Asianet Suvarna News Asianet Suvarna News

ಶ್ರೀಲಂಕಾ ಕ್ರಿಕೆಟಿಗ ಲಹಿರು ತಿರಿಮನೆ ಕಾರು ಭೀಕರ ಅಪಘಾತ, ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ!

ಶ್ರೀಲಂಕಾ ಮಾಜಿ ಕ್ರಿಕೆಟಿಗ ಲಹಿರು ತಿರುಮನೆ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಲಾರಿ ಹಾಗೂ ಕಾರು ನಡುವಿನ ಭೀಕರ ಅಫಘಾತದಲ್ಲಿ ಕ್ರಿಕೆಟಿಗ ಗಂಭೀರವಾಗಿ ಗಾಯಗೊಂಡಿದ್ದಾರೆ. 
 

Sri Lanka former Cricketer Lahiru Thirimanne and his family met with car Accident ckm
Author
First Published Mar 14, 2024, 10:32 PM IST

ಕೊಲೊಂಬೊ(ಮಾ.14) ಕಾರು ಹಾಗೂ ಲಾರಿ ನಡುವಿನ ಭೀಕರ ಅಪಘಾತದಲ್ಲಿ ಶ್ರೀಲಂಕಾ ಮಾಜಿ ಕ್ರಿಕೆಟಿಗ ಲಹಿರು ತಿರಿಮನೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಲಹಿರು ತಿರುಮನೆ ತಮ್ಮ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಲಂಕಾದ ಅನುರಾಧಾಪುರ ನಗರದಲ್ಲಿ ಘಟನೆ ನಡೆದಿದೆ. ವೇಗವಾಗಿ ಸಾಗುತ್ತಿದ್ದ ಕಾರು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ವೇಗದ ಕಾರಣ ಅಪಘಾತದ ತೀವ್ರತೆ ಪ್ರಮಾಣವೂ ಹೆಚ್ಚಾಗಿದೆ. ತಕ್ಷಣವೇ ಲಹೀರು ತಿರಿಮನೆಯನ್ನು ಅನುರಾಧಾಪುರದ ಟೀಚಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತುರ್ತ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಿರಿಮನೆ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿದೆ.

ಲಹಿರು ತಿರಿಮನೆ ಹಾಗೂ ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಲಹಿರು ತಿರಿಮನೆ ಜೊತೆಗೆ ಕುಟುಂಬಸ್ಥರು ಗಾಯಗೊಂಡಿದ್ದಾರೆ. ಗಾಯಗೊಂಡವನ್ನು ಟೀಚಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಘಾತದ ಬೆನ್ನಲ್ಲೇ ಸೂಕ್ತ ಸಮಯದಲ್ಲಿ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಲಹಿರು ತಿರಿಮನೆ ಹಾಗೂ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಖಚಿತಪಡಿಸಿದೆ.

ತುಕಾಲಿ ಸಂತೋಷ್ ಕಾರು ಅಪಘಾತ; ಚಿಕಿತ್ಸೆ ಫಲಿಸದೆ ಆಟೋ ಚಾಲಕ ಸಾವು

ತಿರಿಮನೆ ಹಾಗೂ ಕುಟುಂಬಸ್ಥರ ಕಾರು ಅಪಘಾತ ಮಾಹಿತಿ ತಿಳಿಯುತ್ತಿದ್ದಂತೆ ಲಂಕಾ ಕ್ರಿಕೆಟ್ ದಿಗ್ಗಜರು, ಹಾಲಿ ಕ್ರಿಕೆಟಿಗರು ಶೀಘ್ರ ಚೇತರಿಕೆಗೆ ಪಾರ್ಥಿಸಿದ್ದಾರೆ. ಅಭಿಮಾನಿಗಳು ತಿರಿಮನೆ ಹಾಗೂ ಕುಟುಂಬಸ್ಥರು ಆದಷ್ಟು ಬೇಗ ಸಹಜ ಜೀವನಕ್ಕೆ ಮರಳಲಿ, ಸಂಪೂರ್ಣ ಗುಣಮುಖರಾಗಲಿ ಎಂದು ಪಾರ್ಥಿಸಿದ್ದಾರೆ.  2023ರ ಜುಲೈ ತಿಂಗಳಲ್ಲಿ ಅಂತಾರಾಷ್ಟ್ರೀಯ ಹಾಗೂ ಎಲ್ಲಾ ಮಾದರಿ ಕ್ರಿಕೆಟ್‌ಗೆ ತಿರಿಮನೆ ವಿದಾಯ ಹೇಳಿದ್ದರು.

2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಲಹಿರು ತಿರಿಮನೆ 44 ಟೆಸ್ಟ್ ಪಂದ್ಯ, 127 ಏಕದಿನ ಹಾಗೂ 26 ಟಿ20 ಪಂದ್ಯ ಆಡಿದ್ದಾರೆ. 2014ರಲ್ಲಿ ಟಿ20 ವಿಶ್ವಕಪ್ ಗೆಲುವಿನ ತಂಡದ ಸದಸ್ಯರಾಗಿದ್ದ ತಿರಿಮನೆ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 2 ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದರು.

ಮಾರ್ಚ್ 2022ರಲ್ಲಿ ಕೊನೆಯದಾಗಿ ಶ್ರೀಲಂಕಾ ತಂಡ ಪ್ರತಿನಿಧಿಸಿದ್ದ ಲಹಿರು ತಿರಿಮನೆ ಬಳಿಕ ತಂಡದಿಂದ ಹೊರಗುಳಿದಿದ್ದರು. ಕಳೆದ ವರ್ಷ ಜುಲೈ ತಿಂಗಳಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ ತಿರಿಮನೆ, ಕ್ರಿಕೆಟ್ ಅಕಾಡೆಮಿ ಸೇರಿದಂತೆ ಇತರ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. 

ಶೂಟಿಂಗ್​ ವೇಳೆ ಭಾರಿ ಅವಘಡ: ತುಪ್ಪದ ಬೆಡಗಿ ರಾಗಿಣಿ ಕಾಲಿಗೆ ಏಟು- ಚಿತ್ರೀಕರಣ ಕ್ಯಾನ್ಸಲ್​
 

Follow Us:
Download App:
  • android
  • ios