ನವೆಂಬರ್ 26ರಿಂದ ಆರಂಭವಾಗಲಿರುವ ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಪಾಲ್ಗೊಳ್ಳಲಿದ್ದಾರೆ. ಯಾರು ಆ ಆಟಗಾರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ಕೊಲಂಬೊ(ನ.22): ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಡೇಲ್‌ ಸ್ಟೇನ್ ಕ್ಯಾಂಡಿ ಟಸ್ಕರ್ಸ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ.

Add Asianetnews Kannada as a Preferred SourcegooglePreferred

ಕ್ಯಾಂಡಿ ಟಸ್ಕರ್ಸ್‌ ಭಾನುವಾರ(ನ.22) ತಮ್ಮ ಅಧಿಕೃತ ಟ್ವಿಟರ್‌ ಖಾತೆಯ ಮೂಲಕ ಈ ವಿಷಯವನ್ನು ಖಚಿತ ಪಡಿಸಿದ್ದು, ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್ ಡೇಲ್ ಸ್ಟೇನ್ ಕ್ಯಾಂಡಿ ಟಸ್ಕರ್ಸ್ ತಂಡ ಕೂಡಿಕೊಂಡಿದ್ದಾರೆ ಎಂದು ತಿಳಿಸಲು ನಮಗೆ ಸಂತೋಷವಾಗುತ್ತಿದೆ ಎಂದು ಟ್ವೀಟ್ ಮಾಡಿದೆ.

Scroll to load tweet…

ಈ ಮೊದಲು ಜಿಂಬಾಬ್ವೆ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಬ್ರೆಂಡನ್ ಟೇಲರ್ ಕೂಡಾ ಕ್ಯಾಂಡಿ ಟಸ್ಕರ್ಸ್ ತಂಡವನ್ನು ಕೂಡಿಕೊಂಡಿದ್ದರು. ಈ ವಿಚಾರವನ್ನು ಕ್ಯಾಂಡಿ ಟಸ್ಕರ್ಸ್‌ ಫ್ರಾಂಚೈಸಿ ಟ್ವೀಟ್ ಮೂಲಕವೇ ಖಚಿತಪಡಿಸಿತ್ತು.

Scroll to load tweet…

ಲಂಕಾ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನವೇ ಕ್ರಿಸ್ ಗೇಲ್ ಹಾಗೂ ಲಿಯಾಮ್ ಪ್ಲಂಕೆಟ್‌ ಟೂರ್ನಿಯಿಂದ ಹಿಂದೆ ಸರಿದಿದ್ದು ಕ್ಯಾಂಡಿ ಟಸ್ಕರ್ಸ್‌ ಪಾಳಯದಲ್ಲಿ ಆತಂಕ ಮನೆ ಮಾಡುವಂತೆ ಮಾಡಿತ್ತು. ಆದರೆ ಇದೀಗ ಬ್ರೆಂಡನ್ ಟೇಲರ್ ಹಾಗೂ ಡೇಲ್ ಸ್ಟೇನ್ ಸೇರ್ಪಡೆಯಿಂದ ಕ್ಯಾಂಡಿ ಟಸ್ಕರ್ಸ್‌ ತಂಡ ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತೆ ಮಾಡಿದೆ. 

ಆಸೀಸ್‌ ಎದುರು ವಿರಾಟ್ ಕೊಹ್ಲಿ ಅನುಪಸ್ಥಿತಿ ಟೀಂ ಇಂಡಿಯಾಗೆ ದೊಡ್ಡ ಹೊಡೆತ ನೀಡಲಿದೆ..!

ನವೆಂಬರ್ 26ರಿಂದ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯು ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಕ್ಯಾಂಡಿ ಟಸ್ಕರ್ಸ್‌ ತಂಡವು ಕೊಲಂಬೊ ತಂಡವನ್ನು ಎದುರಿಸಲಿದೆ. ಪೈನಲ್ ಪಂದ್ಯ ಡಿಸೆಂಬರ್ 16ರಂದು ನಡೆಯಲಿದೆ.