Asianet Suvarna News Asianet Suvarna News

ICC T20 World Cup: ಶ್ರೀಲಂಕಾ ಚಾಲೆಂಜ್‌ಗೆ ರೆಡಿಯಾದ ದಕ್ಷಿಣ ಆಫ್ರಿಕಾ!

*ಸೆಮಿಫೈನಲ್‌ ರೇಸ್‌ನಲ್ಲಿ ಉಳಿದುಕೊಳ್ಳಲು ಗೆಲುವು ಅನಿವಾರ್ಯ
*ಎರಡೂ ಪಂದ್ಯಗಳಲ್ಲಿ ತಂಡದ ಬೌಲರ್‌ಗಳು
*ತಲಾ 1 ಗೆಲುವು ಹಾಗೂ ಸೋಲು ಕಂಡಿರುವ ತಂಡಗಳು

Sri Lanka to Face South Africa in 25th Match of ICC T20 World Cup
Author
Bengaluru, First Published Oct 30, 2021, 7:07 AM IST

ಶಾರ್ಜಾ(ಅ 30): ಟಿ20 ವಿಶ್ವಕಪ್‌ ಗುಂಪು-1ರ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ (South Africa) ಶ್ರೀಲಂಕಾ ಎದುರಾಗಲಿದೆ. ವರ್ಣಭೇದ ವಿರುದ್ಧದ ಆಂದೋಲನಕ್ಕೆ ಬೆಂಬಲಿಸಲು ಒಪ್ಪಿಗೆ ನೀಡಿರುವ ತಾರಾ ಕ್ರಿಕೆಟಿಗ ಕ್ವಿಂಟನ್‌ ಡಿ ಕಾಕ್‌ ಮೇಲೆ ಎಲ್ಲರ ಕಣ್ಣಿದೆ. ಎರಡೂ ತಂಡಗಳು ಆಡಿರುವ ಎರಡು ಪಂದ್ಯಗಳಲ್ಲಿ ತಲಾ 1 ಗೆಲುವು ಹಾಗೂ ಸೋಲು ಕಂಡಿವೆ. ಸೆಮಿಫೈನಲ್‌ ರೇಸ್‌ನಲ್ಲಿ ಉಳಿದುಕೊಳ್ಳಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

T20 World Cup 2021: ಒಂದೇ ಓವರ್‌ಲ್ಲಿ 4 ಸಿಕ್ಸರ್, ಆಫ್ಘಾನ್ ವಿರುದ್ಧ ಪಾಕ್‌ಗೆ ರೋಚಕ ಗೆಲುವು!

ದಕ್ಷಿಣ ಆಫ್ರಿಕಾ ತನ್ನ ಬೌಲಿಂಗ್‌ ಪಡೆಯ ಮೇಲೆ ಹೆಚ್ಚು ವಿಶ್ವಾಸವಿರಿಸಿದೆ. ಎರಡೂ ಪಂದ್ಯಗಳಲ್ಲಿ ತಂಡದ ಬೌಲರ್‌ಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ಮತ್ತೊಂದೆಡೆ ಶ್ರೀಲಂಕಾ (Sri Lanka) ಕಳೆದ ಪಂದ್ಯದಲ್ಲಿ ಭರ್ಜರಿ ಆರಂಭ ಪಡೆದರೂ ದಿಢೀರ್‌ ಬ್ಯಾಟಿಂಗ್‌ ಕುಸಿತ ಕಂಡು ಸೋಲುಂಡಿತ್ತು. ತಂಡ ಸಾಂಘಿಕ ಪ್ರದರ್ಶನ ತೋರಿದರಷ್ಟೇ ಗೆಲುವು ಒಲಿಯಲಿದೆ. ಕಳೆದ 6 T20 ಪಂದ್ಯಾವಗಳಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿದೆ. ವೆಸ್ಟ್ ಇಂಡೀಸ್‌ ವಿರುದ್ಧ ದಕ್ಷಿಣ ಆಫ್ರಿಕಾ ಜಯ ಸಾಧಿಸಿತ್ತು. ಇತ್ತ ಶ್ರೀಲಂಕಾ ಆಸ್ಟ್ರೇಲಿಯಾ  ವಿರುದ್ಧ ಸೋಲು ಕಂಡಿತ್ತು.‌

T20 World Cup: ಬಾಂಗ್ಲಾ ಎದುರು ವಿಂಡೀಸ್‌ಗೆ ರೋಚಕ ಜಯ

ಅಕ್ಟೋಬರ್‌ 26 ರಂದು ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಕ್ವಿಂಟನ್‌ ಡಿ ಕಾಕ್‌ (Quinton de Kock) ಮಂಡಿಯೂರಲು ನಿರಾಕರಿಸಿದ್ದರು. ಟಿ20 ವಿಶ್ವಕಪ್‌ನ (T20 World Cup) ಪಂದ್ಯಕ್ಕೂ ಮುನ್ನ ವರ್ಣಭೇದ ನೀತಿ ವಿರುದ್ಧದ ಆಂದೋಲನದ ಭಾಗವಾಗಿ ಮಂಡಿಯೂರಿ ಕುಳಿತು ಬೆಂಬಲ ಸೂಚಿಸುವಂತೆ ತನ್ನ ಆಟಗಾರರಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ(ಸಿಎಸ್‌ಎ) ಸೂಚಿಸಿತ್ತು. ಆದರೆ ಡಿ ಕಾಕ್‌ ಸಿಎಸ್‌ಎ ಸೂಚನೆಗೆ ವಿರೋಧ ವ್ಯಕ್ತಪಡಿಸಿದ್ದಲ್ಲದೇ, ಆಡುವ ಅಂತಿಮ 11ರ ಬಳಗದಿಂದ ಹಿಂದಕ್ಕೆ ಸರಿದರು. ತಂಡದ ಮೊದಲ ಕಪ್ಪು ವರ್ಣದ ನಾಯಕರಾಗಿರುವ ತೆಂಬಾ ಬವುಮಾ ಹಾಗೂ ಇತರ ಆಟಗಾರರು ಆಂದೋಲನ ಬೆಂಬಲಿಸಿ ಮಂಡಿಯೂರಿ ಕುಳಿತರು. ಆದರೆ ನಂತರ ಕ್ಷಮೆಯಾಚಿಸಿದ ಕ್ವಿಂಟನ್‌ ಆಂದೋಲನಕ್ಕೆ ಬೆಂಬಲಿಸಲು ಒಪ್ಪಿಗೆ ನೀಡಿದ್ದರು. 

ಬಾಂಗ್ಲಾ ಎದುರು ವಿಂಡೀಸ್‌ಗೆ ರೋಚಕ ಜಯ! 

ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ದ ಹಾಲಿ ಚಾಂಪಿಯನ್‌ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು (West Indies Cricket) 3 ರನ್‌ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಸೆಮೀಸ್‌ ಕನಸ್ಸನ್ನು ಜೀವಂತವಾಗಿರಿಸಿಕೊಂಡಿದೆ. ಇದೇ ವೇಳೆ ಬಾಂಗ್ಲಾದೇಶ ತಂಡದ ಸೆಮೀಸ್‌ ಕನಸು ಬಹುತೇಕ ಭಗ್ನವಾಗಿದೆ.

ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡವು 7 ವಿಕೆಟ್ ಕಳೆದುಕೊಂಡು 142 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡ (Bangladesh Cricket Team) ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಟಿ20 ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಶಕೀಬ್ ಅಲ್ ಹಸನ್ (Shakib Al Hasan) ಕೇವಲ 9 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನೋರ್ವ ಆರಂಭಿಕ ಬ್ಯಾಟ್ಸ್‌ಮನ್‌ ಮೊಹಮ್ಮದ್ ನಯೀಮ್‌ 17 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. 

T20 World Cup: ಕೋಕಾ ಕೋಲಾ ಬದಿಗೆ ಸರಿಸಿ, ರೊನಾಲ್ಡೋ ನೆನಪಿಸಿದ ಡೇವಿಡ್ ವಾರ್ನರ್..!

ಇದಾದ ಬಳಿಕ ಲಿಟನ್ ದಾಸ್‌ (Liton Das) ಹಾಗೂ ಸೌಮ್ಯ ಸರ್ಕಾರ್ ಜೋಡಿ 31 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸೌಮ್ಯ ಸರ್ಕಾರ್ ಕೂಡಾ 17 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮುಷ್ಫಿಕುರ್ ರಹೀಮ್ ಕೇವಲ 8 ರನ್‌ಗೆ ವಿಕೆಟ್‌ ಒಪ್ಪಿಸಿದ್ದು ತಂಡಕ್ಕೆ ಕೊಂಚ ಹಿನ್ನೆಡೆಯಾಗಿ ಪರಿಣಮಿಸಿತು.

ಆಫ್ಘಾನ್ ವಿರುದ್ಧ ಪಾಕ್‌ಗೆ ರೋಚಕ ಗೆಲುವು!

ನಿನ್ನೆ(ಅ. 29) ನಡೆದ ಪಂದ್ಯದಲ್ಲಿ ಬಾಬರ್ ಅಜಮ್(Babar Azam) ಅರ್ಧಶತಕ ಹಾಗೂ ಆಸಿಫ್ ಆಲಿ(Asif Ali) ಒಂದೇ ಓವರ್‌ನಲ್ಲಿ ಸಿಡಿಸಿದ ನಾಲ್ಕು ಸಿಕ್ಸರ್ ನೆರವಿನಿಂದ ಆಫ್ಘಾನಿಸ್ತಾನ(Afghanistan) ವಿರುದ್ಧ ಪಾಕಿಸ್ತಾನ(Pakistan) 5 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ T20 World Cup 2021 ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.

Follow Us:
Download App:
  • android
  • ios