ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಹರಿಣಗಳ ಪಡೆ ಮೊದಲ ದಿನವೇ ಪಾಕ್‌ ವಿರುದ್ದ ಸವಾರಿ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಕರಾಚಿ(ಜ.27): ಬರೋಬ್ಬರಿ 14 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸಕ್ಕೆ ತೆರಳಿರುವ ದಕ್ಷಿಣ ಆಫ್ರಿಕಾ, ಮೊದಲ ಟೆಸ್ಟ್‌ನಲ್ಲಿ ಮೊದಲ ದಿನವೇ ಮೇಲುಗೈ ಸಾಧಿಸಿದೆ. 

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 220 ರನ್‌ಗಳಿಗೆ ಆಲೌಟ್‌ ಆಯಿತು. ದಕ್ಷಿಣ ಆಫ್ರಿಕಾ ಪರ ಆರಂಭಿಕ ಬ್ಯಾಟ್ಸ್‌ಮನ್‌ ಡೀನ್‌ ಏಲ್ಗರ್ ಅರ್ಧಶತಕ ಬಾರಿಸಿದ್ದು ಬಿಟ್ಟರೆ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳನ್ನು ನೆಲಕಚ್ಚಿ ಆಡಲು ಪಾಕಿಸ್ತಾನದ ಬೌಲರ್‌ಗಳು ಅವಕಾಶ ನೀಡಲಿಲ್ಲ. ಆಲ್ರೌಂಡರ್‌ಗಳಾದ ಜಾರ್ಜ್‌ ಲಿಂಡೆ(35) ಹಾಗೂ ವೇಗಿ ಕಗಿಸೋ ರಬಾಡ(21) ಕೆಲಕಾಲ ಪಾಕ್‌ ಬೌಲರ್‌ ಎದುರು ಪ್ರತಿರೋಧ ತೋರುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆ ಹಾಕಲು ನೆರವಾದರು.

Scroll to load tweet…

ಟೀಂ ಇಂಡಿಯಾಗೆ ಶುರುವಾಗಿದೆ ಇಂಗ್ಲೆಂಡ್ ಸ್ಪಿನ್ನರ್ಸ್‌ ಟೆನ್ಷನ್‌..!

ಪಾಕಿಸ್ತಾನ ಪರ ಯಾಸಿರ್ ಶಾ 3 ವಿಕೆಟ್ ಪಡೆದರೆ, ಶಾಹೀನ್ ಅಫ್ರಿದಿ, ನೌಮನ್ ಅಲಿ ತಲಾ ಎರಡು ಹಾಗೂ ಹಸನ್‌ ಅಲಿ ಒಂದು ವಿಕೆಟ್ ಪಡೆದರು. 

ಮೊದಲ ಇನ್ನಿಂಗ್ಸ್‌ ಆರಂಭಿಸಿದ ಪಾಕಿಸ್ತಾನ ತಂಡಕ್ಕೆ ಕಗಿಸೋ ರಬಾಡ ಆರಂಭದಲ್ಲೇ 2 ವಿಕೆಟ್ ಪಡೆದು ಶಾಕ್ ನೀಡಿದರು. ಅಂತಿಮವಾಗಿ ಪಾಕಿಸ್ತಾನ ಮೊದಲ ದಿನದಂತ್ಯಕ್ಕೆ 4 ವಿಕೆಟ್‌ ನಷ್ಟಕ್ಕೆ 33 ರನ್‌ ಗಳಿಸಿತು. ಅಜರ್‌ ಅಲಿ(5), ಪವಾದ್‌ ಆಲಂ(5) ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಪಾಕಿಸ್ತಾನ ಇನ್ನೂ 187 ರನ್‌ಗಳ ಹಿನ್ನಡೆಯಲ್ಲಿದ್ದು, ದಕ್ಷಿಣ ಆಫ್ರಿಕಾಕ್ಕೆ ಇನ್ನಿಂಗ್ಸ್‌ ಮುನ್ನಡೆ ಬಿಟ್ಟುಕೊಡುವ ಭೀತಿಯಲ್ಲಿದೆ.

ಸ್ಕೋರ್‌: 

ದಕ್ಷಿಣ ಆಫ್ರಿಕಾ 220 
ಪಾಕಿಸ್ತಾನ 33/4

(* ಮೊದಲ ದಿನದಾಟದಂತ್ಯಕ್ಕೆ)