Asianet Suvarna News

ಹೆರಾ​ಯಿನ್‌ ಹೊಂದಿದ್ದ ಕ್ರಿಕೆ​ಟಿಗ ಶೆಹಾನ್‌ ಅಮಾ​ನ​ತು

ಭಾನು​ವಾರ 2 ಗ್ರಾಂ ಹೆರಾ​ಯಿನ್‌ನೊಂದಿಗೆ ಸಿಕ್ಕಿಬಿ​ದ್ದಿದ್ದ ಶೆಹಾನ್‌ರನ್ನು ಪೊಲೀ​ಸರು ಬಂಧಿ​ಸಿ​ದ್ದರು. ಅವರನ್ನು ಇದೀಗ ಲಂಕಾ ಕ್ರಿಕೆಟ್‌ ಬೋರ್ಡ್ ಶೆಹಾನ್‌ ಮದು​ಶ​ನಕ ಅವರನ್ನು ಸಸ್ಪೆಂಡ್ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Sri Lanka Cricket Suspends pacer Shehan Madushanka For Alleged Possession Of Drugs
Author
Colombo, First Published May 27, 2020, 2:21 PM IST
  • Facebook
  • Twitter
  • Whatsapp

ಕೊಲಂಬೊ(ಮೇ.27): ಕಾರಿ​ನಲ್ಲಿ ಹೆರಾ​ಯಿನ್‌ ಇಟ್ಟು​ಕೊಂಡು ಸಿಕ್ಕಿ​ಬಿ​ದ್ದಿದ್ದ ಶ್ರೀಲಂಕಾದ ವೇಗದ ಬೌಲರ್‌ ಶೆಹಾನ್‌ ಮದು​ಶ​ನಕ ಅವ​ರನ್ನು ಲಂಕಾ ಕ್ರಿಕೆಟ್‌ ಮಂಡಳಿ ಮಂಗ​ಳ​ವಾರ ಎಲ್ಲಾ ಮಾದ​ರಿಯ ಕ್ರಿಕೆಟ್‌ನಿಂದ ಅಮಾ​ನ​ತು​ಗೊ​ಳಿ​ಸಿದೆ. 

ಭಾನು​ವಾರ 2 ಗ್ರಾಂ ಹೆರಾ​ಯಿನ್‌ನೊಂದಿಗೆ ಸಿಕ್ಕಿಬಿ​ದ್ದಿದ್ದ ಶೆಹಾನ್‌ರನ್ನು ಪೊಲೀ​ಸರು ಬಂಧಿ​ಸಿ​ದ್ದರು. ‘ತಕ್ಷಣದಿಂದಲೇ ಶೆಹಾನ್‌ರನ್ನು ಎಲ್ಲಾ ಮಾದರಿ ಕ್ರಿಕೆಟ್‌ನಿಂದ ಅಮಾ​ನ​ತು​ಗೊ​ಳಿ​ಸ​ಲಾ​ಗಿದೆ. ತನಿಖೆ ಮುಕ್ತಾ​ಯ​ಗೊ​ಳ್ಳುವ ವರೆಗೂ ಅವರು ಕ್ರಿಕೆಟ್‌ ಚಟು​ವ​ಟಿಕೆಯಿಂದ ದೂರವಿರ​ಲಿ​ದ್ದಾರೆ’ ಎಂದು ಲಂಕಾ ಕ್ರಿಕೆಟ್‌ ಮಂಡಳಿ ಕಾರ್ಯ​ದರ್ಶಿ ಮೋಹನ್‌ ಡಿ ಸಿಲ್ವಾ ಹೇಳಿ​ದ್ದಾರೆ.

ಲಂಕಾ ಬಲಗೈ ವೇಗಿ ಭಾನುವಾರವಷ್ಟೇ ಮತ್ತೊಬ್ಬ ವ್ಯಕ್ತಿಯೊಡನೆ ಕಾರಿನಲ್ಲಿ ಸಂಚರಿಸುವಾಗ ಪೊಲೀಸರು ತಪಾಸಣೆ ನಡೆಸಿದಾಗ ಹೆರಾಯಿನ್ ಕಾರಿನಲ್ಲಿ ಕಂಡು ಬಂದಿತ್ತು. ನಂತರ ಪೊಲೀಸರು ಸ್ಥಳೀಯ ಮ್ಯಾಜೆಸ್ಟ್ರೇಟ್ ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ಆ ಬಳಿಕ ಶೆಹಾನ್‌ ಮದು​ಶ​ನಕ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. 

ಡ್ರಗ್ಸ್ ಹೊಂದಿದ್ದ ಶ್ರೀಲಂಕಾ ಮಾರಕ ವೇಗಿ ಅರೆಸ್ಟ್..!

2018ರ ಜನವರಿಯಲ್ಲಿ ಶೆಹಾನ್‌ ಮದು​ಶ​ನಕ ಬಾಂಗ್ಲಾದೇಶ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ತಾವಾಡಿದ ಚೊಚ್ಚಲ ಏಕದಿನ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಇದಾದ ಬಳಿಕ ಬಾಂಗ್ಲಾದೇಶ ವಿರುದ್ಧವೇ 2 ಟಿ20 ಪಂದ್ಯಗಳನ್ನು ಆಡಿದ್ದರು. ನಂತರ ಗಾಯಕ್ಕೆ ತುತ್ತಾಗಿದ್ದರಿಂದ ತಂಡದಿಂದ ಹೊರಗೆ ಉಳಿದಿದ್ದಾರೆ.

Follow Us:
Download App:
  • android
  • ios