ಗೆಳೆಯನಿಂದ ವಿನೋದ್ ಕಾಂಬ್ಳಿ ಪರಿಸ್ಥಿತಿ ಬಹಿರಂಗ, ನೆರವಿಗೆ ನಿಂತ 1983ರ ವಿಶ್ವಕಪ್ ತಂಡ!
ಟೀಂ ಇಂಡಿಯಾದಲ್ಲಿ ಅಬ್ಬರಿಸಿದ ವಿನೋದ್ ಕಾಂಬ್ಳಿ ಸದ್ಯದ ಪರಿಸ್ಥಿತಿ ಆಪ್ತ ಗೆಳೆಯನ ಸಚಿನ್ ತೆಂಡೂಲ್ಕರ್ ಭೇಟಿಯಿಂದ ಬಹಿರಂಗವಾಗಿತ್ತು. ಸಚಿನ್‌ನಿಂದ ನಿರಾಸೆ ಗೊಂಡಿದ್ದ ವಿನೋದ್ ಕಾಂಬ್ಳಿ ನರೆವಿಗೆ ಕಪಿಲ್ ದೇವ್ ಧಾವಿಸಿದ್ದರು. ಇದೀಗ 1983ರ ಇಡೀ ವಿಶ್ವಕಪ್ ತಂಡ ವಿನೋದ್ ಕಾಂಬ್ಳಿಗೆ ಜೊತೆ ನಿಲ್ಲಲಿದೆ ಎಂದು ಗವಾಸ್ಕರ್ ಹೇಳಿದ್ದಾರೆ. ಅಷ್ಟಕ್ಕೂ ಏನಾಗಿದೆ?
ಮುಂಬೈ(ಡಿ.07) ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭೇಟಿಯ ವಿಡಿಯೋ ಒಂದು ಭಾರಿ ಸಂಚಲನ ಸೃಷ್ಟಿಸಿದೆ. ಈ ವಿಡಿಯೋದಲ್ಲಿ ವಿನೋದ್ ಕಾಂಬ್ಳಿ ನಿರಾಸೆಗೊಂಡಿದ್ದರೂ ಹಲವು ಸಹಾಯ ಹಸ್ತಗಳು ನೆರವಿಗೆ ಚಾಚಿದೆ. ಹೌದು, ತನ್ನ ಬಳಿಕ ಸಚಿನ್ ಕುಳಿತುಕೊಳ್ಳಲಿಲ್ಲ ಎಂದು ನಿರಾಸೆಗೊಂಡಿದ್ದ ವಿನೋದ್ ಕಾಂಬ್ಳಿ ಅದೇ ಕಾರ್ಯಕ್ರಮದಲ್ಲಿ ಕೆಲ ಹೊತ್ತು ಮಾತನಾಡಿದ್ದರು. ಆದರೆ ಕಾಂಬ್ಳಿ ಮಾತು ಕೇಳಿಸಿಕೊಂಡ ಕ್ರಿಕೆಟ್ ದಿಗ್ಗಜರು ಮರುಗಿದ್ದಾರೆ. ಮಾಜಿ ನಾಯಕ ಕಪಿಲ್ ದೇವ್ ತಕ್ಷಣವೇ ವಿನೋದ್ ಕಾಂಬ್ಳಿಗೆ ನೆರವು ಘೋಷಿಸಿದ್ದರು. ಇದೀಗ 1983ರ ವಿಶ್ವಕಪ್ ವಿಜೇತ ತಂಡ ವಿನೋದ್ ಕಾಂಬ್ಳಿ ಜೊತೆಗೆ ನಿಲ್ಲಲಿದೆ. ವಿನೋದ್ ಕಾಂಬ್ಳಿ ಮತ್ತೆ ತನ್ನ ಸಹಜ ಜೀವನ ನಡೆಸಲು ನೆರವು ನೀಡಲಿದೆ ಎಂದು ಸುನಿಲ್ ಗವಾಸ್ಕರ್ ಭರವಸೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಗೆಳೆಯ ವಿನೋದ್ ಕಾಂಬ್ಳಿಯನ್ನು ಸಚಿನ್ ತೆಂಡೂಲ್ಕರ್ ಭೇಟಿಯಾಗಿದ್ದರು. ಈ ವೇಳೆ ವಿನೋದ್ ಕಾಂಬ್ಳಿಯ ಆರೋಗ್ಯ ಪರಿಸ್ಥಿತಿ ಬಹಿರಂಗವಾಗಿತ್ತು. ಕಳೆದ ಹಲವು ದಿನಗಳಿಂದ ಯಾವುದೇ ಕಾರ್ಯಕ್ರಮ, ಬಹಿರಂಗವಾಗಿ ಕಾಣಿಸಿಕೊಳ್ಳದ ವಿನೋದ್ ಕಾಂಬ್ಳಿ ಆರೋಗ್ಯ ತೀವ್ರ ಹದಗೆಟ್ಟಿದೆ ಅನ್ನೋದು ಸಚಿನ್ ಭೇಟಿ ವಿಡಿಯೋದಲ್ಲಿ ಬಹಿರಂಗವಾಗಿತ್ತು. ವಿನೋದ್ ಕಾಂಬ್ಳಿ ಮಾತುಗಳು ತೊದಲುತ್ತಿದೆ. ಯಾರ ಸಹಾಯವಿಲ್ಲದೆ ನಡೆಯಲು ಎದ್ದು ನಿಲ್ಲಿಲು ಸಾಧ್ಯವಿಲ್ಲದ ಪರಿಸ್ಥಿತಿ. ಹಲವು ಆರೋಗ್ಯ ಸಮಸ್ಯೆಗಳು ವಿನೋದ್ ಕಾಂಬ್ಳಿಯನ್ನು ಕಾಡುತ್ತಿರುವುದು ಬಹಿರಂಗವಾಗಿತ್ತು.
ಗೆಳೆಯ ಸಚಿನ್‌ನಿಂದ ನಿರಾಸೆಗೊಂಡ ಕಾಂಬ್ಳಿ ನೆರವಿಗೆ ನಿಂತ ವಿಶ್ವಕಪ್ ವಿಜೇತ ನಾಯಕ!
ಸಚಿನ್ ಕಾಂಬ್ಳಿ ವಿಡಿಯೋ ಬಹಿರಂಗವಾದ ಬೆನ್ನಲ್ಲೇ 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ನೆರವು ಘೋಷಿಸಿದ್ದರು. ವಿನೋದ್ ಕಾಂಬ್ಳಿ ಚಿಕಿತ್ಸೆ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಇದೇ ವೇಳೆ ವಿನೋದ್ ಕಾಂಬ್ಳಿ ಕುಡಿತ ಚಟ ಬಿಡಬೇಕು. ಬಿಟ್ಟರೆ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ಹೇಳಿದ್ದರು. ಇದಾದ ಬೆನ್ನಲ್ಲೇ ಇದೀಗ ಸುನಿಲ್ ಗವಾಸ್ಕರ್ ಮಹತ್ವದ ನೆರವು ಘೋಷಿಸಿದ್ದಾರೆ. 1983ರ ವಿಶ್ವಕಪ್ ವಿಜೇತ ತಂಡದ ಎಲ್ಲಾ ಸದಸ್ಯರು ವಿನೋದ್ ಕಾಂಬ್ಳಿ ಜೊತೆ ನಿಲ್ಲುತ್ತೇವೆ. ವಿನೋದ್ ಕಾಂಬ್ಳಿ ಮತ್ತೆ ತಮ್ಮ ಸಹಜ ಬದುಕಿಗೆ ಬರುವಂತೆ ಮಾಡಲು ಬೇಕಾದ ಎಲ್ಲಾ ನೆರವು ನೀಡುತ್ತೇವೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ವಿನೋದ್ ಕಾಂಬ್ಳಿ ನನಗೆ ಮಗನಿದ್ದಂತೆ. ಅವನು ಗಂಭೀರ ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ ಎದುರಿಸುತ್ತಿರುವುದು ಬೇಸರ ತಂದಿದೆ. ಹೀಗಾಗಿ ಇಡೀ ತಂಡದ ಸದಸ್ಯರು ಅಗತ್ಯವಾದ ಸಹಾಯ ಮಾಡುತ್ತಾರೆ. ಇದು ಹೇಗೆ, ಯಾವಾಗ, ಪ್ರಮಾಣ ಎಲ್ಲವೂ ಮುಂದಿನ ದಿನಗಳಲ್ಲಿ ಚರ್ಚಿಸಲಾಗುತ್ತದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ವಿನೋದ್ ಕಾಂಬ್ಳಿ ಭಾರತ ತಂಡ ಅತ್ಯುತ್ತಮ ಬ್ಯಾಟ್ಸ್‌ಮನ್. ಆದರೆ ವಿದಾಯದ ಬಳಿಕ ವಿನೋದ್ ಕಾಂಬ್ಳಿ ಕುಡಿತದ ದಾಸನಾಗಿದ್ದರು. ಸಚಿನ್ ಜೊತೆಗಿನ ಸ್ನೇಹ ಕೂಡ ಅಂತ್ಯಗೊಂಡಿತ್ತು.ಕೋಟಿ ಕೋಟಿ ಆಸ್ತಿ ಹೊಂದಿದ್ದ ವಿನೋದ್ ಕಾಂಬ್ಳಿ ಕುಡಿತದಿಂದ ಎಲ್ಲವನ್ನೂಕಳೆದುಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ವಿನೋದ್ ಕಾಂಬ್ಳಿ ಇದೇ ರೀತಿ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಿದ್ದರು. ಚೇತರಿಸಿಕೊಂಡು ಮತ್ತೆ ಕುಡಿತ ಆರಂಭಿಸಿದ ವಿನೋದ್ ಕಾಂಬ್ಳಿ ಇದೀಗ ಆರೋಗ್ಯದ ಜೊತೆಗೆ ಆರ್ಥಿಕವಾಗಿಯೂ ತೀವ್ರ ನಷ್ಟ ಅನುಭವಸಿದ್ದಾರೆ.
ಮೂಲೆಯಲ್ಲಿ ಕುಳಿತಿದ್ದ ಕಾಂಬ್ಳಿ ಭೇಟಿಯಾಗಿ ಗೆಳೆಯನ ಮನವಿ ತಿರಸ್ಕರಿಸಿದ್ರಾ ತೆಂಡೂಲ್ಕರ್?
ಸಚಿನ್-ಕಾಂಬ್ಳಿ ಭೇಟಿಯಿಂದ ಈ ಎಲ್ಲಾ ಮಾಹಿತಿಗಳು ಹೊರಬಂದಿದೆ. ಸಚಿನ್ ಬಾಲ್ಯದ ಗುರಿತು ರಮಾಕಾಂತ್ ಅಚ್ರೇಕರ್ ಮೆಮೋರಿಯಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಭೇಟಿಯಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಸಚಿನ್ ತೆಂಡೂಲ್ಕರ್, ದೂರದಲ್ಲಿ ಕುಳಿತಿದ್ದ ವಿನೋದ್ ಕಾಂಬ್ಳಿ ಭೇಟಿಯಾಗಿ ಮಾತನಾಡಿದ್ದರು. ಈ ವೇಳೆ ತನ್ನ ಪಕ್ಕ ಕುಳಿತುಕೊಳ್ಳುವಂತೆ ಕಾಂಬ್ಳಿ ಸಚಿನ್ ಕೈ ಹಿಡಿದು ಮನವಿ ಮಾಡಿದ್ದರು. ಆದರೆ ಸಚಿನ್ ಕಾರ್ಯಕ್ರಮದ ಜವಾಬ್ದಾರಿ ನಿರ್ವಹಿಸಲು ಅನಿವಾರ್ಯವಾಗಿ ತಮ್ಮ ಆಸನದತ್ತ ತೆರಳಿದ್ದರು. ಇದು ವಿನೋದ್ ಕಾಂಬ್ಳಿ ಬೇಸರಕ್ಕೆ ಕಾರಣವಾಗಿತ್ತು.