ಹಂಬಂತೋಟ(ಫೆ.27):  ವೆಸ್ಟ್‌ಇಂಡೀಸ್‌ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 161 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. 

ದೆಹಲಿ ಗಲಭೆ; ಜನತೆಯಲ್ಲಿ ಸೆಹ್ವಾಗ್, ಯುವರಾಜ್ ಮನವಿ!

ಮೊದಲು ಬ್ಯಾಟ್‌ ಮಾಡಿದ ಲಂಕಾ ಆವಿಷ್ಕ ಫರ್ನಾಂಡೋ (127) ಹಾಗೂ ಕುಸಾಲ್‌ ಮೆಂಡಿಸ್‌ (119) ಶತಕ ಸಿಡಿಸಿ ಅಬ್ಬರಿಸಿದರು. ತಿಸರಾ ಪರೇರಾ 36 ರನ್ ಕಾಣಿಕೆ ನೀಡಿದರು. ಉಳಿದವರಿಂದ ನಿರೀಕ್ಷಿತ ರನ್ ಹರಿದುಬರಲಿಲ್ಲ. ಈ ಮೂಲಕ ಶ್ರೀಲಂಕಾ 50 ಓವರಲ್ಲಿ 8 ವಿಕೆಟ್‌ಗೆ 345 ರನ್‌ ಕಲೆಹಾಕಿತು. 

ಕಠಿಣ ಗುರಿ ಬೆನ್ನತ್ತಿದ ವಿಂಡೀಸ್‌ ವಾನಿಂಡು ಹಸರಂಗ ಹಾಗೂ ಲಕ್ಷನ್ ಸಂದಕ್ಕನ್ ದಾಳಿಗೆ ತತ್ತರಿಸಿತು. ನುವಾನ್ ಪ್ರದೀಪ್ ಹಾಗೂ ಎಂಜಲೋ ಮ್ಯಾಥ್ಯೂಸ್ ಕೂಡ , ವಿಂಡೀಸ್ ರನ್ ಓಟಕ್ಕೆ ಕಡಿವಾಣ ಹಾಕಿದರು. ಹೀಗಾಗಿ ವಿಂಡೀಸ್   39.1 ಓವರಲ್ಲಿ 184 ರನ್‌ಗಳಿಗೆ ಆಲೌಟ್‌ ಆಯಿತು. ಲಂಕಾ 161 ರನ್ ಭರ್ಜರಿ ಗೆಲುವು ಸಾಧಿಸಿತು.


ಸ್ಕೋರ್‌: ಶ್ರೀಲಂಕಾ 345/8, ವಿಂಡೀಸ್‌ 184/10