೆ. ಹೀಗಾಗಿ ಮುಂದಿನ ವಿಶ್ವಕಪ್ ಟೂರ್ನಿ ದೃಷ್ಟಿಯಿಂದ ವೆಸ್ಟ್ ಇಂಡೀಸ್ ತಂಡಕ್ಕೆ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ.

UAE ಆಡಿದ 7 ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ 6 ಪಂದ್ಯ ಸೋತಿದೆ. ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ಟಿ20 ಮುಖಾಮುಖಿಯಲ್ಲಿ ವಿಂಡೀಸ್  ಮೇಲುಗೈ ಸಾಧಿಸಿದೆ. ವೆಸ್ಟ್ ಇಂಡೀಸ್ 10 ಗೆಲುವು ಸಾಧಿಸಿದ್ದರೆ, ಆಸ್ಟ್ರೇಲಿಯಾ 6 ಗೆಲುವು ಕಂಡಿದೆ. ಟಿ20 ವಿಶ್ವಕಪ್ ಹೋರಾಟದಲ್ಲೂ ವೆಸ್ಟ್ ಇಂಡೀಸ್ 3 ಗೆಲುವು ಸಾಧಿಸಿದ್ದರೆ, ಆಸ್ಟ್ರೇಲಿಯಾ 2 ಗೆಲುವು ಕಂಡಿದೆ. ಅಂಕಿ ಅಂಶಗಳು ವಿಂಡೀಸ್ ಪರವಾಗಿದೆ. ಆದರೆ ಸದ್ಯದ ಫಾರ್ಮ್ ವಿಂಡೀಸ್‌ಗೆ ಕೈಕೊಡುತ್ತಿದೆ. ಆಸ್ಟ್ರೇಲಿಯಾ ಉತ್ತಮ ಪ್ರದರ್ಶನದೊಂದಿಗೆ ಮುನ್ನಗ್ಗುತ್ತಿದೆ.

ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ 4 ಪಂದ್ಯದಲ್ಲಿ 3ರಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ 4 ಪಂದ್ಯದಲ್ಲಿ 1 ಗೆಲುವ ಸಾಧಿಸಿ 5ನೇ ಸ್ಥಾನದಲ್ಲಿದೆ. ಮೊದಲ ಗುಂಪಿನಲ್ಲಿ ಇಂಗ್ಲೆಂಡ್ ಆಡಿದ 4 ಪಂದ್ಯ ಗೆದ್ದು ಮೊದಲ ಸ್ಥಾನ ಆಲಂಕರಿಸಿದೆ. ಸೌತ್ ಆಫ್ರಿಕಾ ತಂಡ 3ನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ 4 ಹಾಗೂ ಬಾಂಗ್ಲಾದೇಶ ಕೊನೆಯ ಸ್ಥಾನದಲ್ಲಿದೆ.

Follow Us:
Download App:
  • android
  • ios