ಸೂರತ್‌[ನ.24]: ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಸೂಪರ್‌ ಲೀಗ್‌ ಹಂತದ ತನ್ನ 3ನೇ ಪಂದ್ಯದಲ್ಲಿ ಕರ್ನಾಟಕ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ಆಡಿರುವ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 8 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇತ್ತ ಪಂಜಾಬ್‌, ಆಡಿರುವ 1 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಶುಭಾ​ರಂಭ ಮಾಡಿದೆ. 

ಬಲಿಷ್ಠ ತಂಡ​ಗಳ ನಡು​ವಿನ ಪೈಪೋಟಿ ಅಭಿ​ಮಾ​ನಿ​ಗ​ಳಲ್ಲಿ ಕುತೂ​ಹಲ ಮೂಡಿ​ಸಿದ್ದು. ಪಂಜಾಬ್‌ ವಿರುದ್ಧ ಗೆಲುವು ಸಾಧಿ​ಸಿ​ದರೆ, ಕರ್ನಾ​ಟ​ಕದ ಸೆಮಿ​ ಫೈ​ನಲ್‌ ಹಾದಿ ಸುಗ​ಮ​ಗೊ​ಳ್ಳಲಿದೆ. ಇದೀಗ ಪಂಜಾಬ್ 10 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು ಕೇವಲ 61 ರನ್’ಗಳನ್ನಷ್ಟೇ ಬಾರಿಸಿದೆ.

ಮುಷ್ತಾಕ್‌ ಅಲಿ: ಜಾರ್ಖಂಡ್‌ ವಿರುದ್ಧ ಕರ್ನಾಟಕ ಜಯಭೇರಿ

ಅಗ್ರ ಬ್ಯಾಟ್ಸ್‌ಮನ್‌ಗಳೇ ಆಧಾರ: ಕರ್ನಾ​ಟಕ ಸೂಪರ್‌ ಲೀಗ್‌ನ 2 ಪಂದ್ಯ​ಗ​ಳಲ್ಲಿ ಗೆದ್ದಿ​ರು​ವುದು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಅಬ್ಬ​ರದ ಆಟದಿಂದಲೇ. ಯುವ ಬ್ಯಾಟ್ಸ್‌ಮನ್‌ ದೇವ​ದತ್‌ ಪಡಿ​ಕ್ಕಲ್‌, ತಮ್ಮ ಅಮೋಘ ಪ್ರದ​ರ್ಶ​ನ​ದಿಂದ ಸುದ್ದಿ​ಯಾ​ಗಿ​ದ್ದಾರೆ. ಭಾರತ ತಂಡದ ಆಟ​ಗಾ​ರ​ರಾದ ಕೆ.ಎಲ್‌.ರಾ​ಹುಲ್‌, ಮನೀಶ್‌ ಪಾಂಡೆ ಜವಾ​ಬ್ದಾ​ರಿ​ಯುತ ಆಟವಾಡಿ​ದ್ದಾರೆ. ಈ ಮೂವರು ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ದೊಡ್ಡ ಇನ್ನಿಂಗ್ಸ್‌ ಆಡಿ​ದ​ರಷ್ಟೇ ಕರ್ನಾ​ಟಕಕ್ಕೆ ಗೆಲುವು ಎನ್ನು​ವಂತಾ​ಗಿದೆ. ಕರುಣ್‌ ನಾಯರ್‌ ಲಯ ಕಳೆ​ದು​ಕೊಂಡಿದ್ದು, ಪವನ್‌ ದೇಶ​ಪಾಂಡೆ ಸ್ಥಿರತೆ ಕಾಯ್ದು​ಕೊ​ಳ್ಳಲು ವಿಫ​ಲ​ರಾ​ಗಿ​ದ್ದಾರೆ. ಆಲ್ರೌಂಡರ್‌ ಕೆ.ಗೌ​ತಮ್‌ ಅನು​ಪ​ಸ್ಥಿತಿ ತಂಡ​ವನ್ನು ಕಾಡು​ತ್ತಿದೆ. ಕೆಳ ಮಧ್ಯಮ ಕ್ರಮಾಂಕವನ್ನು
ನೆಚ್ಚಿ​ಕೊ​ಳ್ಳು​ವ ಹಾಗಿಲ್ಲ. ಒಂದೊಮ್ಮೆ ತಂಡ ಬ್ಯಾಟಿಂಗ್‌ ವೈಫಲ್ಯ ಕಂಡರೆ, ಗೆಲ್ಲುವುದು ಕಷ್ಟವಾಗ​ಲಿದೆ.

ಇಶಾಂತ್ ದಾಳಿಗೆ ಬಾಂಗ್ಲಾ ತತ್ತರ, ಇತಿಹಾಸ ರಚಿಸಲು ಭಾರತ ಕಾತರ!

ತಂಡದ ಬೌಲರ್‌ಗಳು ಸಹ ಮೊನಚು ಕಳೆ​ದು​ಕೊಂಡಿ​ದ್ದಾರೆ. ರೋನಿತ್‌ ಮೋರೆ, ವಿ.ಕೌ​ಶಿಕ್‌ ಜಾರ್ಖಂಡ್‌ ವಿರು​ದ್ಧದ ಪಂದ್ಯ​ದಲ್ಲಿ ಸಾಧಾ​ರಣ ಪ್ರದ​ರ್ಶನ ತೋರಿ​ದ್ದರು. ಪ್ರಮುಖ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ ಸಹ ಲಯದಲ್ಲಿಲ್ಲ. ಲೆಗ್‌ ಸ್ಪಿನ್ನರ್‌ ಪ್ರವೀಣ್‌ ದುಬೆ, ಎಡಗೈ ಸ್ಪಿನ್ನರ್‌ ಜೆ.ಸು​ಚಿತ್‌ ಮೇಲೆ ಹೆಚ್ಚಿನ ನಿರೀಕ್ಷೆ ಇಡ​ಲಾ​ಗಿದೆ.