T20 World Cup 2021: ಒಂದೇ ಓವರ್‌ಲ್ಲಿ 4 ಸಿಕ್ಸರ್, ಆಫ್ಘಾನ್ ವಿರುದ್ಧ ಪಾಕ್‌ಗೆ ರೋಚಕ ಗೆಲುವು!

  • ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿದ ಆಸಿಫ್ ಆಲಿ
  • ಆಲಿ ಅರ್ಭಟದಿಂದ ಪಾಕಿಸ್ತಾನಕ್ಕೆ 5 ವಿಕೆಟ್ ಗೆಲುವು
  • ಪಾಕಿಸ್ತಾನ ತಂಡದ ಸೆಮಿಫೈನಲ್ ಹಾದಿ ಸುಗಮ
T20 World Cup 2021  Asif Ali helps Pakistan to beat Afghanistan by 5 wickets dubai ckm

ದುಬೈ(ಅ.29);  ಬಾಬರ್ ಅಜಮ್(Babar Azam) ಅರ್ಧಶತಕ ಹಾಗೂ ಆಸಿಫ್ ಆಲಿ(Asif Ali) ಒಂದೇ ಓವರ್‌ನಲ್ಲಿ ಸಿಡಿಸಿದ ನಾಲ್ಕು ಸಿಕ್ಸರ್ ನೆರವಿನಿಂದ ಆಫ್ಘಾನಿಸ್ತಾನ(Afghanistan) ವಿರುದ್ಧ ಪಾಕಿಸ್ತಾನ(Pakistan) 5 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ T20 World Cup 2021 ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. 

T20 World Cup: ಬಾಂಗ್ಲಾ ಎದುರು ವಿಂಡೀಸ್‌ಗೆ ರೋಚಕ ಜಯ

ದುಬೈ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಧೈರ್ಯ ತೋರಿದ ಆಫ್ಘಾನಿಸ್ತಾನ ಆರಂಭಿಕ ಹಂತದಲ್ಲಿ ದಿಢೀರ್ ವಿಕೆಟ್ ಕಳೆದಕೊಂಡು ಸಂಕಷ್ಟ ಅನುಭವಿಸಿತು. ಆದರೆ ಮೊಹಮ್ಮದ್ ನಬಿ ಹಾಗೂ ಗುಲ್ಬಾದಿನ್ ನೈಬ್ ಜೊತೆಯಾಟದಿಂದ ಆಫ್ಘಾನಿಸ್ತಾನ ದಿಟ್ಟ ಹೋರಾಟ ನೀಡಿತು. ನೈಬ್ ಅಜೇಯ 35 ಹಾಗೂ ನಬಿ ಅಜೇಯ 35 ರನ್ ಸಿಡಿಸಿದರು. ಈ ಮೂಲಕ ಆಫ್ಘಾನಿಸ್ತಾನ 6 ವಿಕೆಟ್ ನಷ್ಟಕ್ಕೆ 147 ರನ್ ಸಿಡಿಸಿತು.

148 ರನ್ ಟಾರ್ಗೆಟ್ ಪಡೆದ ಪಾಕಿಸ್ತಾನ ಎಂದಿನಂತೆ ಉತ್ತಮ ಆರಂಭ ಪಡೆಯಲಿಲ್ಲ. ಮೊಹಮ್ಮದ್ ರಿಜ್ವಾನ್ ಕೇವಲ 8 ರನ್ ಸಿಡಿಸಿ ಔಟಾದರು. 12 ರನ್ ಗಳಿಸುವಷ್ಟರಲ್ಲೇ ಪಾಕಿಸ್ತಾನ ಮೊದಲ ವಿಕೆಟ್ ಕಳೆದುಕೊಂಡಿತು. ಬಾಬರ್ ಅಜಮ್ ಹಾಗೂ ಫಕರ್ ಜಮಾನ್ ಜೊತೆಯಾಟದಿಂದ ಪಾಕಿಸ್ತಾನ ಚೇತರಿಸಿಕೊಂಡಿತು.

T20 World Cup 2021: ವಾರ್ನರ್ ಅಬ್ಬರಕ್ಕೆ ಸೋಲಿಗೆ ಶರಣಾದ ಶ್ರೀಲಂಕಾ, 2ನೇ ಸ್ಥಾನಕ್ಕೆ ಆಸ್ಟ್ರೇಲಿಯಾ!

ಎರಡನೇ ವಿಕೆಟ್‌ಗೆ ಬಾಬರ್ ಹಾಗೂ ಫಕರ್ 63 ರನ್ ಜೊತೆಯಾಟ ನೀಡಿದರು. ಫಕರ್ 30 ರನ್ ಸಿಡಿಸಿ ಔಟಾದರು. ಇತ್ತ ಬಾಬರ್ ಹೋರಾಟ ಮುಂದುವರಿಸಿದರು. ಮೊಹಮ್ಮದ್ ಹಫೀಜ್ ಜೊತೆ ಸೇರಿದ ಬಾಬರ್ ಇನ್ನಿಂಗ್ಸ್ ಮುಂದುವರಿಸಿದರು. ಆದರೆ ಮೊಹಮ್ಮದ್ ಹಫೀಚ್ ರಶೀದ್ ಖಾನ್ ಮೋಡಿಗೆ ಬಲಿಯಾದರು. 

T20 World Cup 2021: ಮೊಹಮ್ಮದ್ ಶಮಿ ನಿಂದನೆ ಹಿಂದೆ ಪಾಕಿಸ್ತಾನ ಪಿತೂರಿ ಬಯಲು!

ಹಫೀಜ್ ವಿಕೆಟ್ ಕಬಳಿಸುವ ಮೂಲಕ ರಶೀದ್ ಖಾನ್ ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್ ಸಾಧನೆ ಮಾಡಿದ್ದಾರೆ. ಈ ಮೂಲಕ ದಿಗ್ಗಜರ ಸಾಲಿಗೆ ರಶೀದ್ ಖಾನ್ ಸೇರಿಕೊಂಡಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಸಾಧನೆ:
117 = ಶಕೀಬ್ ಅಲ್ ಹಸನ್
107 = ಲಸಿತ್ ಮಲಿಂಗ
100 = ಟಿಮ್ ಸೌಥಿ
100 = ರಶೀದ್ ಖಾನ್

ರಶೀದ್ ಖಾನ್ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್ ಸಾಧನೆಯನ್ನು 53 ಪಂದ್ಯದಲ್ಲಿ ಪೂರೈಸಿದ್ದಾರೆ. ಇನ್ನು ಏಕದಿನದಲ್ಲಿ ಈ ಸಾಧನೆಯನ್ನು 44 ಪಂದ್ಯದಲ್ಲಿ ಪೂರೈಸಿದ್ದಾರೆ. ಹಫೀಜ್ ವಿಕೆಟ್ ಕಬಳಿಸಿದ ರಶೀದ್ ಖಾನ್, ಆಫ್ಘಾನಿಸ್ತಾನ ತಂಡಕ್ಕೆ ಮೇಲುಗೈ ತಂದುಕೊಟ್ಟರು.

ಬಾಬರ್ ಅಜಮ್ ಕ್ರೀಸ್‌ನಲ್ಲಿದ್ದ ಕಾರಣ ಪಾಕಿಸ್ತಾನ ಯಾವ ಆತಂಕಕ್ಕೂ ಒಳಗಾಗಲಿಲ್ಲ. ಇತ್ತ ಶೋಯೆಬ್ ಮಲಿಕ್ ಉತ್ತಮ ಸಾಥ್ ನೀಡಿದರು. ಬಾಬರ್ ಅಜಮ್ ಹಾಫ್ ಸೆಂಚುರಿ ಪೂರೈಸಿದರು. ಬಾಬರ್ ಅಜಮ್ 51 ರನ್ ಸಿಡಿಸಿ ರಶೀದ್ ಖಾನ್‌ಗೆ ವಿಕೆಟ್ ಒಪ್ಪಿಸಿದರು. ಬಾಬರ್ ವಿಕೆಟ್ ಪತನ ಪಾಕಿಸ್ತಾನ ತಂಡದಲ್ಲಿ ಆತಂಕ ಮೂಡಿಸಿತು.

ಬಾಬರ್ ವಿಕೆಟ್ ಪತನದ ಬಳಿಕ ಪಾಕಿಸ್ತಾನ ಗೆಲುವಿಗೆ 18 ಎಸೆತದಲ್ಲಿ 26 ರನ್ ಅವಶ್ಯಕತೆ ಇತ್ತು. ಆಫ್ಘಾನಿಸ್ತಾನ ಪಂದ್ಯದ ಮೇಲೆ ಹಿಡಿತ ಸಾಧಿಸಲು ಆರಂಭಿಸಿತು. 19 ರನ್ ಸಿಡಿಸಿದ ಶೋಯೆಬ್ ಮಲಿಕ್ ವಿಕೆಟ್ ಕೈಚೆಲ್ಲಿದರು. ಪಾಕಿಸ್ತಾನ ಗೆಲುವಿಗೆ ಅಂತಿಮ 12 ಎಸೆತದಲ್ಲಿ 24 ರನ್ ಬೇಕಿತ್ತು. ಆಸಿಫ್ ಆಲಿ ಸತತ 2 ಸಿಕ್ಸರ್ ಮೂಲಕ ಪಂದ್ಯದ ಗತಿಯನ್ನು ಬದಲಿಸಿದರು. 

19ನೇ ಓವರ‌್‌ನ 5 ಎಸೆತವನ್ನು ಮತ್ತೆ ಸಿಕ್ಸರ್ ಸಿಡಿಸಿದ ಆಸಿಫ್ ಆಲಿ ಪಾಕ್ ತಂಡದ ಆತಂಕ ದೂರ ಮಾಡಿದರು. ಮರು ಎಸೆತದಲ್ಲಿ ಮತ್ತೊಂದು ಸಿಕ್ಸರ್. ಒಂದೇ ಓವರ್‌ನಲ್ಲಿ 4 ಸಿಕ್ಸರ್ ಸಿಡಿಸಿದ ಆಸಿಫ್ ಆಲಿ ಪಾಕಿಸ್ತಾನ ತಂಡಕ್ಕೆ 5 ವಿಕೆಟ್ ಗೆಲುವು ತಂದುಕೊಟ್ಟರು. ಇನ್ನು 6 ಎಸೆತ ಬಾಕಿ ಇರುವಂತೆ ಪಾಕಿಸ್ತಾನ ಗೆಲುವಿನ ದಡ ಸೇರಿತು. 
 

Latest Videos
Follow Us:
Download App:
  • android
  • ios