09:29 PM (IST) Feb 28

ಮಳೆಯಿಂದಾಗಿ ಆಫ್ಘಾನಿಸ್ತಾನ ಆಸ್ಟ್ರೇಲಿಯಾ ಪಂದ್ಯ ರದ್ದು, ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಆಸಿಸ್

ಆಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಲೀಗ್ ಪಂದ್ಯ ಮಳೆಯಿಂದ ರದ್ದಾಗಿದೆ. ಗೆಲುವಿನ ಹಾದಿಯಲ್ಲಿ ಆಸ್ಟ್ರೇಲಿಯಾ ಸಾಗುತ್ತಿದ್ದ ವೇಳೆ ಮಳೆ ವಕ್ಕರಿಸಿದೆ. ಇದರಿಂದ ಪಂದ್ಯ ರದ್ದಾಗಿದೆ. ಹೀಗಾಗಿ ಎರಡೂ ತಂಡಗಳು ಅಂಕ ಹಂಚಿಕೊಂಡಿದೆ. ಇಷ್ಟೇ ಅಲ್ಲ ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಇತ್ತ ಆಫ್ಘಾನಿಸ್ತಾನ ಹೋರಾಟ ಬಹುತೇಕ ಅಂತ್ಯಗೊಂಡಿದೆ. ಆದರೆ ಸೌತ್ ಆಫ್ರಿಕಾ ಹಾಗೂ ಇಂಗ್ಲೆಡ್ ವಿರುದ್ಧ ಪಂದ್ಯದದಲ್ಲಿ ಭಾರಿ ಅಂತರದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿದರೆ ಕೊನೆಯ ಅವಕಾಶದ ಬಾಗಿಲು ತೆರೆಯಲಿದೆ.

09:06 PM (IST) Feb 28

ಮಳೆ ನಿಂತರೂ ಆಡಲು ಸಜ್ಜಾಗದ ಮೈದಾನ, ಓವರ್ ಕಡಿತ ಆರಂಭ

ಆಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ಮಳೆಯಿಂದ ಸ್ಥಗಿತಗೊಂಡಿದೆ. ಸದ್ಯ ಮಳೆ ನಿಂತರೂ ಮೈದಾನ ಇನ್ನೂ ಆಡಲು ಸಜ್ಜಾಗಿಲ್ಲ. ಈಗಾಗಲೇ ಓವರ್ ಕಡಿತ ಸಮಯಗಳು ಆರಂಭಗೊಂಡಿದೆ. 

08:05 PM (IST) Feb 28

ಮಳೆಯಿಂದ ಆಫ್ಘಾನಿಸ್ತಾನ-ಆಸ್ಟ್ರೇಲಿಯಾ ಪಂದ್ಯ ಸ್ಛಗಿತ

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಲೀಗ್ ಪಂದ್ಯ ಮಳೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಭಾರಿ ಮಳೆಯಿಂದ ಪಂದ್ಯ ನಿಂತಿದೆ. ಸದ್ಯ ಆಸ್ಟ್ರೇಲಿಯಾ 12.5 ಓವರ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 109 ರನ್ ಸಿಡಿಸಿದೆ. ಆಸಿಸ್ ಗೆಲುವಿಗೆ 165 ರನ್ ಬೇಕಿದೆ.

06:59 PM (IST) Feb 28

ಸ್ಫೋಟಕ ಆರಂಭ ಪಡೆದ ಆಸ್ಟ್ರೇಲಿಯಾಗೆ ಶಾಕ್, ಮೊದಲ ವಿಕೆಟ್ ಪತನ

ಆಫ್ಘಾನಿಸ್ತಾನ ನೀಡಿದ 274 ರನ್ ಟಾರ್ಗೆಟ್ ಚೇಸ್ ಮಾಡುತ್ತಿರುವ ಆಸ್ಟ್ರೇಲಿಯಾ ಸ್ಫೋಟಕ ಆರಂಭ ಪಡೆದಿದೆ. ಆದರೆ ಆಫ್ಘಾನಿಸ್ತಾನ ಮೊದಲ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದೆ 4.3 ಓವರ್‌ಗೆ ಆಸ್ಟ್ರೇಲಿಯ 44 ರನ್ ಸಿಡಿಸಿ ಮೊದಲ ವಿಕೆಟ್ ಕಳೆದುಕೊಂಡಿದೆ.

06:57 PM (IST) Feb 28

ಕ್ಯಾಚ್ ಚೆಲ್ಲಿದ ಆಫ್ಘಾನಿಸ್ತಾನ, ಜೀವದಾನ ಪಡೆದ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟಿಂಗ್

274 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಆಸ್ಟ್ರೇಲಿಯಾ ಸ್ಪೋಟಕ ಆರಂಭ ಪಡೆದಿದೆ. ಟ್ರಾವಿಸ್ ಹೆಡ್ ಹಾಗೂ ಮ್ಯಾಥ್ಯೂ ಹೆಡ್ ಅದ್ಭುತ ಜೊತೆಯಾಟದ ಮೂಲಕ ಸ್ಟ್ರೇಲಿಯಾ 4 ಓವರ್‌ಗೆ 40 ರನ್ ಸಿಡಿಸಿದೆ. ಇದರ ನಡುವೆ 2 ಕ್ಯಾಚ್ ಆಫ್ಘಾನಿಸ್ತಾನ ಕೈಚೆಲ್ಲಿದೆ.

06:28 PM (IST) Feb 28

ಆಸ್ಟ್ರೇಲಿಯಾಗೆ 274 ರನ್ ಟಾರ್ಗೆಟ್ ಕೊಟ್ಟ ಆಫ್ಘಾನಿಸ್ತಾನ

ಸಾದಿಕುಲ್ಲಾ ಅತಲ್ ಸಿಡಿಸಿದ 85 ರನ್ ಹಾಗೂ ಅಂತಿಮ ಹಂತದಲ್ಲಿಅಝ್ಮತುಲ್ಹ ಒಮ್ರಾಝಿ ಸಿಡಿಸಿದ 67 ರನ್ ನೆರವಿನಿಂದ ಆಫ್ಘಾನಿಸ್ತಾನ 273 ರನ್ ಸಿಡಿಸಿದೆ. 

05:48 PM (IST) Feb 28

ಏಕದಿನದಲ್ಲಿ 1000 ರನ್ ಪೂರೈಸಿದ ಅಝ್ಮತುಲ್ಹ ಒಮ್ರಾಝಿ

ಆಸ್ಟ್ರೇಲಿಯಾ ವಿರುದ್ದ ದಿಢೀರ್ ಕುಸಿತ ಕಂಡ ಆಫ್ಘಾನಿಸ್ತಾನ ತಂಡಕ್ಕೆ ಆಸರೆಯಾದ ಅಝ್ಮತುಲ್ಹ ಒಮ್ರಾಝಿ ದಿಟ್ಟ ಹೋರಾಟ ನೀಡಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 1,000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. 

Scroll to load tweet…

05:27 PM (IST) Feb 28

200ರ ಗಡಿ ದಾಟಿದ ಆಫ್ಘಾನಿಸ್ತಾನ, 3 ವಿಕೆಟ್ ಕಬಳಿಸಲು ಆಸಿಸ್ ಹೋರಾಟ

ಆಫ್ಘಾನಿಸ್ತಾನ ಇದೀಗ 7ನೇ ವಿಕೆಟ್ ಕಳೆದುಕೊಂಡಿದೆ. ದಿಢೀರ್ ಕುಸಿತ ಕಂಡ ಆಫ್ಘಾನಿಸ್ತಾನ ಇದೀಗ 200 ರನ್ ಗಡಿ ದಾಟಿದೆ. ರಶೀದ್ ಖಾನ್ ಇದೀಗ ಹೋರಾಟ ನಡೆಸುತ್ತಿದ್ದು, ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಜ್ಜಾಗಿದೆ. ಸದ್ಯ ಆಫ್ಘಾನಿಸ್ತಾನ 43 ಓವರ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 213 ರನ್ ಸಿಡಿಸಿದೆ. 

05:02 PM (IST) Feb 28

ಆಫ್ಘಾನಿಸ್ತಾನದ 6ನೇ ವಿಕೆಟ್ ಪತನ, ನಬಿ ರನೌಟ್

ಅಫ್ಘಾನಿಸ್ತಾನ ದಿಟ್ಟ ಹೋರಾಟದ ನಡುವೆ ಕುಸಿತ ಕಂಡಿದೆ. ಮೊಹಮ್ಮದ್ ನಬಿ ರನೌಟ್‌ಗೆ ಬಲಿಯಾಗಿದ್ದಾರೆ. ಸದ್ಯ ಅಫ್ಘಾನಿಸ್ತಾನ 37 ಓವರ್ ಮುಕ್ತಾಯಕ್ಕೆ 6 ವಿಕೆಟ್ ನಷ್ಟಕ್ಕೆ 186 ರನ್ ಸಿಡಿಸಿದೆ. 

04:46 PM (IST) Feb 28

ಆಸ್ಟ್ರೇಲಿಯಾ ದಾಳಿಗೆ ಆಫ್ಘಾನಿಸ್ತಾನದ 4ನೇ ವಿಕೆಟ್ ಪತನ

ಚಾಂಪಿಯನ್ಸ್ ಟ್ರೋಫಿಯಲ್ಲಿ ಆಫ್ಘಾನಿಸ್ತಾನ ಹಾಗೂ ಆಸ್ಚ್ರೇಲಿಯಾ ಹೋರಾಟ ನಡೆಸುತ್ತಿದೆ. ಮೊದಲು ಬ್ಯಾಟಿಂಗ್ ಇಳಿದಿರುವ ಆಫ್ಘಾನಿಸ್ತಾನದ 4 ನೇ ವಿಕೆಟ್ ಪತನಗೊಂಡಿದೆ. 34.2 ಓವರ್ ವೇಳೆಗೆ ಆಫ್ಘಾನಿಸ್ತಾನ 4 ವಿಕೆಟ್ ನಷ್ಟಕ್ಕೆ 167 ರನ್ ಸಿಡಿಸಿದೆ. 

Scroll to load tweet…