ಕೊಲಂಬೊ(ಮೇ.26): 2 ಗ್ರಾಂ ಹೆರಾ​ಯಿನ್‌ ಇಟ್ಟು​ಕೊಂಡು ಕಾರಿ​ನಲ್ಲಿ ತೆರ​ಳು​ತ್ತಿದ್ದ ಶ್ರೀಲಂಕಾದ ಅಂತಾ​ರಾ​ಷ್ಟ್ರೀಯ ಕ್ರಿಕೆ​ಟಿಗ ಶೆಹಾನ್‌ ಮದು​ಶನಕನನ್ನು ಲಂಕಾ ಪೊಲೀ​ಸರು ಬಂಧಿ​ಸಿ​ದ್ದಾರೆ. 

ಲಾಕ್‌ಡೌನ್‌ ವೇಳೆ ಕಾರ್‌ನಲ್ಲಿ ಸಂಚ​ರಿ​ಸು​ತ್ತಿದ್ದ ಶೆಹಾನ್‌ನನ್ನು ಪೊಲೀ​ಸರು ತಡೆದು ವಿಚಾ​ರಣೆ ನಡೆ​ಸಿ​ದಾಗ, ಹೆರಾ​ಯಿನ್‌ ಇಟ್ಟು​ಕೊಂಡಿ​ರುವ ವಿಷಯ ಬೆಳ​ ಕಿಗೆ ಬಂದಿದೆ. ಶೆಹಾನ್‌ ಮದು​ಶನಕ ಹಾಗೂ ಆತನ ಸ್ನೇಹಿತನನ್ನು ಮೇ 23ರಂದು ಪೊಲೀಸರು ಬಂಧಿಸಿದ್ದಾರೆ.

ಲಂಕಾದ ಪನ್ನಾಲ ಮ್ಯಾಜಿಸ್ಟ್ರೇಟ್ ಕೋರ್ಟ್ ಶೆಹಾನ್‌ ಮದು​ಶನಕ ಅವರನ್ನು 14 ದಿನಗಳ ಕಾಲ ಅಂದರೆ ಜೂನ್ 02ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಬಗ್ಗೆ ಮಾತನಾಡಿದ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಸಿಇಒ ಆಶ್ಲೇ ಡಿ ಸಿಲ್ವಾ, ನಮಗೆ ಇದುವರೆಗೂ ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಶೆಹಾನ್‌ ಮದು​ಶನಕ ನಮ್ಮ ಕೇಂದ್ರೀಯ ಗುತ್ತಿಗೆ ಆಟಗಾರರಾಗಿದ್ದಾರೆ. ಒಂದು ವೇಳೆ ಡ್ರಗ್ಸ್ ತೆಗೆದುಕೊಂಡು ಹೋಗಿರುವ ವಿಚಾರ ಖಚಿತವಾದರೆ ಗುತ್ತಿಗೆ ರದ್ದು ಪಡಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. 

ಈ ಸಲ ಕಪ್ ನಿಮ್ದೆ; RCB ಟ್ರೋಲ್ ಮಾಡಿದ CSK!

2018ರಲ್ಲಿ ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ಗೆ ಪಾದ​ರ್ಪಣೆ ಮಾಡಿದ್ದ ಬಲಗೈ ವೇಗಿ ಶೆಹಾನ್‌, ಚೊಚ್ಚಲ ಏಕ​ದಿ​ನ ಪಂದ್ಯ​ದಲ್ಲೇ ಬಾಂಗ್ಲಾ​ದೇಶ ವಿರು​ದ್ಧ ಹ್ಯಾಟ್ರಿಕ್‌ ವಿಕೆಟ್‌ ಕಬ​ಳಿ​ಸಿ​ದ್ದರು. ಇನ್ನು ಬಾಂಗ್ಲಾದೇಶ ವಿರುದ್ಧವೇ ಟಿ20 ಕ್ರಿಕೆಟ್‌ಗೂ ಪಾದಾರ್ಪಣೆ ಮಾಡಿದ್ದರು.