Asianet Suvarna News Asianet Suvarna News

ವಿರಾಟ್ ಕೊಹ್ಲಿ vs ಬಾಬರ್ ಅಜಂ ಇಬ್ಬರಲ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಹೆಸರಿಸಿದ ಸನತ್ ಜಯಸೂರ್ಯ..!

ಮತ್ತೆ ಮುನ್ನೆಲೆಗೆ ಬಂದ ವಿರಾಟ್ ಕೊಹ್ಲಿ vs ಬಾಬರ್ ಅಜಂ ಚರ್ಚೆ
ಏಷ್ಯಾಕಪ್ ಟೂರ್ನಿಯಲ್ಲಿ ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ 
ವಿರಾಟ್-ಬಾಬರ್ ನಡುವೆ ತಮ್ಮ ನೆಚ್ಚಿನ ಆಟಗಾರನನ್ನು ಹೆಸರಿಸಿದ ಜಯಸೂರ್ಯ

Sri Lanka Legendry Cricketer Sanath Jayasuriya picks Virat Kohli over Babar Azam kvn
Author
First Published Sep 10, 2022, 4:28 PM IST

ದುಬೈ(ಸೆ.10): ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿ ಹಾಗೂ ಬಾಬರ್ ಅಜಂ ಅವರ ನಡುವಿನ ಹೋಲಿಕೆ ಮತ್ತೊಮ್ಮೆ ಆರಂಭವಾಗಿದೆ. ಇದೀಗ ಈ ಚರ್ಚೆಗೆ ಶ್ರೀಲಂಕಾ ಕ್ರಿಕೆಟ್ ದಂತಕಥೆ ಸನತ್ ಜಯಸೂರ್ಯ ಕೂಡಾ ಧ್ವನಿಗೂಡಿಸಿದ್ದು, ಈ ಇಬ್ಬರು ಆಟಗಾರರ ಪೈಕಿ ತಮ್ಮ ಹಾಗೂ ತಮ್ಮ ಪುತ್ರನ ನೆಚ್ಚಿನ ಆಟಗಾರ ಯಾರು ಎನ್ನುವುದನ್ನು ಬಹಿರಂಗ ಪಡೆದಿದ್ದಾರೆ. ಇದೀಗ ಮತ್ತೊಮ್ಮೆ ಬಾಬರ್ ಅಜಂ ಹಾಗೂ ವಿರಾಟ್ ಕೊಹ್ಲಿ ಈ ಇಬ್ಬರಲ್ಲಿ ಯಾರು ಬೆಸ್ಟ್ ಎನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ.

ಕಳೆದ ಕೆಲ ವರ್ಷಗಳಿಂದಲೂ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನ ನಾಯಕ ಬಾಬರ್ ಅಜಂ, ಈ ಇಬ್ಬರ ಪೈಕಿ ಯಾರು ಅತ್ಯುತ್ತಮ ಆಟಗಾರರ ಎನ್ನುವ  ಚರ್ಚೆ ಆಗಾಗಾ ನಡೆಯುತ್ತಲೇ ಇರುತ್ತದೆ. ಹಲವು ಕ್ರಿಕೆಟಿಗರು ಈ ಚರ್ಚೆಗೆ ವಿಭಿನ್ನ ಉತ್ತರ ನೀಡಿದ್ದಾರೆ. ಕೆಲವು ಕ್ರಿಕೆಟಿಗರು ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಆಟಗಾರ ಎಂದರೆ ಮತ್ತೆ ಕೆಲವರು ಬಾಬರ್ ಅಜಂ, ಸದ್ಯ ಅತ್ಯುತ್ತಮ ಆಟಗಾರ ಎಂದು ಬಣ್ಣಿಸಿದ್ದೂ ಇದೆ.

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ತಮ್ಮ ತಂಡವನ್ನು ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್‌ಗೆ ಕೊಂಡೊಯ್ದಿದ್ದಾರೆ. ಫೈನಲ್‌ನಲ್ಲಿ ಪಾಕಿಸ್ತಾನ ತಂಡವು ಏಷ್ಯಾಕಪ್ ಟ್ರೋಫಿಗಾಗಿ ಶ್ರೀಲಂಕಾ ಎದುರು ಸೆಣಸಾಟ ನಡೆಸಲಿದೆ. ಆದರೆ ಏಷ್ಯಾಕಪ್ ಟೂರ್ನಿಗೂ ಮುನ್ನ ಅದ್ಭುತ ಲಯದಲ್ಲಿದ್ದ ಬಾಬರ್ ಅಜಂ, ಏಷ್ಯಾಕಪ್ ಟೂರ್ನಿಯಲ್ಲಿ ತಮ್ಮ ಲಯದ ಸಮಸ್ಯೆ ಎದುರಿಸುತ್ತಿದ್ದಾರೆ.

ಪಾಕಿಸ್ತಾನ ಏಷ್ಯಾಕಪ್ ಗೆಲ್ಲೊಲ್ಲ: ಪಾಕ್ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಬಾಬರ್ ಅಜಂ ಪಡೆ ಮೇಲೆ ಗರಂ

ಇನ್ನೊಂದೆಡೆ ಮಾಜಿ ನಾಯಕ ವಿರಾಟ್ ಕೊಹ್ಲಿ, ಸಾಕಷ್ಟು ವಿಶ್ರಾಂತಿ ಬಳಿಕ ಏಷ್ಯಾಕಪ್ ಟೂರ್ನಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಸೂಪರ್ 4 ಹಂತದಲ್ಲಿ ಶ್ರೀಲಂಕಾ ಎದುರು ವೈಪಲ್ಯ ಅನುಭವಿಸಿದ್ದು ಬಿಟ್ಟರೇ ಉಳಿದೆಲ್ಲಾ ಪಂದ್ಯಗಳಲ್ಲೂ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಮಿಂಚಿದರು. ಅದರಲ್ಲೂ ಆಫ್ಘಾನಿಸ್ತಾನ ಎದುರಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸ್ಪೋಟಕ 122 ರನ್ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೊದಲ ಶತಕ ಬಾರಿಸಿ ಮಿಂಚಿದರು.

ಇನ್ನು ಕ್ರೀಡಾ ವೆಬ್‌ಸೈಟ್‌ Sportskeeda ಜತೆಗಿನ ಸಂಭಾಷಣೆಯಲ್ಲಿ ಸನತ್ ಜಯಸೂರ್ಯ, ಬಾಬರ್ ಅಜಂ ಹಾಗೂ ವಿರಾಟ್ ಕೊಹ್ಲಿ, ಈ ಇಬ್ಬರು ಆಟಗಾರರ ಪೈಕಿ, ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಆಟಗಾರ ಎಂದು ತಿಳಿಸಿದ್ದಾರೆ. ತಮ್ಮ ಮಗನಿಗೂ ವಿರಾಟ್ ಕೊಹ್ಲಿಯೇ ಇಷ್ಟ. ಅವನು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ ಎಂದು ಜಯಸೂರ್ಯ ಹೇಳಿದ್ದಾರೆ.

ನಾನು ವಿರಾಟ್ ಕೊಹ್ಲಿಯನ್ನು ಹೆಚ್ಚು ಇಷ್ಟಪಡುತ್ತೇನೆ. ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ. ನನಗೆ ಮಾತ್ರವಲ್ಲ ನನ್ನ ಮಗನಿಗೂ ವಿರಾಟ್ ಕೊಹ್ಲಿ ಅಚ್ಚುಮೆಚ್ಚು ಎಂದು ಜಯಸೂರ್ಯ ಹೇಳಿದ್ದಾರೆ.

Follow Us:
Download App:
  • android
  • ios