ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ದ ದ್ವೀಪ ರಾಷ್ಟ್ರ ಬಿಗಿ ಹಿಡಿತ ಸಾಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಕ್ಯಾಂಡಿ(ಮೇ.01): ಬಾಂಗ್ಲಾದೇಶ ವಿರುದ್ಧ 2ನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆತಿಥೇಯ ಶ್ರೀಲಂಕಾ ತಂಡವು ಬೃಹತ್‌ ಮೊತ್ತದತ್ತ ದಾಪುಗಾಲು ಇಟ್ಟಿದೆ. 

ಮೊದಲ ದಿನ 1 ವಿಕೆಟ್‌ ನಷ್ಟಕ್ಕೆ 291 ರನ್‌ ಗಳಿಸಿದ್ದ ಲಂಕಾ, ಮಂದ ಬೆಳಕಿನ ಕಾರಣ 2ನೇ ದಿನದಾಟ ಒಂದು ಗಂಟೆ ಕಾಲ ಮುಂಚಿತವಾಗಿಯೇ ಅಂತ್ಯಗೊಂಡಾಗ 6 ವಿಕೆಟ್‌ ನಷ್ಟಕ್ಕೆ 469 ರನ್‌ ಗಳಿಸಿತ್ತು. 

2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಲಹಿರು ತಿರಿಮನ್ನೆ 140 ರನ್‌ ಗಳಿಸಿದರೆ, ಒಶಾಡ ಫೆರ್ನಾಂಡೋ 81 ರನ್‌ ಗಳಿಸಿ ಔಟಾದರು. ನಿರೋಶನ್‌ ಡಿಕ್‌ವೆಲ್ಲಾ ಅಜೇಯ 64 ರನ್‌ ಗಳಿಸಿದ್ದು, ಮತ್ತೊಂದು ತುದಿಯಲ್ಲಿ ರಮೇಶ್ ಮೆಂಡೀಸ್ 22 ರನ್‌ ಬಾರಿಸಿ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಆತಿಥೇಯ ಶ್ರೀಲಂಕಾ ತಂಡ 500ಕ್ಕೂ ಹೆಚ್ಚು ರನ್‌ ಗಳಿಸುವ ವಿಶ್ವಾಸದಲ್ಲಿದೆ.

Scroll to load tweet…

ಟೆಸ್ಟ್‌: ಪಾಕ್‌ ವಿರುದ್ಧ ಜಿಂಬಾಬ್ವೆ 176ಕ್ಕೆ ಆಲೌಟ್‌

ಬಾಂಗ್ಲಾದೇಶ ಪರ ವೇಗಿ ಟಸ್ಕಿನ್ ಅಹಮ್ಮದ್ 3 ವಿಕೆಟ್ ಕಬಳಿಸಿದರೆ, ಮೆಹದಿ ಹಸನ್, ಶರೀಫುಲ್ ಇಸ್ಲಾಂ ಹಾಗೂ ತೈಜುಲ್ ಇಸ್ಲಾಂ ತಲಾ ಒಂದೊಂದು ವಿಕೆಟ್ ಕಬಳಿಸಿದ್ದಾರೆ

ಸ್ಕೋರ್‌: 
ಲಂಕಾ: 469/6
ಲಹಿರು ತಿರಿಮನ್ನೆ: 140
ಟಸ್ಕಿನ್ ಅಹಮ್ಮದ್ 119/3
(2ನೇ ದಿನದಂತ್ಯಕ್ಕೆ)