ಐಸಿಸಿ ಮಹಿಳಾ ಟಿ20 ವಿಶ್ವಕಪ್ ಸೆಮೀಸ್‌ನಲ್ಲಿ ಇಂಗ್ಲೆಂಡ್ ಎದುರು ದಕ್ಷಿಣ ಆಫ್ರಿಕಾ ಜಯಭೇರಿಬಲಿಷ್ಠ ಇಂಗ್ಲೆಂಡ್ ಎದುರು 6 ರನ್ ರೋಚಕ ಜಯ ಸಾಧಿಸಿದ ಹರಿಣಗಳ ಪಡೆಪ್ರಶಸ್ತಿಗಾಗಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಫೈಟ್
ಕೇಪ್ಟೌನ್(ಫೆ.25): ಐಸಿಸಿ ಟೂರ್ನಿಯ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿ ದಕ್ಷಿಣ ಆಫ್ರಿಕಾ ತಂಡ ಫೈನಲ್ಗೆ ಲಗ್ಗೆ ಇಟ್ಟಿದೆ. ಶುಕ್ರವಾರ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 6 ರನ್ ರೋಚಕ ಗೆಲುವು ಸಾಧಿಸಿತು. 5ನೇ ಬಾರಿ ಫೈನಲ್ ಪ್ರವೇಶಿಸುವ ಚೊಚ್ಚಲ ಆವೃತ್ತಿಯ ಚಾಂಪಿಯನ್ ಇಂಗ್ಲೆಂಡ್ ಕನಸು ಭಗ್ನಗೊಂಡಿತು. ಭಾನುವಾರ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ, ಆಸ್ಪ್ರೇಲಿಯಾ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.
ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಲಾರಾ ವೊಲ್ವಾರ್ಚ್(44 ಎಸೆತಗಳಲ್ಲಿ 53) ಹಾಗೂ ತಾಜ್ಮಿನ್ ಬ್ರಿಟ್ಸ್(55 ಎಸೆತಗಳಲ್ಲಿ 68)ರ ಅರ್ಧಶತಕಗಳ ನೆರವಿನಿಂದ 20 ಓವರಲ್ಲಿ 4 ವಿಕೆಟ್ಗೆ 164 ರನ್ ಕಲೆಹಾಕಿತು. ಮಾರಿಯಾನೆ ಕಾಪ್ 13 ಎಸೆತಗಳಲ್ಲಿ 27 ರನ್ ಸಿಡಿಸಿದರು. ಇಂಗ್ಲೆಂಡ್ ಪರ ಸ್ಪಿನ್ನರ್ ಎಕ್ಲೆಸ್ಟೋನ್ 4 ಓವರ್ ಬೌಲಿಂಗ್ ಮಾಡಿ ಕೇವಲ 22 ರನ್ ನೀಡಿ 3 ವಿಕೆಟ್ ಕಬಳಿಸಿದರು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದರೂ ಕೊನೆಯಲ್ಲಿ ಎಡವಿತು. 8 ವಿಕೆಟ್ಗೆ 158 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕೊನೆ 18 ಎಸೆತಗಳಲ್ಲಿ 28 ರನ್ ಬೇಕಿದ್ದಾಗ ಅಯಬೊಂಗಾ ಖಾಕ ಒಂದೇ ಓವರಲ್ಲಿ ಕೇವಲ 3 ರನ್‌ಗೆ 3 ವಿಕೆಟ್ ಕಿತ್ತು ಪಂದ್ಯದ ಗತಿ ಬದಲಿಸಿದರು. ಕೊನೆ ಓವರಲ್ಲಿ 13 ರನ್ ಬೇಕಿದ್ದರೂ ಇಂಗ್ಲೆಂಡ್ ಕೇವಲ 6 ರನ್ ಗಳಿಸಿ ಸೋಲೊಪ್ಪಿಕೊಂಡಿತು. ನ್ಯಾಥಲಿ ಸ್ಕೀವರ್(40), ಡ್ಯಾನಿಲ್ ವ್ಯಾಟ್(34) ನಾಯಕಿ ಹೀಥರ್ ನೈಟ್(31) ಹೋರಾಟ ವ್ಯರ್ಥಗೊಂಡಿತು.
T20 Women's World Cup: ಭಾರತಕ್ಕೆ ಪದೇ ಪದೇ ನಾಕೌಟ್ ಪಂಚ್...!
ಸ್ಕೋರ್:
ದಕ್ಷಿಣ ಆಫ್ರಿಕಾ 164/4 (ಬ್ರಿಟ್ಸ್ 68, ಲಾರಾ 53, ಎಕ್ಲೆಸ್ಟೋನ್ 3-22),
ಇಂಗ್ಲೆಂಡ್ 158/8 (ಶ್ಕೀವರ್ 40, ವ್ಯಾಟ್ 34, ಖಾಕ 4-29)
ಟೆಸ್ಟ್: ಬ್ರೂಕ್, ರೂಟ್ ಶತಕ, ಇಂಗ್ಲೆಂಡ್ 315/3
ವೆಲ್ಲಿಂಗ್ಟನ್: ಹ್ಯಾರಿ ಬ್ರೂಕ್, ಜೋ ರೂಟ್ ಭರ್ಜರಿ ಶತಕದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಮೊದಲ ದಿನವೇ ಇಂಗ್ಲೆಂಡ್ ಕೇವಲ 65 ಓವರಲ್ಲಿ 3 ವಿಕೆಟ್ಗೆ 315 ರನ್ ಕಲೆಹಾಕಿದೆ. 21ಕ್ಕೆ 3 ವಿಕೆಟ್ ಕಳೆದುಕೊಂಡ ಬಳಿಕ ಇಂಗ್ಲೆಂಡ್ ಆಕ್ರಮಣಕಾರಿ ಆಟಕ್ಕೆ ಒತ್ತುಕೊಟ್ಟಿತು. ಬ್ರೂಕ್-ರೂಟ್ ಮುರಿಯದ 4ನೇ ವಿಕೆಟ್ಗೆ 294 ರನ್ ಜೊತೆಯಾಟವಾಡಿದರು. ಕೇವಲ 6ನೇ ಟೆಸ್ಟ್ ಆಡುತ್ತಿರುವ ಬ್ರೂಕ್(169 ಎಸೆತದಲ್ಲಿ 184*) 4ನೇ ಶತಕ ಪೂರ್ತಿಗೊಳಿಸಿದರು. 101 ರನ್ ಗಳಿಸಿರುವ ರೂಟ್, ಟೆಸ್ಟ್‌ನಲ್ಲಿ 29ನೇ ಶತಕ ಪೂರೈಸಿದರು.
3ನೇ ಟೆಸ್ಟ್ಗಿಲ್ಲ ಕಮಿನ್ಸ್: ಸ್ಟೀವ್ ಸ್ಮಿತ್ ಆಸೀಸ್ ನಾಯಕ
ಸಿಡ್ನಿ: ಭಾರತ ವಿರುದ್ಧದ ಮೊದಲೆರಡು ಟೆಸ್ಟ್‌ನ ಹೀನಾಯ ಸೋಲಿನ ನಡುವೆ ಆಸ್ಪ್ರೇಲಿಯಾಕ್ಕೆ ಮತ್ತೆ ಭಾರೀ ಹಿನ್ನಡೆಯಾಗಿದ್ದು, ನಾಯಕ ಪ್ಯಾಟ್ ಕಮಿನ್ಸ್ ತಮ್ಮ ತಾಯಿಗೆ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪ್ರೇಲಿಯಾಕ್ಕೆ ಮರಳಿದ್ದಾರೆ. ಹೀಗಾಗಿ ಮಾರ್ಚ್ 1ರಿಂದ ಇಂದೋರ್ನಲ್ಲಿ ಆರಂಭವಾಗಲಿರುವ 3ನೇ ಟೆಸ್ಟ್ ಪಂದ್ಯಕ್ಕೆ ಗೈರಾಗಲಿದ್ದಾರೆ.
ಅವರ ಬದಲು ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ. ಆರಂಭದಲ್ಲಿ ಕಮಿನ್ಸ್ 3ನೇ ಟೆಸ್ಟ್‌ಗೂ ಮುನ್ನ ತಂಡ ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ತಾಯಿಯ ಆರೋಗ್ಯ ಹದಗೆಟ್ಟಿದ್ದರಿಂದ ಕಮಿನ್ಸ್ ತವರಿನಲ್ಲೇ ಬಾಕಿಯಾಗಲಿದ್ದಾರೆ. 4ನೇ ಟೆಸ್ಟ್‌ನಲ್ಲಿ ಆಡುತ್ತಾರೊ ಇಲ್ಲವೋ ಎಂಬುದು ಖಚಿತವಾಗಿಲ್ಲ. ಕಮಿನ್ಸ್ ಅನುಪಸ್ಥಿತಿಯಲ್ಲಿ ಮಿಚೆಲ್ ಸ್ಟಾರ್ಕ್ ತಂಡದ ವೇಗದ ಬೌಲಿಂಗ್ ಪಡೆ ಮುನ್ನಡೆಸುವ ನಿರೀಕ್ಷೆ ಇದೆ.
