* ಏಷ್ಯಾಕಪ್‌ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದಲ್ಲಿ  ಲಂಕಾ ಎದುರು ಸೋಲುಂಡ ಪಾಕಿಸ್ತಾನ* ಲಂಕಾ ಎದುರಿನ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ ಪಾಕಿಸ್ತಾನ ತಂಡ* ಇದರ ಬೆನ್ನಲ್ಲೇ ಎಚ್ಚೆತ್ತುಕೊಳ್ಳಿ ಎಂದು ಪಾಕ್‌ ತಂಡಕ್ಕೆ ಕಿವಿಮಾತು

ದುಬೈ(ಸೆ.10): ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನೀರಸ ಪ್ರದರ್ಶನ ಮುಂದುವರೆದಿದ್ದು, ಶ್ರೀಲಂಕಾ ಎದುರು 5 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ. ಏಷ್ಯಾಕಪ್ ಫೈನಲ್‌ ಪಂದ್ಯಕ್ಕೂ ಮುನ್ನ ಉಭಯ ತಂಡಗಳ ಪಾಲಿಗೆ ಒಂದು ರೀತಿ ಅಭ್ಯಾಸ ಪಂದ್ಯ ಎನಿಸಿದ್ದ ಪಂದ್ಯದಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಸೋಲು ಅನುಭವಿಸಿದ ರೀತಿಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಈಗಾಗಲೇ ಪಾಕಿಸ್ತಾನ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳು ಫೈನಲ್‌ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿವೆ. ಇದೇ ಸಪ್ಟೆಂಬರ್ 11ರಂದು ಭಾನುವಾರ ನಡೆಯಲಿರುವ ಹೈವೋಲ್ಟೇಜ್ ಫೈನಲ್‌ನಲ್ಲಿ ಉಭಯ ತಂಡಗಳು ಏಷ್ಯಾಕಪ್ ಟ್ರೋಫಿಗಾಗಿ ಕಾದಾಟ ನಡೆಸಲಿವೆ. ಪರಿಸ್ಥಿತಿ ಕೈಮೀರುವ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡವು ಎಚ್ಚೆತ್ತುಕೊಳ್ಳಬೇಕಿದೆ ಎಂದು ಹಲವು ಮಾಜಿ ಆಟಗಾರರು ಬಾಬರ್ ಅಜಂ ಪಡೆಗೆ ಕಿವಿ ಮಾತು ಹೇಳಿದ್ದಾರೆ. ಇನ್ನು ಹಲವು ನೆಟ್ಟಿಗರು, ಪಾಕಿಸ್ತಾನ ಕ್ರಿಕೆಟ್ ತಂಡವು ಈ ರೀತಿಯ ಆಟಗಾರರನ್ನು ಇಟ್ಟುಕೊಂಡು ಏಷ್ಯಾಕಪ್ ಗೆಲ್ಲಲು ಸಾಧ್ಯವಿಲ್ಲ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

Asia Cup ಫೈನಲ್‌ಗೂ ಮುನ್ನ ರಿಹರ್ಸಲ್, ಪಾಕ್ ವಿರುದ್ಧ ಟಾಸ್ ಗೆದ್ದ ಲಂಕಾ !

ಈ ಕುರಿತಂತೆ ಟ್ವೀಟ್ ಮಾಡಿರುವ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್, ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಇದು ಎಚ್ಚರಿಕೆಯ ಕರೆಘಂಟೆ. ಫೈನಲ್‌ನಲ್ಲಿ ಮೈಚಳಿ ಬಿಟ್ಟು ಆಡಿ. ಪ್ರಶಸ್ತಿಯನ್ನು ಗೆದ್ದು ತನ್ನಿ ಎಂದು ರಾವುಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಅಖ್ತರ್ ಕಿವಿ ಮಾತು ಹೇಳಿದ್ದಾರೆ.

Scroll to load tweet…

ಹೇಳಲು ಮಾತೇ ಬರುತ್ತಿಲ್ಲ, ಬೇಸರವಾಗುತ್ತಿದೆ. ನಿರೀಕ್ಷೆಗಿಂತ ಕಳಪೆ ಬ್ಯಾಟಿಂಗ್. ಕಮ್ ಆನ್ ಬಾಯ್ಸ್‌ ಎಂದು ಸಿಟ್ಟಿನ ಎಮೋಜಿ ಬಳಸಿ ಟ್ವೀಟ್ ಮಾಡಿದ್ದಾರೆ ಪಾಕ್ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಕಮ್ರಾನ್ ಅಕ್ಮಲ್‌.

Scroll to load tweet…

ಇನ್ನು ಮೊಹಮ್ಮದ್ ಸಾರೋಶ್ ಮುಘಲ್‌, ಖುಷ್ದಿಲ್‌ ಶಾ, ಬಾಬರ್ ಅಜಂ, ಫಖರ್ ಜಮಾನ್ ಇಂತಹ ಆಟಗಾರರನ್ನು ಇಟ್ಟುಕೊಂಡು ಪಾಕಿಸ್ತಾನ ಕ್ರಿಕೆಟ್ ತಂಡವು ಏಷ್ಯಾಕಪ್ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…
Scroll to load tweet…

ಏಷ್ಯಾಕಪ್‌: ಪಾಕಿಸ್ತಾನ ವಿರುದ್ಧ ಲಂಕಾಕ್ಕೆ ಗೆಲುವು

ದುಬೈ: ಏಷ್ಯಾಕಪ್‌ ಟಿ20 ಟೂರ್ನಿಯ ಸೂಪರ್‌-4 ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ 5 ವಿಕೆಟ್‌ ಗೆಲುವು ಸಾಧಿಸಿತು. ಫೈನಲ್‌ಗೂ ಮುನ್ನ ಅಭ್ಯಾಸದಂತಿದ್ದ ಈ ಪಂದ್ಯದಲ್ಲಿ ಎರಡೂ ತಂಡಗಳ ಬೌಲರ್‌ಗಳು ಉತ್ತಮ ಪ್ರದರ್ಶನ ತೋರಿದರು. ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ, 63 ರನ್‌ಗೆ 1 ವಿಕೆಟ್‌ ಕಳೆದುಕೊಂಡು ದೊಡ್ಡ ಮೊತ್ತದತ್ತ ಮುನ್ನುಗ್ಗುವ ನಿರೀಕ್ಷೆಯಲ್ಲಿತ್ತು. ಆದರೆ ಲಂಕಾ ಸ್ಪಿನ್ನರ್‌ಗಳ ದಾಳಿಗೆ ತತ್ತರಿಸಿದ ಪಾಕಿಸ್ತಾನ 19.1 ಓವರಲ್ಲಿ 121 ರನ್‌ಗೆ ಕುಸಿಯಿತು. 58 ರನ್‌ಗೆ ಕೊನೆ 9 ವಿಕೆಟ್‌ ಬಿದ್ದವು. ಲಂಕಾ 17 ಓವರಲ್ಲಿ 5 ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು.