ನವ​ದೆ​ಹ​ಲಿ(ಆ.04): ಭಾರ​ತೀಯ ಕ್ರಿಕೆಟ್‌ನಲ್ಲಿ ವಯೋ ವಂಚ​ನೆ ಬಿಸಿ​ಸಿಐ ಹೊಸ ಯೋಜನೆ ರೂಪಿ​ಸಿದೆ. 

2020-21ರ ಋುತು​ವಿ​ನಿಂದ ವಯೋ ವಂಚನೆ ಪ್ರಕ​ರಣಗಳಲ್ಲಿ ಸಿಕ್ಕಿ ಬೀಳುವ ಆಟ​ಗಾ​ರ​ರನ್ನು 2 ವರ್ಷ ನಿಷೇ​ಧಕ್ಕೆ ಗುರಿ​ಪ​ಡಿ​ಸಲು ನಿರ್ಧ​ರಿ​ಸಿ​ರುವ ಕ್ರಿಕೆಟ್‌ ಮಂಡಳಿ, ಅಂತಹ ಆಟ​ಗಾ​ರ​ರಿಗೆ ಯಾವುದೇ ವಯೋ​ಮಿ​ತಿಯ ಟೂರ್ನಿಗಳಲ್ಲಿ ಪಾಲ್ಗೊ​ಳ್ಳಲು ಅವ​ಕಾಶ ನೀಡ​ಲಾ​ಗು​ವು​ದಿಲ್ಲ ಎಂದು ಸ್ಪಷ್ಟ​ಪ​ಡಿ​ಸಿದೆ. 
ಇದೇ ವೇಳೆ ಈ ಹಿಂದೆ ಅಕ್ರಮ ದಾಖಲೆ ನೀಡಿ ಟೂರ್ನಿಗ​ಳಲ್ಲಿ ಆಡಿದ್ದ ಆಟ​ಗಾ​ರ​ರಿಗೆ ತಪ್ಪೊ​ಪ್ಪಿ​ಕೊ​ಳ್ಳಲು ಬಿಸಿ​ಸಿಐ ಅವ​ಕಾಶ ಕಲ್ಪಿ​ಸಿದೆ. ಸೆ.15ರೊಳಗೆ ಪತ್ರ/ಇಮೇಲ್‌ ಮೂಲಕ ಅಕ್ರ​ಮದ ಬಗ್ಗೆ ತಿಳಿ​ಸಿದರೆ ಅವರ ವಿರುದ್ಧ ಕ್ರಮಕೈಗೊ​ಳ್ಳು​ವು​ದಿಲ್ಲ, ಮಾಹಿತಿ ನೀಡ​ದೆ ಭವಿ​ಷ್ಯ​ದಲ್ಲಿ ಸಿಕ್ಕಿ ಬಿದ್ದರೆ ನಿಷೇಧಕ್ಕೆ ಒಳ​ಪ​ಡಿ​ಸು​ವು​ದಾಗಿ ಎಚ್ಚ​ರಿ​ಸಿದೆ.

ಈ ನಿರ್ಧಾರದಿಂದ ಅಂಡರ್ 16 ಕ್ರಿಕೆಟ್ ಟೂರ್ನಮೆಂಟ್‌ಗಳಲ್ಲಿ 14ರಿಂದ 16 ವರ್ಷದವರನ್ನು ಮಾತ್ರ ಪರಿಗಣಿಸಲಾಗುವುದು. ವಯೋಮಿತಿ ಸುಳ್ಳು ಹೇಳಿ ವಂಚನೆ ಮಾಡಿ ಮುಂದೆ ಸಿಕ್ಕಿಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ಎಚ್ಚರಿಕೆಯನ್ನು ಬಿಸಿಸಿಐ ರವಾಸಿದೆ. ಈ ವಿಚಾರವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ನ್ಯಾಷನಲ್ ಕ್ರಿಕೆಟ್ ಅಕಾಡಮಿಯ ಮುಖ್ಯಸ್ಥ ರಾಹುಲ್ ದ್ರಾವಿಡ್ ಗಂಬೀರವಾಗಿ ಪರಿಗಣಿಸಿದ್ದಾರೆ.

ದೇಸಿ ಕ್ರಿಕೆಟ್‌: ಬಿಸಿ​ಸಿಐನಿಂದ 100 ಪುಟ ಮಾರ್ಗಸೂಚಿ

ಇನ್ನು ವಯಸ್ಸಿನ ವಂಚನೆ ಬಗ್ಗೆ ಮಾಹಿತಿ ಬಿಚ್ಚಿಡಲು ಬಿಸಿಸಿಐ 24*7 ಹೆಲ್ಪ್ ಲೈನ್ ತೆರೆಯುವ ಮೂಲಕ ಒಂದು ವೇದಿಕೆ ಒದಗಿಸಿದೆ. ಸುಳ್ಳು ವಯಸ್ಸಿನ ಪ್ರಮಾಣ ಪತ್ರ ನೀಡಿದ ಆಟಗಾರರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಸ್ವಯಂ ಪ್ರೇರಿತವಾಗಿ ತಪ್ಪೊಪ್ಪಿಕೊಂಡು ಸರಿಯಾದ ಮಾಹಿತಿ ಒದಗಿಸಿ ಎಂದು ರಾಹುಲ್ ದ್ರಾವಿಡ್ ಮನವಿ ಮಾಡಿದ್ದಾರೆ.