ಜಿಂಬಾಬ್ವೆ ವಿರುದ್ದದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನ ಮೊದಲ ದಿನದಾಟದಲ್ಲೇ ಬಿಗಿ ಹಿಡಿತ ಸಾಧಿಸಿದೆ. ಜಿಂಬಾಬ್ವೆ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 176 ರನ್‌ಗಳಿಗೆ ಕಟ್ಟಿಹಾಕಿದ ಪಾಕ್‌ ಇದಾದ ಬಳಿಕ ವಿಕೆಟ್‌ ನಷ್ಟವಿಲ್ಲದೇ ಶತಕದ ಜತೆಯಾಟ ನಿಭಾಯಿಸಿದೆ.ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಹರಾರೆ(ಏ.30): ಪಾಕಿಸ್ತಾನ ವಿರುದ್ಧ ಗುರುವಾರ(ಏ.29)ದಿಂದ ಆರಂಭಗೊಂಡ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಜಿಂಬಾಬ್ವೆ 176 ರನ್‌ಗಳಿಗೆ ಆಲೌಟ್‌ ಆಗಿದೆ. 

ಪಾಕಿಸ್ತಾನದ ಮಾರಕ ವೇಗಿಗಳಾದ ಶಾಹೀನ್‌ ಅಫ್ರಿದಿ ಹಾಗೂ ಹಸನ್‌ ಅಲಿ ತಲಾ 4 ವಿಕೆಟ್‌ ಕಿತ್ತರು. ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಪಾಕಿಸ್ತಾನ ಮೊದಲ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 103 ರನ್‌ ಗಳಿಸಿದ್ದು, ಇನ್ನು ಕೇವಲ 73 ರನ್‌ಗಳಿಂದ ಹಿಂದಿದೆ. ಪಾಕಿಸ್ತಾನ ಪರ ಆರಂಭಿಕರಾದ ಇಮ್ರಾನ್‌ ಬಟ್(43) ಹಾಗೂ ಆಬಿದ್ ಅಲಿ(56) ಮುರಿಯದ ಶತಕದ ಜತೆಯಾಟವಾಡಿ ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ

Scroll to load tweet…

ಸ್ಕೋರ್‌: 
ಜಿಂಬಾಬ್ವೆ 176/10
ಪಾಕಿಸ್ತಾನ 103/0

ದಿಮುತ್‌, ಲಹಿರು ಶತಕ: ಶ್ರೀಲಂಕಾ ಮೇಲುಗೈ

ಕ್ಯಾಂಡಿ: ಬಾಂಗ್ಲಾದೇಶ ವಿರುದ್ಧ 2ನೇ ಟೆಸ್ಟ್‌ನಲ್ಲಿ ಶ್ರೀಲಂಕಾ ಉತ್ತಮ ಆರಂಭ ಪಡೆದಿದೆ. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆತಿಥೇಯ ತಂಡ, ನಾಯಕ ದಿಮುತ್‌ ಕರುಣರತ್ನೆ(118) ಹಾಗೂ ಲಹಿರು ತಿರಿಮನ್ನೆ(131*) ಬಾರಿಸಿದ ಶತಕಗಳ ನೆರವಿನಿಂದ ಮೊದಲ ದಿನದಂತ್ಯಕ್ಕೆ ಮೊದಲ ಇನ್ನಿಂಗ್ಸಲ್ಲಿ 1 ವಿಕೆಟ್‌ ನಷ್ಟಕ್ಕೆ 291 ರನ್‌ ಕಲೆಹಾಕಿದೆ.

ಸ್ಕೋರ್‌:
ಲಂಕಾ (ಮೊದಲ ದಿನದಂತ್ಯಕ್ಕೆ) 291/1