* ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಡೇಲ್‌ ಸ್ಟೇನ್‌* ದಶಕಗಳ ಕಾಲ ಕ್ರಿಕೆಟ್ ಜಗತ್ತು ಆಳಿದ್ದ ಆಫ್ರಿಕಾ ವೇಗಿ * ಡೇಲ್ ಸ್ಟೇನ್‌ 2019ರಲ್ಲೇ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು

ಜೊಹಾನ್ಸ್‌ಬರ್ಗ್‌(ಆ.31): ತಮ್ಮ ಕರಾರುವಕ್ಕಾದ ವೇಗದ ಬೌಲಿಂಗ್ ದಾಳಿಯ ಮೂಲಕ ದಶಕಗಳ ಕಾಲ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದ ದಕ್ಷಿಣ ಆಫ್ರಿಕಾ ವೇಗಿ ಡೇಲ್‌ ಸ್ಟೇನ್‌ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಇಂದು(ಆ.31) ನಿವೃತ್ತಿ ಘೋಷಿಸಿದ್ದಾರೆ. 

ಡೇಲ್ ಸ್ಟೇನ್‌ 2019ರಲ್ಲೇ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು, ಇದೀಗ ಹರಿಣಗಳ ವೇಗಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತಂತೆ ಟ್ವೀಟ್‌ ಮಾಡಿರುವ ಸ್ಟೇನ್‌, 20 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಅಭ್ಯಾಸ, ಪಂದ್ಯಗಳು, ಪ್ರವಾಸ, ಸೋಲು-ಗೆಲುವು, ನೋವು-ನಲಿವು, ಸ್ನೇಹ-ಸಹೋದರತ್ವ, ಹೀಗೆ ಹೇಳಿಕೊಳ್ಳಲು ಸಾಕಷ್ಟು ನೆನಪುಗಳಿವೆ. ಸಾಕಷ್ಟು ಮಂದಿಗೆ ಧನ್ಯವಾದ. 

Scroll to load tweet…

ನಾನು ಅತಿಹೆಚ್ಚು ಪ್ರೀತಿಸುವ ಕ್ರೀಡೆಯಾದ ಕ್ರಿಕೆಟ್‌ಗೆ ನಾನಿಂದು ಅಧಿಕೃತವಾಗಿ ವಿದಾಯ ಘೋಷಿಸುತ್ತಿದ್ದೇನೆ. ನನ್ನ ಈ ಪಯಣದಲ್ಲಿ ಜತೆಯಾದ ನನ್ನ ಕುಟುಂಬಕ್ಕೆ, ಸಹಪಾಠಿಗಳಿಗೆ, ಪತ್ರಕರ್ತರಿಗೆ, ಅಭಿಮಾನಿಗಳಿಗೆ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಸ್ಟೇನ್‌ ಟ್ವೀಟ್‌ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ ಟೀಂ ಇಂಡಿಯಾ ಆಲ್ರೌಂಡರ್..!

ಡೇಲ್‌ ಸ್ಟೇನ್‌ ದಕ್ಷಿಣ ಆಫ್ರಿಕಾ ಪರ 93 ಟೆಸ್ಟ್‌, 125 ಏಕದಿನ ಹಾಗೂ 47 ಟಿ20 ಪಂದ್ಯಗಳನ್ನಾಡಿದ್ದು ಕ್ರಮವಾಗಿ 439, 196 ಹಾಗೂ 64 ವಿಕೆಟ್ ಕಬಳಿಸಿದ್ದಾರೆ. 

ಡೇಲ್‌ ಸ್ಟೇನ್ ದಕ್ಷಿಣ ಆಫ್ರಿಕಾ ಮಾತ್ರವಲ್ಲದೇ, ಡೆಕ್ಕನ್‌ ಚಾರ್ಜರ್ಸ್‌, ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಬ್ರಿಸ್ಬೇನ್‌ ಹೀಟ್‌, ಸನ್‌ರೈಸರ್ಸ್‌ ಹೈದರಾಬಾದ್‌, ಗುಜರಾತ್ ಲಯನ್ಸ್‌, ಜಮೈಕಾ ತಲೈವಾಸ್, ಕೇಪ್‌ಟೌನ್‌ ನೈಟ್‌ ರೈಡರ್ಸ್‌, ಕೇಪ್‌ಟೌನ್ ಬ್ಲಿಟ್ಜ್‌, ಗ್ಲಾಸ್ಗೋ ಜೈಂಟ್ಸ್‌, ಮೆಲ್ಬೊರ್ನ್‌ ಸ್ಟಾರ್ಸ್‌, ಇಸ್ಲಮಾಬಾದ್‌ ಯುನೈಟೆಡ್, ಕ್ಯಾಂಡಿ ಟಸ್ಕರ್ಸ್‌ ಮತ್ತು ಖ್ವೆಟ್ಟಾ ಗ್ಲಾಡಿಯೇಟರ್ಸ್‌ ತಂಡವನ್ನು ಪ್ರತಿನಿಧಿಸಿದ್ದಾರೆ.