Asianet Suvarna News Asianet Suvarna News

ಆಸೀಸ್ ಎದುರಿನ ಟಿ20 ಸರಣಿಗೆ ಭಾರತ ತಂಡ ಪ್ರಕಟ: ಸೂರ್ಯನಿಗೆ ಒಲಿದ ನಾಯಕ ಪಟ್ಟ

ಶ್ರೇಯಸ್ ಅಯ್ಯರ್ ಮೊದಲ 3 ಪಂದ್ಯಗಳಿಂದ ಮಾತ್ರ ಹೊರಗುಳಿಯಲಿದ್ದು, ಕೊನೆ 2 ಪಂದ್ಯಗಳಲ್ಲಿ ತಂಡದ ಉಪನಾಯಕನಾಗಿ ಆಡಲಿದ್ದಾರೆ. ಮೊದಲ 3 ಪಂದ್ಯಗಳಿಗೆ ಋತುರಾಜ್‌ ಗಾಯಕ್ವಾಡ್‌ರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಗಾಯದ ಕಾರಣ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯದ ಅಕ್ಷರ್‌ ಪಟೇಲ್‌, ಫಿಟ್ನೆಸ್‌ ಪರೀಕ್ಷೆ ಪಾಸಾಗಿದ್ದು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

Suryakumar to lead India for Australia T20Is Axar Patel returns kvn
Author
First Published Nov 21, 2023, 10:16 AM IST

ನವದೆಹಲಿ(ನ.21): ಆಸ್ಟ್ರೇಲಿಯಾ ವಿರುದ್ಧ ನ.23ರಿಂದ ಆರಂಭಗೊಳ್ಳಲಿರುವ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡ ಪ್ರಕಟಗೊಂಡಿದ್ದು, ಸೂರ್ಯಕುಮಾರ್‌ ಯಾದವ್‌ರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ವಿಶ್ವಕಪ್‌ ತಂಡದಲ್ಲಿದ್ದ ಇಶಾನ್‌ ಕಿಶನ್‌, ಪ್ರಸಿದ್ಧ್‌ ಕೃಷ್ಣ ಆಯ್ಕೆಯಾಗಿದ್ದು, ಇನ್ನುಳಿದವರಿಗೆ ವಿಶ್ರಾಂತಿ ನೀಡಲಾಗಿದೆ.

ಶ್ರೇಯಸ್ ಅಯ್ಯರ್ ಮೊದಲ 3 ಪಂದ್ಯಗಳಿಂದ ಮಾತ್ರ ಹೊರಗುಳಿಯಲಿದ್ದು, ಕೊನೆ 2 ಪಂದ್ಯಗಳಲ್ಲಿ ತಂಡದ ಉಪನಾಯಕನಾಗಿ ಆಡಲಿದ್ದಾರೆ. ಮೊದಲ 3 ಪಂದ್ಯಗಳಿಗೆ ಋತುರಾಜ್‌ ಗಾಯಕ್ವಾಡ್‌ರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಗಾಯದ ಕಾರಣ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯದ ಅಕ್ಷರ್‌ ಪಟೇಲ್‌, ಫಿಟ್ನೆಸ್‌ ಪರೀಕ್ಷೆ ಪಾಸಾಗಿದ್ದು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಚಹಲ್-ಸಂಜುಗಿಲ್ಲ ಸ್ಥಾನ: ಇನ್ನು 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ ಕೇರಳದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಹಾಗೂ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಇದೀಗ ಮತ್ತೊಮ್ಮೆ ನಿರಾಸೆ ಅನುಭವಿಸಿದ್ದಾರೆ. ಈ ಇಬ್ಬರನ್ನೂ ಆಯ್ಕೆ ಸಮಿತಿ ಆಸ್ಟ್ರೇಲಿಯಾ ಎದುರಿನ ಸರಣಿಗೆ ಪರಿಗಣಿಸಿಲ್ಲ. 

ಭಾವುಕರಾಗಿದ್ದ ಕೊಹ್ಲಿ-ರೋಹಿತ್ ಮುಖದಲ್ಲಿ ನಗು, ಮೋದಿ ಜೊತೆ ಕೈ ಕೈ ಹಿಡಿದ ಫೋಟೋ ವೈರಲ್!

ಬೆಂಗಳೂರಲ್ಲಿ 5ನೇ ಪಂದ್ಯ

ಡಿ.3ರಂದು ನಡೆಯಲಿರುವ ಸರಣಿಯ 5ನೇ ಪಂದ್ಯವನ್ನು ಹೈದರಾಬಾದ್‌ನಿಂದ ಬೆಂಗಳೂರಿಗೆ ಸ್ಥಳಾಂತರಗೊಳಿಸಲಾಗಿದೆ. ತೆಲಂಗಾಣ ಚುನಾವಣೆ ಹಿನ್ನೆಲೆಯಲ್ಲಿ ಪಂದ್ಯ ಸ್ಥಳಾಂತರಗೊಳಿಸಿರುವುದಾಗಿ ತಿಳಿದುಬಂದಿದೆ.

ಐಸಿಸಿ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ಭಾರತಕ್ಕೆ ಸೋಲು: ಕೆ.ಎಲ್‌. ರಾಹುಲ್‌ ತವರಲ್ಲಿ ಬೇಸರ

ಭಾರತ ತಂಡ: ಸೂರ್ಯಕುಮಾರ್‌ ಯಾದವ್‌(ನಾಯಕ), ಋತುರಾಜ್‌ ಗಾಯಕ್ವಾಡ್‌, ಇಶಾನ್‌ ಕಿಶನ್‌, ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮಾ, ರಿಂಕು ಸಿಂಗ್‌, ಜಿತೇಶ್ ಶರ್ಮಾ, ವಾಷಿಂಗ್ಟನ್‌ ಸುಂದರ್‌, ಅಕ್ಷರ್‌ ಪಟೇಲ್‌, ಶಿವಂ ದುಬೆ, ರವಿ ಬಿಷ್ಣೋಯ್‌, ಅರ್ಶ್‌ದೀಪ್‌ ಸಿಂಗ್‌, ಪ್ರಸಿದ್ಧ್‌ ಕೃಷ್ಣ, ಆವೇಶ್‌ ಖಾನ್‌, ಮುಕೇಶ್‌ ಕುಮಾರ್‌, ಶ್ರೇಯಸ್‌ ಅಯ್ಯರ್‌(ಕೊನೆಯ 2 ಪಂದ್ಯಗಳಿಗೆ)

ಸರಣಿಯ ವೇಳಾಪಟ್ಟಿ

ಪಂದ್ಯ ದಿನಾಂಕ ಸ್ಥಳ

1ನೇ ಟಿ20 ನ.23 ವಿಶಾಖಪಟ್ಟಣಂ

2ನೇ ಟಿ20 ನ.26 ತಿರುವನಂತಪುರಂ

3ನೇ ಟಿ20 ನ.28 ಗುವಾಹಟಿ

4ನೇ ಟಿ20 ಡಿ.1 ರಾಯ್ಪುರ

5ನೇ ಟಿ20 ಡಿ.3 ಬೆಂಗಳೂರು
 

Follow Us:
Download App:
  • android
  • ios