ಜೋಹಾನ್ಸ್‌ಬರ್ಗ್‌(ಜ.22): ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟ್‌ ತಂಡದ ನೂತನ ನಾಯಕರಾಗಿ ಮಂಗಳವಾರ ಕ್ವಿಂಟನ್‌ ಡಿ ಕಾಕ್‌ ನೇಮಕಗೊಂಡಿದ್ದಾರೆ. ದ.ಆಫ್ರಿಕಾ ಕ್ರಿಕೆಟ್‌ ಮಂಡಳಿ, ನಾಯಕರಾಗಿದ್ದ ಫಾಫ್‌ ಡು ಪ್ಲೆಸಿಯನ್ನು ತಂಡದಿಂದ ಕೈಬಿಟ್ಟಿದೆ. 

ಇದನ್ನೂ ಓದಿ: ಎಬಿಡಿ ಕಮ್‌ಬ್ಯಾಕ್ ವಿಚಾರ: ಕುತೂಹಲ ಹುಟ್ಟಿಸಿದ ನಾಯಕನ ಮಾತು..!

ಡುಪ್ಲೆಸಿಸ್‌ಗೆ ವಿಶ್ರಾಂತಿ ನೀಡಲಾಗಿದೆ ಎಂದು ಆಯ್ಕೆಗಾರರು ಹೇಳಿದ್ದಾರೆ, ಆದರೆ ಮುಂಬರುವ ಸರಣಿಗಳಲ್ಲೂ ಡಿ ಕಾಕ್‌ ಅವರೇ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ. ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧ ಫೆ.4ರಿಂದ ದಕ್ಷಿಣ ಆಫ್ರಿಕಾ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಡಿ ಕಾಕ್‌ ಈ ಹಿಂದೆ 2 ಏಕದಿನ ಹಾಗೂ 2 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.

ಇದನ್ನೂ ಓದಿ: ಕ್ಲೀನ್ ಬೋಲ್ಡ್ ಆಗಿ ಟ್ರೋಲ್ ಆದ ಸ್ಟುವರ್ಟ್ ಬ್ರಾಡ್!

ಏಕದಿನ ನಾಯಕ ಸ್ಥಾನ ಕಿತ್ತುಕೊಂಡ  ಕ್ರಿಕೆಟ್ ಮಂಡಳಿ ವಿರುದ್ಧ ಡುಪ್ಲೆಸಿಸ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಸೌತ್ ಆಫ್ರಿಕಾ ತಂಡಕ್ಕಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಆದರೆ ಯಾವುದೇ ಸೂಚನೆ ನೀಡಿದ ಈ ರೀತಿ ಮಾಡಿರುವುದು  ಸರಿಯಲ್ಲ ಎಂದಿದ್ದಾರೆ.