SA20 ಟೂರ್ನಿಯ ರೋಚಕತೆ ಹೆಚ್ಚಿಸುತ್ತಿದ್ದಾರೆ ಅನುಭವಿ ಕ್ರಿಕೆಟಿಗರು..!
SA20 ಟೂರ್ನಿಯಲ್ಲಿ ಮಿಂಚುತ್ತಿದ್ದಾರೆ ಹಿರಿ-ಕಿರಿಯ ಆಟಗಾರರು
ಕಿರಿಯರಿಗಿಂತ ಅನುಭವಿ ಆಟಗಾರರದ್ದೇ ಮೇಲುಗೈ
38 ವರ್ಷದ ಫಾಫ್ ಡು ಪ್ಲೆಸಿಸ್, ವ್ಯಾನ್ ಡರ್ ಮೆರ್ವೆ ಶೈನಿಂಗ್
ಜೊಹಾನ್ಸ್‌ಬರ್ಗ್(ಜ.28): ಕಳೆದ ಎರಡೂವರೆ ವಾರಗಳ ಕಾಲ ನಡೆದ SA20 ಟೂರ್ನಿಗೆ ಇದೀಗ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಚೊಚ್ಚಲ ಆವೃತ್ತಿಯ SA20 ಟೂರ್ನಿಯು ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.
ಇದುವರೆಗೂ ಆಡಿದ 7 ಪಂದ್ಯಗಳಲ್ಲಿ 23 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ವೇಯ್ನ್ ಪಾರ್ನೆಲ್ ನೇತೃತ್ವದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು, ಅದ್ಭುತ ಪ್ರದರ್ಶನ ತೋರುವ ಮೂಲಕ 5 ಗೆಲುವು ಹಾಗೂ 3 ಬೋನಸ್ ಅಂಕಗಳನ್ನು ಕಲೆಹಾಕುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಸೆಂಚೂರಿಯನ್ ಮೂಲದ ಪ್ರಿಟೋರಿಯಾ ತಂಡವು 5 ಗೆಲುವು ದಾಖಲಿಸುವುದರ ಜತೆಗೆ 2.027 ನೆಟ್ ರನ್‌ರೇಟ್ ಕಾಯ್ದುಕೊಳ್ಳುವ ಮೂಲಕ, ಎರಡನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡವು 6 ಅಂಕಗಳ ಅಂತರ ಕಾಯ್ದುಕೊಂಡಿದೆ.
ಮೊದಲ ಸುತ್ತಿನ SA20 ಟೂರ್ನಿಯ ಬಳಿಕ ಇದೀಗ ದಕ್ಷಿಣ ಆಫ್ರಿಕಾದಲ್ಲಿ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ ಸಾಗುತ್ತಿದ್ದು, ಇದಾದ ಬಳಿಕ ಫೆಬ್ರವರಿ 02ರಿಂದ ಎರಡನೇ ಸುತ್ತಿನ ಟೂರ್ನಿ ಆರಂಭವಾಗಲಿದೆ. ಮೊದಲ ಸುತ್ತಿನಲ್ಲಿ ಕೆಲವು ಆಟಗಾರರು ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದು, ಆ ಆಟಗಾರರು ಎರಡನೇ ಆವೃತ್ತಿಯಲ್ಲಿ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಸಾಮಾನ್ಯವಾಗಿ ಟಿ20 ಟೂರ್ನಿಯು ಯುವಕರ ಕ್ರೀಡೆಯಾಗಿದ್ದರೂ, SA20 ಟೂರ್ನಿಯು ವಯಸ್ಸು, ಕೇವಲ ನಂಬರ್ ಅಷ್ಟೇ ಎನ್ನುವುದನ್ನು ಸಾಬೀತು ಮಾಡಿದೆ.
SA20 ಟೂರ್ನಿಯಲ್ಲಿ ಯುವ ಕ್ರಿಕೆಟಿಗರಾದ ಟ್ರಿಸ್ಟಿನ್ ಸ್ಟಬ್ಸ್ ಮತ್ತು ಡೆವಾಲ್ಡ್ ಬ್ರೆವಿಸ್ ಅದ್ಭುತ ಪ್ರದರ್ಶನ ತೋರುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದೆ. ಆದರೆ ಹಿರಿಯ ಆಟಗಾರರು ತಾವೇನೂ ಕಮ್ಮಿಯಿಲ್ಲ ಎನ್ನುವುದನ್ನು ಅನುಭವಿ ಆಟಗಾರರು ಸಾಬೀತು ಮಾಡಿದ್ದಾರೆ.
38 ವರ್ಷದ ಫಾಫ್ ಡು ಪ್ಲೆಸಿಸ್, ಚೊಚ್ಚಲ ಆವೃತ್ತಿಯ SA20 ಲೀಗ್ ಟೂರ್ನಿಯಲ್ಲಿ ಕೇವಲ 58 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ, ಈ ಟೂರ್ನಿಯಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ಫಾಫ್ ಡು ಪ್ಲೆಸಿಸ್, ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಆಡಿದ 7 ಪಂದ್ಯಗಳಲ್ಲಿ 277 ರನ್ ಬಾರಿಸುವ ಮೂಲಕ, ಟೂರ್ನಿಯಲ್ಲಿ ಎರಡನೇ ಗರಿಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾ ಮೂಲದ ಡಚ್ ಆಟಗಾರ 38 ವರ್ಷದ ರೊಲೆಫ್ ವ್ಯಾನ್ ಡರ್ ಮೆರ್ವೆ, ಸದ್ಯ ಅದ್ಭುತ ಬೌಲಿಂಗ್ ಪ್ರದರ್ಶನ ತೋರುತ್ತಿದ್ದು, SA20 ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ರೊಲೆಫ್ ವ್ಯಾನ್ ಡರ್ ಮೆರ್ವೆ ಕೇವಲ 4.73ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದು, 14 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿಯೇ ಸನ್‌ರೈಸರ್ಸ್ ಈಸ್ಟರ್ ಕೇಪ್ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದ್ದು, SA20 ಟೂರ್ನಿಯಲ್ಲಿ ಕಪ್ ಗೆಲ್ಲುವ ಕನವರಿಕೆಯಲ್ಲಿದೆ.
SA20 ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಂಡಿದ್ದು, ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಚೊಚ್ಚಲ ಟ್ರೋಫಿ ಗೆಲ್ಲುವ ಹುಮ್ಮಸ್ಸಿನಲ್ಲಿವೆ. ಈ ಟೂರ್ನಿಯಲ್ಲಿ ನೀವೂ ಕೂಡಾ ಭಾಗಿಯಾಗಬಹುದು. ನೀವು ಈ ಪಂದ್ಯಗಳನ್ನು ಅತ್ಯಂತ ಹತ್ತಿರದಿಂದ ಗಮನಿಸಿದರೆ, ನಿಮ್ಮ ನೆಚ್ಚಿನ ತಂಡವನ್ನು ಬೆಂಬಲಿಸುವುದರ ಜತೆಗೆ Betway ಮೂಲಕ ದೊಡ್ಡ ಮೊತ್ತದ ಬಹುಮಾನವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.
ಈ ವಿಶ್ವದರ್ಜೆಯ ಫ್ಲಾಟ್‌ಫಾರ್ಮ್ ಆಟದ ಮನರಂಜನೆ ಹೆಚ್ಚಿಸುವುದರ ಜತೆಗೆ, ಪ್ರತಿ ದಿನ ಬಹುಮಾನಗಳನ್ನು ಗೆಲ್ಲುವ ಮೂಲಕ ಟೂರ್ನಿಯ ಮೇಲೆ ನೀವು ಮತ್ತಷ್ಟು ಒಲವು ಹೆಚ್ಚಿಸಿಕೊಳ್ಳಬಹುದಾಗಿದೆ.
SA20 ಟೂರ್ನಿಯ ಅಪ್ಪಟ ಅಭಿಮಾನಿಗಳು, ಟೂರ್ನಿಯ ಪ್ರತಿಕ್ಷಣದ ಮಾಹಿತಿ, ರೋಚಕ ಪಂದ್ಯಾಟದ ಮಾಹಿತಿಗಳನ್ನು Betway ಫಾಲೋ ಮಾಡುವ ಮೂಲಕ ಸರಿಯಾಗಿ ಪ್ರೆಡಿಕ್ಟ್ ಮಾಡುವ ಮೂಲಕ, ಪ್ರತಿದಿನ ದೊಡ್ಡ ಮೊತ್ತದ ಬಹುಮಾನವನ್ನು ಗೆಲ್ಲಬಹುದಾಗಿದೆ.