Asianet Suvarna News Asianet Suvarna News

ದೆಹಲಿ ಗಲಭೆ; ಜನತೆಯಲ್ಲಿ ಸೆಹ್ವಾಗ್, ಯುವರಾಜ್ ಮನವಿ!

ಪೌರತ್ವ ಕಾಯ್ದೆ ಪರ ವಿರೋಧ ಹೋರಾಟ ಹಿಂಸಾರೂಪಕ್ಕೆ ತಿರುಗಿ 20 ಮಂದಿ ಸಾವೀಗೀಡಾಗಿದ್ದಾರೆ. ಉಗ್ರ ಸ್ವರೂಪ ಪಡೆದುಕೊಂಡಿರುವ ಹೋರಾಟ ರಾಷ್ಟ್ರ ರಾಜಧಾನಿಯನ್ನೇ ಸ್ಥಬ್ತವಾಗಿಸಿದೆ. ಇದೀಗ ದೆಹಲಿ ಗಲಬೆ ಕುರಿತು ಟೀಂ ಇಂಡಿಯಾ ಕ್ರಿಕೆಟಿಗರು ಪ್ರತಿಕ್ರಿಯಿಸಿದ್ದಾರೆ.
 

Yuvraj sing virender sehwag request Delhi people to maintain peace
Author
Bengaluru, First Published Feb 26, 2020, 8:32 PM IST

ದೆಹಲಿ(ಫೆ.26): ರಾಷ್ಟ್ರ ರಾಜಧಾನಿ ದೆಹಲಿ ಹೊತ್ತಿ ಉರಿಯುತ್ತಿದೆ. ಪೌರತ್ವ ಪರ ವಿರೋಧ ಹೋರಾಟದ ಹಿಂಸೆಯಲ್ಲಿ 20 ಮಂದಿ ಸಾವೀಗೀಡಾಗಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಪೊಲೀಸರಿಗೆ ಸೂಚಿಸಿದೆ. ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ. ಇದೀಗ ದೆಹಲಿ ಗಲಭೆ ಕುರಿತು ಮಾಜಿ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್ ಹಾಗೂ ಯುವರಾಜ್ ಸಿಂಗ್ ಮನವಿ ಮಾಡಿದ್ದಾರೆ. 

ದೆಹಲಿ ಗಲಭೆ ಕುರಿತು ಪ್ರತಿಕ್ರಿಯಿಸಿರುವ ಯುವರಾಜ್ ಸಿಂಗ್, ದೆಹಲಿ ಪರಿಸ್ಥಿತಿ ಬೆಚ್ಚಿ ಬೀಳಿಸುವಂತಿದೆ. ಈ ಸಂದರ್ಭದಲ್ಲಿ ಎಲ್ಲರು ಶಾಂತಿಯಿಂದಿರಿ ಎಂದು ಮನವಿ ಮಾಡುತ್ತೇನೆ. ಅಧಿಕಾರಿಗಳು ಪೊಲೀಸಲು ಪರಿಸ್ಥಿತಿಯನ್ನು ಹತೋಟಿ ತರಲಿದ್ದಾರೆ. ನಾವೆಲ್ಲ ಮನುಷ್ಯರು. ನಮಗೆ ಪ್ರೀತಿ, ವಿಶ್ವಾಸ, ಗೌರವ ಮುಖ್ಯ ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.

 

ದೆಹಲಿಯಲ್ಲಿ ನಡೆಯುತ್ತಿುವ ಗಲಭೆ ದುರದೃಷ್ಟಕರ. ನಾನು ಎಲ್ಲರಲ್ಲಿ ಮನವಿ ಮಾಡುತ್ತೇನೆ. ಎಲ್ಲರೂ ಶಾಂತಿ ಹಾಗೂ ಸಹನೆಯಿಂದಿರಿ. ರಾಷ್ಟ್ರ ರಾಜಧಾನಿಯಲ್ಲಿ ಯಾರೇ ಗಾಯಗೊಂಡರೂ, ಯಾರೇ ಸಾವನ್ನಪ್ಪಿದರೂ ಅದು ಅತೀ ದೊಡ್ಡ ನಷ್ಟ. ಹೀಗಾಗಿ ಎಲ್ಲರೂ ಶಾಂತಿ ಕಾಪಾಡಿ ಎಂದು ವಿರೇಂದ್ರ ಸೆಹ್ವಾಗ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

 

ಹರ್ಭಜನ್ ಸಿಂಗ್ ಕೂಡ ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ. 
 

Follow Us:
Download App:
  • android
  • ios