Asianet Suvarna News Asianet Suvarna News

South Africa Squad: ವಿಶ್ವಕಪ್ ಟೂರ್ನಿಗೆ ಬಲಾಢ್ಯ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಪ್ರಕಟ

ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಪ್ರಕಟ
ನಾಯಕನಾಗಿ ಹರಿಣಗಳ ಪಡೆ ಮುನ್ನಡೆಸಲಿರುವ ತೆಂಬಾ ಬವುಮಾ
ಕೇವಲ 2 ಏಕದಿನ ಪಂದ್ಯವಾಡಿದ ಕ್ರಿಕೆಟಿಗನಿಗೆ ಸ್ಥಾನ

South Africa unveil Temba Bavuma led squad for World Cup 2023 kvn
Author
First Published Sep 5, 2023, 4:00 PM IST

ಜೋಹಾನ್ಸ್‌ಬರ್ಗ್‌(ಸೆ.05): ಚೊಚ್ಚಲ ವಿಶ್ವಕಪ್ ಗೆಲ್ಲುವ ಕನವರಿಕೆಯಲ್ಲಿರುವ ದಕ್ಷಿಣ ಆಫ್ರಿಕಾ ತಂಡವು ಇದೀಗ ಅಕ್ಟೋಬರ್ 05ರಿಂದ ಭಾರತದಲ್ಲಿ ಆರಂಭವಾಗಲಿರುವ 2023ರ ಏಕದಿನ ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಾಢ್ಯ ಹರಿಣಗಳ ಪಡೆಯನ್ನು ಪ್ರಕಟಿಸಿದೆ. ನಿರೀಕ್ಷೆಯಂತೆಯೇ ತೆಂಬಾ ಬವುಮಾ ನಾಯಕನಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಲಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದಲ್ಲೂ ಸಾಕಷ್ಟು ಯುವ ಹಾಗೂ ಅನುಭವಿ ಆಟಗಾರರಿಗೆ ಮಣೆ ಹಾಕಲಾಗಿದೆ. ಅದರಲ್ಲೂ ಈ ವರ್ಷಾರಂಭದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಕೂಡಿಕೊಂಡಿರುವ ಎಡಗೈ ವೇಗಿ ಗೆರಾರ್ಲ್ಡ್‌ ಕೋಝಿ ಅವರಿಗೆ ಹರಿಣಗಳ ಪಡೆಯಲ್ಲಿ ಸ್ಥಾನ ನೀಡಲಾಗಿದೆ. ಗೆರಾರ್ಲ್ಡ್‌ ಕೋಝಿ ಇದುವರೆಗೂ ಕೇವಲ ಎರಡು ಏಕದಿನ ಪಂದ್ಯಗಳನ್ನಷ್ಟೇ ಆಡಿದ್ದು, 5 ವಿಕೆಟ್ ಕಬಳಿಸಿದ್ದಾರೆ.

World Cup 2023: ಇವರೇ ನೋಡಿ ಏಕದಿನ ವಿಶ್ವಕಪ್ ಗೆಲ್ಲಲು ಹೊರಟಿರುವ ಭಾರತದ ಹುಲಿಗಳ ಪಡೆ..!

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಅನುಭವಿ ಆಟಗಾರರ ದಂಡೇ ಇದೆ. ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೇನ್, ಏಯ್ಡನ್ ಮಾರ್ಕ್‌ರಮ್‌, ಡೇವಿಡ್ ಮಿಲ್ಲರ್ ಹಾಗೂ ರಾಸ್ಸಿ ವ್ಯಾನ್ ಡರ್ ಡುಸೇನ್‌ ಸ್ಥಾನ ಪಡೆದಿದ್ದು, ಈ ಎಲ್ಲಾ ಆಟಗಾರರು ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಕ್ಷಮತೆ ಹೊಂದಿದ್ದಾರೆ. 

ಇನ್ನು ಮಾರಕ ವೇಗಿ ಕಗಿಸೋ ರಬಾಡ, ಹರಿಣಗಳ ಪಡೆಯ ಬೌಲಿಂಗ್ ನೇತೃತ್ವವನ್ನು ವಹಿಸಿದ್ದು, ಇವರಿಗೆ ಏನ್ರಿಚ್ ನೋಕಿಯ ಹಾಗೂ ಲುಂಗಿ ಎಂಗಿಡಿ ಸಾಥ್ ನೀಡಲಿದ್ದಾರೆ. ಭಾರತದಲ್ಲಿ ಸ್ಪಿನ್ ಸ್ನೇಹಿ ಪಿಚ್‌ ಅನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಕೇಶವ್ ಮಹರಾಜ್ ಹಾಗೂ ತಬ್ರೀಜ್ ಶಂಶಿ ಹೀಗೆ ಇಬ್ಬರು ಸ್ಪಿನ್ನರ್‌ಗಳಿಗೂ 15 ಆಟಗಾರರನ್ನೊಳಗೊಂಡ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

Breaking News: ವಿಶ್ವಕಪ್ ಟೂರ್ನಿಗೆ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟ

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಅಕ್ಟೋಬರ್ 07ರಂದು ಶ್ರೀಲಂಕಾ ವಿರುದ್ದ ಕಣಕ್ಕಿಳಿಯುವ ಮೂಲಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯಕ್ಕೆ ದೆಹಲಿಯ ಅರುಣ್ ಜೇಟ್ಲಿ ಮೈದಾನ ಆತಿಥ್ಯವನ್ನು ವಹಿಸಿದೆ. ಈ ಪಂದ್ಯಕ್ಕೂ ಮುನ್ನ ಹರಿಣಗಳ ಪಡೆ ಸೆಪ್ಟೆಂಬರ್ 29 ಹಾಗೂ ಅಕ್ಟೋಬರ್ 02ರಂದ ಕ್ರಮವಾಗಿ ಆಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ಎದುರು ತಲಾ ಒಂದೊಂದು ಅಭ್ಯಾಸ ಪಂದ್ಯವನ್ನಾಡಲಿದೆ.

ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡ ಹೀಗಿದೆ ನೋಡಿ:

ತೆಂಬಾ ಬವುಮಾ(ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಹೆನ್ರಿಚ್ ಕ್ಲಾಸೇನ್, ಗೆರಾರ್ಲ್ಡ್ ಕೋಝಿ, ಸಿಸಾಂದ ಮಗಲಾ, ಕೇಶವ್ ಮಹರಾಜ್, ಏಯ್ಡನ್ ಮಾರ್ಕ್‌ರಮ್, ಡೇವಿಡ್ ಮಿಲ್ಲರ್, ಲುಂಗಿ ಎಂಗಿಡಿ, ಏನ್ರಿಚ್ ನೋಕಿಯ, ಕಗಿಸೋ ರಬಾಡ, ತಬ್ರೀಜ್ ಸಂಶಿ, ರಾಸ್ಸಿ ವ್ಯಾನ್ ಡರ್ ಡುಸೇನ್.

Follow Us:
Download App:
  • android
  • ios