Asianet Suvarna News Asianet Suvarna News

ದೇಸಿ ಕ್ರಿಕೆಟ್‌: ಬಿಸಿ​ಸಿಐನಿಂದ 100 ಪುಟ ಮಾರ್ಗಸೂಚಿ

ಬಿಸಿಸಿಐ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ 100 ಪುಟಗಳ ಮಾರ್ಗಸೂಚಿಯನ್ನು ಕಳಿಸಿದೆ. ಇದರಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿದೆ. ದೇಸಿ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಬಿಸಿಸಿಐ ಸಲಹೆಗಳೇನು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

BCCI issues SOPs to state Cricket associations for resumption of domestic cricket Tournament
Author
New Delhi, First Published Aug 4, 2020, 7:47 AM IST

ನವ​ದೆ​ಹ​ಲಿ(ಆ.04): ಕೊರೋನಾ ಸೋಂಕಿನ ಭೀತಿ ನಡುವೆಯೇ ಕ್ರಿಕೆಟ್‌ ಅಭ್ಯಾಸಕ್ಕೆ ಮರ​ಳು​ವ ದೇಸಿ ಕ್ರಿಕೆ​ಟಿಗರು, ಸೋಂಕು ತಗು​ಲಿ​ದರೆ ತಾವೇ ಜವಾ​ಬ್ದಾ​ರರು ಎಂದು ತಮ್ಮ ತಮ್ಮ ರಾಜ್ಯ ಸಂಸ್ಥೆಗಳಿಗೆ ಒಪ್ಪಿಗೆ ಪತ್ರ ನೀಡ​ಬೇಕು ಎಂದು ಬಿಸಿ​ಸಿಐ ತನ್ನ ಮಾರ್ಗ​ಸೂ​ಚಿ​ಯಲ್ಲಿ ತಿಳಿ​ಸಿದೆ. 

ಭಾನು​ವಾರ 100 ಪುಟಗಳ ಮಾರ್ಗಸೂಚಿ ಪ್ರಕ​ಟಿ​ಸಿ​ರುವ ಬಿಸಿ​ಸಿಐ, ಆಟ​ಗಾ​ರ​ರು ಕ್ರೀಡಾಂಗಣಗಳಿಗೆ ಆಗ​ಮಿಸಿ ಅಭ್ಯಾಸ ನಡೆ​ಸುವ ವೇಳೆ ಸುರ​ಕ್ಷತಾ ಕ್ರಮಗಳನ್ನು ಪಾಲಿ​ಸ​ಬೇಕು. ಅಭ್ಯಾಸ ಶಿಬಿರ ಆರಂಭ​ಗೊಳ್ಳುವ ಮುನ್ನ ಆಟ​ಗಾ​ರರ 2 ವಾರಗಳ ಪ್ರವಾಸ ಹಾಗೂ ಆರೋಗ್ಯ ವಿವರಗಳನ್ನು ಆನ್‌ಲೈನ್‌ನಲ್ಲಿ ಸಂಗ್ರ​ಹಿ​ಸ​ಬೇಕು ಎಂದು ತಿಳಿ​ಸಿದೆ. ಯಾವುದೇ ಆಟ​ಗಾ​ರ​ನಿಗೆ ಸೋಂಕಿನ ಲಕ್ಷಣ ಕಂಡು ಬಂದಲ್ಲಿ 2 ಬಾರಿ ಪರೀಕ್ಷೆ ನಡೆ​ಸು​ವಂತೆ ರಾಜ್ಯ ಸಂಸ್ಥೆಗಳಿಗೆ ಬಿಸಿ​ಸಿಐ ಸೂಚಿ​ಸಿದೆ. ಐಸಿಸಿ ನಿಯ​ಮದ ಪ್ರಕಾರ, ಆಟ​ಗಾ​ರರು ಚೆಂಡಿಗೆ ಎಂಜಲು ಹಾಕಿ ಉಜ್ಜು​ವಂತಿಲ್ಲ ಎಂದು ಬಿಸಿ​ಸಿಐ ಸ್ಪಷ್ಟ​ಪ​ಡಿ​ಸಿದೆ.

2004ರ ಸುನಾಮಿ ಅಲೆಯಿಂದ ಪಾರಾಗಿದ್ದ ಅನಿಲ್ ಕುಂಬ್ಳೆ!

60 ದಾಟಿ​ದ​ವ​ರಿ​ಗಿಲ್ಲ ಪ್ರವೇಶ: 60 ವರ್ಷದ ದಾಟಿದ ಕೋಚ್‌, ಸಹಾ​ಯಕ ಸಿಬ್ಬಂದಿ, ಮೈದಾನ ಸಿಬ್ಬಂದಿ ಸೇರಿ ಇನ್ಯಾ​ವುದೇ ಅಧಿ​ಕಾ​ರಿ​ಗ​ಳು ಅಭ್ಯಾಸ ಶಿಬಿರ ನಡೆ​ಯುವ ಸ್ಥಳಕ್ಕೆ ಪ್ರವೇ​ಶಿ​ಸು​ವಂತಿಲ್ಲ ಎಂದು ಮಾರ್ಗ​ಸೂ​ಚಿ​ಯ​ಲ್ಲಿ ತಿಳಿ​ಸಿ​ರುವ ಬಿಸಿ​ಸಿಐ, ದೇಸಿ ಕ್ರಿಕೆಟ್‌ ಟೂರ್ನಿಗಳನ್ನು ಆರಂಭಿ​ಸಲು ಟಾಸ್ಕ್‌ ಫೋರ್ಸ್‌ ರಚನೆ ಮಾಡಲು ಮುಂದಾ​ಗಿದೆ. ರಾಷ್ಟ್ರೀಯ ಕ್ರಿಕೆಟ್‌ ಅಕಾ​ಡೆಮಿ ಮುಖ್ಯಸ್ಥ ರಾಹುಲ್‌ ದ್ರಾವಿಡ್‌, ಟಾಸ್ಕ್‌ ಫೋರ್ಸ್‌ನ ಭಾಗವಾಗಿ​ರ​ಲಿ​ದ್ದಾರೆ.

2020-21ರ ದೇಸಿ ಋುತು ಆಗಸ್ಟ್‌ನಲ್ಲಿ ಆರಂಭ​ಗೊ​ಳ್ಳ​ಬೇ​ಕಿತ್ತು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಕೆಲ ಟೂರ್ನಿಗಳನ್ನು ನಡೆ​ಸ​ದಿ​ರುವ ನಿರ್ಧ​ರಿ​ಸಿ​ರುವ ಬಿಸಿ​ಸಿಐ, ಕೆಲ ದಿನ​ಗ​ಳಲ್ಲಿ ಪರಿಷ್ಕೃತ ವೇಳಾ​ಪಟ್ಟಿ ಪ್ರಕ​ಟಿ​ಸುವ ಸಾಧ್ಯತೆ ಇದೆ.

Follow Us:
Download App:
  • android
  • ios