5ನೇ ಬಾರಿ ಪ್ರಶಸ್ತಿ ಗೆಲ್ಲುವ ಅವಕಾಶ ಕೈಚೆಲ್ಲಿದ ಟೀಂ ಇಂಡಿಯಾನಾಕೌಟ್‌ ಹಂತದಲ್ಲಿ ಸಾಲು ಸಾಲು ಸೋಲು ಕಂಡ ಭಾರತ ಮಹಿಳಾ ಕ್ರಿಕೆಟ್ ತಂಡಆಸ್ಟ್ರೇಲಿಯಾ ಎದುರು ಸೆಮೀಸ್‌ನಲ್ಲಿ ಮುಗ್ಗರಿಸಿದ ಹರ್ಮನ್‌ಪ್ರೀತ್ ಕೌರ್ ಪಡೆ

ನವದೆಹಲಿ(ಫೆ.25): ಭಾರತದ ಅದೃಷ್ಟ ಚೆನ್ನಾಗಿಲ್ಲವೋ ಅಥವಾ ಒತ್ತಡ ನಿರ್ವಹಣೆಯಲ್ಲಿ ತಂಡ ಎಡವುತ್ತಿದೆಯೋ ಗೊತ್ತಿಲ್ಲ. ಆದರೆ ಪದೇಪದೇ ಜಾಗತಿಕ ಮಟ್ಟದಲ್ಲಿ ತಂಡ ಪ್ರಶಸ್ತಿ ಹತ್ತಿರಕ್ಕೆ ಹೋಗಿ ಬರಿಗೈನಲ್ಲಿ ವಾಪಸಾಗುತ್ತಿದೆ. ಇತ್ತೀಚಿನ ಟಿ20 ವಿಶ್ವಕಪ್‌ ಸೆಮಿಫೈನಲ್‌ ಸೋಲು ಸೇರಿ ತಂಡ ನಾಕೌಟ್‌ ಹಂತದಲ್ಲಿ ಹೊರಬಿದ್ದಿದ್ದು ಇದು ಸತತ 5ನೇ ಬಾರಿ. 2017ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದು, ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಕ್ರಾಂತಿಕಾರಿ ಬೆಳವಣಿಗೆ ಎಂದೇ ಪರಿಗಣಿಸಲ್ಪಟ್ಟಿತ್ತು. ಆ ಫಲಿತಾಂಶವನ್ನು ಉತ್ತಮಗೊಳಿಸುವ ನಿರೀಕ್ಷೆ ಇತ್ತು. ಆದರೆ 6 ವರ್ಷಗಳ ನಂತರವೂ ತಂಡದ ಸ್ಥಿತಿ ಬದಲಾಗಿಲ್ಲ. ವಿಶ್ವಕಪ್‌ ಟ್ರೋಫಿಗಾಗಿ ಕಾಯುವಿಕೆ ತಪ್ಪಿಲ್ಲ.

2017ರ ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಸೋತ ಬಳಿಕ 2018ರ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ಮತ್ತೆ ಇಂಗ್ಲೆಂಡ್‌ಗೆ ಶರಣಾಗಿತ್ತು. ಇನ್ನು 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಕಾಂಗರೂ ಪಡೆಗೆ ಶರಣಾಗಿತ್ತು. 2022ರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧ ಸೋತಿದ್ದ ಭಾರತ, 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕದ ಪಂದ್ಯದಲ್ಲೂ ಆಸ್ಪ್ರೇಲಿಯಾ ಎದುರು ನಿರಾಸೆ ಅನುಭವಿಸಿತ್ತು. ಇದೀಗ ಈ ವರ್ಷದ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲೂ ಆಸ್ಪ್ರೇಲಿಯಾ ವಿರುದ್ಧವೇ ಸೋತಿದೆ. ಈ ಸೋಲುಗಳ ಪೈಕಿ ಬಹುತೇಕ ಪಂದ್ಯಗಳಲ್ಲಿ ಭಾರತ ಗೆಲ್ಲುವ ಹಂತದಿಂದ ಕೆಳಜಾರಿತು ಎನ್ನುವುದು ಗಮನಾರ್ಹ.

ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ ಆಯ್ಕೆಯಲ್ಲಿ ಈ ಬಾರಿಯೂ ಕೆಲವು ಎಡವಟ್ಟುಗಳಾಗಿವೆ. ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಮಹಿಳಾ ಐಪಿಎಲ್‌) ಪ್ರಾರಂಭಗೊಳ್ಳುತ್ತಿದ್ದು, ಮತ್ತಷ್ಟು ದೇಸಿ ಪ್ರತಿಭೆಗಳು ಅನಾವರಣಗೊಳ್ಳಲಿವೆ. ತಂಡದ ಪ್ರದರ್ಶನದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮಾಜಿ ನಾಯಕಿ ಡಯಾನ ಎಡುಲ್ಜಿ, ‘ಆಟಗಾರ್ತಿಯರಲ್ಲಿ ಫಿಟ್ನೆಸ್‌ ಕೊರತೆ ಎದ್ದು ಕಾಣುತ್ತಿತ್ತು. ಹಲವು ಸನ್ನಿವೇಶಗಳಲ್ಲಿ ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿ ಅನಗತ್ಯ ಒತ್ತಡಕ್ಕೆ ಸಿಲುಕಿದರು’ ಎಂದಿದ್ದಾರೆ. ‘ಮುಂದಿನ ಟಿ20 ವಿಶ್ವಕಪ್‌ಗೆ ಕೇವಲ 18 ತಿಂಗಳು ಬಾಕಿ ಇದೆ. ತಂಡ ಈಗಿನಿಂದಲೇ ಸಿದ್ಧತೆ ಆರಂಭಿಸಬೇಕಿದೆ’ ಎಂದು ಡಯಾನ ಸಲಹೆ ನೀಡಿದ್ದಾರೆ.

ಆಘಾತದಿಂದ ಹೊರಬರಲು ಎಷ್ಟು ದಿನ ಬೇಕೋ ಗೊತ್ತಿಲ್ಲ!

ಕೇಪ್‌​ಟೌ​ನ್‌: ಆಸ್ಪ್ರೇ​ಲಿಯಾ ವಿರು​ದ್ಧದ ಸೋಲಿನ ನೋವನ್ನು ತಡೆ​ದು​ಕೊ​ಳ್ಳಲು ನನ್ನಿಂದ ಸಾಧ್ಯ​ವಾ​ಗು​ತ್ತಿಲ್ಲ. ಈ ಆಘಾ​ತ​ದಿಂದ ಹೊರ​ಬ​ರಲು ಎಷ್ಟು ದಿನ​ವಾ​ಗು​ತ್ತೆ ಗೊತ್ತಿ​ಲ್ಲ ಎಂದು ಭಾರತ​ದನ ನಾಯಕಿ ಹರ್ಮ​ನ್‌​ಪ್ರೀತ್‌ ಕೌರ್‌ ಹೇಳಿ​ದ್ದಾರೆ. 

Women's T20 World cup ಜ್ವರದಲ್ಲೂ ಹೋರಾಟ, ಸೋಲಿನ ಆಘಾತದಿಂದ ಬಿಕ್ಕಿ ಬಿಕ್ಕಿ ಅತ್ತ ನಾಯಕಿ ವಿಡಿಯೋ ವೈರಲ್

ಸೆಮಿ​ಫೈ​ನಲ್‌ ಸೋಲಿನ ಬಳಿಕ ಮಾತ​ನಾ​ಡಿದ ಅವರು, ‘ನನ್ನ ಕಣ್ಣೀ​ರನ್ನು ದೇಶ ನೋಡು​ವು​ದನ್ನು ನಾನು ಇಷ್ಟ​ಪ​ಡು​ವು​ದಿಲ್ಲ. ಅದ​ಕ್ಕಾಗಿ ಸನ್‌​ಗ್ಲಾಸ್‌ ಹಾಕಿಯೇ ಮಾತ​ನಾ​ಡು​ತ್ತಿ​ದ್ದೇ​ನೆ’ ಎಂದು ಹೇಳಿ​ದರು. ‘ನಾವು ಉತ್ತ​ಮ​ವಾಗಿ ಆಡಿ​ದ್ದೇವೆ. ಆದರೆ ನನ್ನ ರನ್‌​ಔಟ್‌ ಪಂದ್ಯದ ಗತಿ ಬದ​ಲಿ​ಸಿತು. ನಾನು ಕೊನೆ​ವ​ರೆಗೆ ಕ್ರೀಸ್‌​ನ​ಲ್ಲಿ​ದ್ದರೆ ಒಂದು ಓವರ್‌ ಬಾಕಿ ಉಳಿಸಿ ಪಂದ್ಯ ಗೆಲ್ಲು​ತ್ತಿ​ದ್ದೆ​ವು’ ಎಂದು ಹರ್ಮನ್‌ ಬೇಸರದಿಂದ ನುಡಿದರು.

ಟರ್ನಿಂಗ್‌ ಪಾಯಿಂಟ್‌

2 ರನ್‌ ಅಂತರದಲ್ಲಿ ಭಾರತ ಹರ್ಮನ್‌, ರಿಚಾ ವಿಕೆಟ್‌ ಕಳೆದುಕೊಂಡಿದ್ದೇ ಭಾರತದ ಸೋಲಿಗೆ ಪ್ರಮುಖ ಕಾರಣ. ಈ ಇಬ್ಬರ ಪೈಕಿ ಒಬ್ಬರು ಕೊನೆವರೆಗೂ ಕ್ರೀಸ್‌ನಲ್ಲಿ ಇದ್ದಿದ್ದರೂ ಭಾರತ ಗೆಲ್ಲಬಹುದಿತ್ತು. ಇನ್ನು 19ನೇ ಓವರಲ್ಲಿ ಜೊನಾನ್ಸನ್‌ ಕೇವಲ 4 ರನ್‌ ನೀಡಿದ್ದು, ಆಸೀಸ್‌ ತನ್ನ ಇನ್ನಿಂಗ್‌್ಸನ ಕೊನೆ 2 ಓವರಲ್ಲಿ 30 ರನ್‌ ಚಚ್ಚಿದ್ದು ಸಹ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.