ಸಿಡ್ನಿ ಟೆಸ್ಟ್; ರಾಷ್ಟ್ರಗೀತೆ ವೇಳೆ ಭಾವುಕರಾಗಿ ಕಣ್ಣೀರಿಟ್ಟ ಮೊಹಮ್ಮದ್ ಸಿರಾಜ್; ವಿಡಿಯೋ ವೈರಲ್!
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಪಂದ್ಯ ಮೊದಲ ದಿನ ಹಲವು ಘಟನೆಗಳಿಗೆ ಸಾಕ್ಷಿಯಾಗಿದೆ. ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದೆ. ಇತ್ತ ಪಂದ್ಯ ಆರಂಭಕ್ಕೂ ಮೊದಲು ರಾಷ್ಟ್ರಗೀತೆ ವೇಳೆ ಮೊಹಮ್ಮದ್ ಸಿರಾಜ್ ಭಾವುಕರಾಗಿದ್ದಾರೆ. ಈ ಕುರಿತು ಸ್ವತ ಸಿರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿಡ್ನಿ(ಜ.07): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದ ಮೊದಲ ದಿನ ರೋಚಕ ಹೋರಾಟ ಏರ್ಪಟ್ಟಿತು. ಆದರೆ ಮಳೆ ಮೊದಲ ದಿನದಾಟಕ್ಕೆ ಅಡ್ಡಿಯಾಗಿದೆ. ಪಂದ್ಯ ಆರಂಭಕ್ಕೂ ಮುನ್ನ ನಡೆದ ಘಟನೆ ಇದೀಗ ವೈರಲ್ ಆಗಿದೆ. ಪಂದ್ಯಕ್ಕೂ ಮುನ್ನ ಭಾರತದ ರಾಷ್ಟ್ರಗೀತೆ ವೇಳೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಭಾವುಕರಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ.
ಆಸ್ಪತ್ರೆ ದಾಖಲಾಗಿದ್ದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ತಂದೆ ನಿಧನ!.
ಸಿಡ್ನಿ ಟೆಸ್ಟ್ ಪಂದ್ಯ ಆರಂಭಕ್ಕೂ ಮೊದಲು ರಾಷ್ಟ್ರಗೀತೆ ವೇಳೆ ಸಿರಾಜ್ ಭಾವುಕರಾಗಿದ್ದಾರೆ. ನಿಯಂತ್ರಿಸಲು ಹರಸಾಹಸ ಮಾಡಿದ ಸಿರಾಜ್‌ಗೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ರಾಷ್ಟ್ರಗೀತೆ ವೇಳೆ ಸಿರಾಜ್ ಕಣ್ಣೀರಿಟ್ಟಿದ್ದಾರೆ. ರಾಷ್ಟ್ರಗೀತೆ ವೇಳೆ ನನಗೆ ತಂದೆಯ ನೆನೆಪಾಯಿತು. ಭಾರತಕ್ಕಾಗಿ ಆಡಬೇಕು, ಅತ್ಯುತ್ತಮ ಪ್ರದರ್ಶನದ ಮೂಲಕ ಭಾರತಕ್ಕೆ ಕೀರ್ತಿ ತರಬೇಕು ಎಂದು ಪದೇ ಪದೆ ಹೇಳುತ್ತಿದ್ದರು ಎಂದು ಸಿರಾಜ್ ಹೇಳಿದ್ದಾರೆ.
ಮೊಹಮ್ಮದ್ ಸಿರಾಜ್ ತಂದೆಯ ನಿಧನಕ್ಕೆ ಕಂಬನಿ ಮಿಡಿದ ಸೌರವ್ ಗಂಗೂಲಿ
ಇತ್ತೀಚೆಗಷ್ಟಿ ಸಿರಾಜ್ ತಂದೆ ಮೊಹಮ್ಮದ್ ಗೌಸ್ ನಿಧನರಾಗಿದ್ದಾರೆ. ಆಸೀಸ್ ಪ್ರವಾಸದ ವೇಳೆ ಸಿರಾಜ್ ತಂದೆ ನಿಧನರಾಗಿದ್ದರು. ಸಿರಾಜ್‌ಗೆ ಭಾರತಕ್ಕೆ ಮರಳಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿತ್ತು. ಆದರೆ ಅತಿಯಾದ ನೋವಿನಲ್ಲೂ ಟೀಂ ಇಂಡಿಯಾ ಪರ ಆಡಲು ನಿರ್ಧರಿಸಿದ ಸಿರಾಜ್, ತಂದೆ ಅಂತ್ಯಕ್ರೀಯೆಯಲ್ಲೂ ಪಾಲ್ಗೊಂಡಿಲ್ಲ.
ತಂದೆಯ ನೆನೆದ ಸಿರಾಜ್, ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ವಿಕೆಟ್ ಕಬಳಿಸೋ ಮೂಲಕ ಭಾರತಕ್ಕೆ ಮೇಲುಗೈ ತಂದುಕೊಟ್ಟಿದ್ದಾರೆ. ಇನ್ನು 2ನೇ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಸಿರಾಜ್ 5 ವಿಕೆಟ್ ಕಬಳಿಸಿ ಗಮನಸೆಳೆದಿದ್ದರು.