ಮುಂಬೈ(ಫೆ.08): ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. 2020ರ ಹೊಸ ವರ್ಷವನ್ನು ಈ ಜೋಡಿ ಗೆಳೆಯರ ಜೊತೆ ಥಾಯ್ಲೆಂಡ್‌ನಲ್ಲಿ ಆಚರಿಸಿತ್ತು. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಹಲವು ದಿನಗಳಿಂದ ರಾಹುಲ್ ಹಾಗೂ ಅಥಿಯಾ ನಡುವಿನ ಡೇಟಿಂಗ್ ಸುದ್ದಿಯಾಗುತ್ತಿದೆ. ಇದೀಗ ಪುತ್ರಿಯ ಡೇಟಿಂಗ್ ಕುರಿತು ಸುನಿಲ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಗೆಳತಿ ಜೊತೆ ಥಾಯ್ಲೆಂಡ್‌ನಲ್ಲಿ ಹೊಸ ವರ್ಷ ಆಚರಿಸಿದ ಕೆಎಲ್ ರಾಹುಲ್!

ಹೊಸ ವರ್ಷ ಸಂಭ್ರಮಾಚರಣೆ ಬಳಿಕ ರಾಹುಲ್ ಹಾಗೂ ಅಥಿಯಾ ನಡುವಿನ ಸಂಬಂಧ ಹೆಚ್ಚು ಚರ್ಚೆಯಾಗುತ್ತಿದೆ. ರಾಹುಲ್ ಹಾಗೂ ಅಥಿಯಾ ಅಧೀಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಇದೀಗ ಪುತ್ರಿ ಡೇಟಿಂಗ್ ಕುರಿತು ಸುನಿಲ್ ಶೆಟ್ಟಿ ಖಡಕ್ ಉತ್ತರ ನೀಡಿದ್ದಾರೆ. ನಾನು ಕೆಎಲ್ ರಾಹುಲ್ ಜೊತೆ ಯಾವುದೇ ಸಂಬಂಧ ಹೊಂದಿಲ್ಲ. ನೀವು(ಮಾಧ್ಯಮ) ಪುತ್ರಿ ಅಥಿಯಾಳನ್ನು ಕೇಳಿ ಎಂದು ಇಂಗ್ಲೀಷ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಫೋಟೋ ಪೋಸ್ಟ್ ಮಾಡಿ ಆತಿಯಾ ಶೆಟ್ಟಿಗೆ ಶುಭಕೋರಿದ ಕೆಎಲ್ ರಾಹುಲ್

ಪುತ್ರಿ ಡೇಟಿಂಗ್ ಸುದ್ದಿ ಸರಿಯೋ? ತಪ್ಪೋ ಎಂಬುದನ್ನು ನನಗೆ ತಿಳಿಸಿ, ಬಳಿಕ ಈ ಕುರಿತು  ನಾನು ಮಾತನಾಡುತ್ತೇನೆ. ನೀವೂ ಊಹಾಪೋಹಗಳನ್ನು ಹೇಳುತ್ತಿದ್ದೀರಿ. ನಿಮಗೆ ತಿಳಿದಿಲ್ಲ ಎಂದಾದರೆ, ನನ್ನನ್ನು ಹೇಗೆ ಕೇಳುವಿರಿ ಎಂದು ಸುನಿಲ್ ಶೆಟ್ಟಿ ಹೇಳಿದ್ದಾರೆ.

ಅಥಿಯಾ ಶೆಟ್ಟಿ ಜೊತೆ ಕೆಎಲ್ ರಾಹುಲ್ ಡಿನ್ನರ್ ಡೇಟ್?

ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ರಾಹುಲ್ ತಂಡದ ಕೀ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದಾರೆ.