Asianet Suvarna News Asianet Suvarna News

Sri Lanka Squad : ಭಾರತ ಎದುರಿನ ಟಿ20 ಸರಣಿಗೆ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟ..!

* ಭಾರತ ಎದುರಿನ 3 ಪಂದ್ಯಗಳ ಟಿ20 ಸರಣಿಗೆ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟ

* ಫೆಬ್ರವರಿ 24ರಿಂದ 3 ಪಂದ್ಯಗಳ ಟಿ20 ಸರಣಿ ಆರಂಭ

* ದಸುನ್ ಶನಕಾ ಶ್ರೀಲಂಕಾ ಕ್ರಿಕೆಟ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

Sri Lanka Cricket Announces 18 Members squad for T20 Series Against India Injured Avishka Fernando ruled out kvn
Author
Bengaluru, First Published Feb 21, 2022, 4:08 PM IST

ಕೊಲಂಬೊ(ಫೆ.21): ಭಾರತ ಎದುರಿನ ಮೂರು ಪಂದ್ಯಗಳ ಟಿ20 ಸರಣಿಗೆ 18 ಆಟಗಾರರನ್ನೊಳಗೊಂಡ ಶ್ರೀಲಂಕಾ ಕ್ರಿಕೆಟ್ ತಂಡ (Sri Lanka Cricket Team) ಪ್ರಕಟವಾಗಿದ್ದು, ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ 23 ವರ್ಷದ ಬ್ಯಾಟರ್‌ ಆವಿಷ್ಕಾ ಫರ್ನಾಂಡೋ (Avishka Fernando) ಲಂಕಾ ತಂಡದಿಂದ ಹೊರಬಿದ್ದಿದ್ದಾರೆ. ಇದರ ಜತೆಗೆ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಆಲ್ರೌಂಡರ್ ರಮೇಶ್ ಮೆಂಡೀಸ್ (Ramesh Mendis) ಹಾಗೂ ವೇಗದ ಬೌಲರ್ ನುವಾನ್ ತುಷಾರ (Nuwan Thushara) ಕೂಡಾ ಭಾರತ ಎದುರಿನ ಸೀಮಿತ ಓವರ್‌ಗಳ ಸರಣಿಯಿಂದ ಹೊರಬಿದ್ದಿದ್ದಾರೆ.

ಇನ್ನುಳಿಂದಂತೆ ಕಳೆದ ಜನವರಿ ತಿಂಗಳಿನಲ್ಲಿ ದಿಢೀರ್ ಎನ್ನುವಂತೆ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿ ಆ ಬಳಿಕ ತಮ್ಮ ನಿರ್ಧಾರವನ್ನು ಬದಲಾಯಿಸಿಕೊಂಡಿದ್ದ ಲಂಕಾ ಮಧ್ಯಮ ಕ್ರಮಾಂಕದ ಬ್ಯಾಟರ್ ಭಾನುಕ ರಾಜಪಕ್ಸಾ (Bhanuka Rajapaksa) ಕೂಡಾ ಲಂಕಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ. ಭಾನುಕ ರಾಜಪಕ್ಸಾ ಕೂಡಾ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಲಗೈ ಬ್ಯಾಟರ್‌ ಆವಿಷ್ಕಾ ಫರ್ನಾಂಡೋ ಚುಟುಕು ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಲು ವಿಫಲರಾಗಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆವಿಷ್ಕಾ ಫರ್ನಾಂಡೋ ಕೇವಲ 12.25ರ ಬ್ಯಾಟಿಂಗ್ ಸರಾಸರಿಯಲ್ಲಿ 331 ರನ್ ಬಾರಿಸಿದ್ದಾರೆ. ಇನ್ನು ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯಲ್ಲಿ ಆವಿಷ್ಕಾ ಫರ್ನಾಂಡೋ ಅವರ ಬ್ಯಾಟಿಂಗ್ ಸರಾಸರಿ ಕೇವಲ 5.50. ಆವಿಷ್ಕಾ ಫರ್ನಾಂಡೋ ಟಿ20 ಕ್ರಿಕೆಟ್‌ನಲ್ಲಿ ಇನ್ನೂ ಒಂದು ಅರ್ಧಶತಕವನ್ನು ಸಹ ಬಾರಿಸಿಲ್ಲ. ಆಲ್ರೌಂಡರ್ ರಮೇಶ್ ಮೆಂಡೀಸ್‌ ಇತ್ತೀಚೆಗಷ್ಟೇ ಮುಕ್ತಾಯವಾದ ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಲಂಕಾ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಇನ್ನು ನವಾನ್ ತುಷಾರ ಕೇವಲ ಒಂದು ವಿಕೆಟ್ ಕಬಳಿಸಿದ್ದರು.

ಆಸ್ಟ್ರೇಲಿಯಾ ಎದುರಿನ ಸರಣಿಯ ವೇಳೆಗೆ ಕೋವಿಡ್‌ಗೆ ಒಳಗಾಗಿದ್ದ ಆಲ್ರೌಂಡರ್ ವನಿಂದು ಹಸರಂಗ (Wanindu Hasaranga) ಹಾಗೂ ಬಿನುರಾ ಫರ್ನಾಂಡೋ ಇದೀಗ ಭಾರತ ಎದುರಿನ ಸೀಮಿತ ಓವರ್‌ಗಳ ಸರಣಿಗೆ ತಂಡ ಕೂಡಿಕೊಂಡಿದ್ದಾರೆ. ಈ ಇಬ್ಬರು ಆಟಗಾರರು 7 ದಿನಗಳ ಕಾಲ ಐಸೋಲೇಷನ್‌ನಲ್ಲಿದ್ದರು. ಇದೀಗ ಈ ಇಬ್ಬರು ಆಟಗಾರರ ಸೇರ್ಪಡೆ ಲಂಕಾ ಪಾಳಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಿದೆ.

ICC T20 Rankings: 6 ವರ್ಷಗಳ ಬಳಿಕ ಮತ್ತೆ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟ ಟೀಂ ಇಂಡಿಯಾ..!

ಇನ್ನುಳಿದಂತೆ ಮತ್ತೊಮ್ಮೆ ದಸುನ್ ಶನಕಾ (Dasun Shanaka) ಶ್ರೀಲಂಕಾ ಕ್ರಿಕೆಟ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಇನ್ನು ಚರಿತ್ ಅಸಲಂಕಾ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ಫೆಬ್ರವರಿ 24ರಂದು ಲಖನೌದಲ್ಲಿ ಆರಂಭವಾಗಲಿದೆ. ಇದಾದ ಬಳಿಕ ಫೆಬ್ರವರಿ 26 ಹಾಗೂ 27ರಂದು ಧರ್ಮಶಾಲಾದಲ್ಲಿ ಉಳಿದೆರಡು ಟಿ20 ಪಂದ್ಯಗಳ ನಡೆಯಲಿದೆ. ಇನ್ನು ಟಿ20 ಸರಣಿ ಮುಕ್ತಾಯದ ಬಳಿಕ ಉಭಯ ತಂಡಗಳು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದ್ದು, ಮೊದಲ ಟೆಸ್ಟ್ ಪಂದ್ಯವು ಮಾರ್ಚ್‌ 04ರಿಂದ ಮೊಹಾಲಿಯಲ್ಲಿ ಆರಂಭವಾಗಲಿದೆ. ಇದು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಆಡಲಿರುವ 100ನೇ ಟೆಸ್ಟ್ ಪಂದ್ಯವಾಗಿರಲಿದೆ. ಇದಾದ ಬಳಿಕ ಮಾರ್ಚ್‌ 12ರಿಂದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎರಡನೇ ಪಂದ್ಯ ಆರಂಭವಾಗಲಿದ್ದು, ಇದು ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿರಲಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯವು ಜರುಗಲಿದೆ.

ಲಂಕಾ ತಂಡ ಹೀಗಿದೆ ನೋಡಿ:
ದಸುನ್ ಶನಕಾ(ನಾಯಕ), ಪತುಮ್ ನಿಶಾಂಕ, ಕುಸಾಲ್ ಮೆಂಡೀಸ್, ಚರಿತ್ ಅಸಲಂಕಾ, ದಿನೇಶ್ ಚಾಂಡಿಮಲ್, ದನುಷ್ಕಾ ಗುಣತಿಲಕ, ಕಮಿಲ್ ಮಿಶ್ರಾ, ಜನಿತ್ ಲಿಯಾಂಗೆ, ವನಿಂದು ಹಸರಂ, ಚಮಿಕಾ ಕರುಣಾರತ್ನೆ, ದುಸ್ಮಂತಾ ಚಮೀರಾ, ಲಹಿರು ಕುಮಾರ, ಬಿನುರಾ ಫರ್ನಾಂಡೋ, ಶಿರಾನ್ ಫರ್ನಾಂಡೋ, ಮಹೀಶ್ ತೀಕ್ಷಣ, ಜೆಫ್ರಿ ವೆಂಡರ್ಸೆ, ಪ್ರವೀಣ್ ಜಯವಿಕ್ರಮ, ಆಶಿಯನ್ ಡೇನಿಯಲ್.

Follow Us:
Download App:
  • android
  • ios