ಜೋಹಾನ್ಸ್‌ಬರ್ಗ್(ಜ.06)‌: ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ 10 ವಿಕೆಟ್‌ಗಳ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ, 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ. 

2ನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾವನ್ನು 211 ರನ್‌ಗಳಿಗೆ ಆಲೌಟ್‌ ಮಾಡಿದ ದ.ಆಫ್ರಿಕಾ, ಗೆಲುವಿಗೆ 67 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಮಾರ್ಕ್ರಮ್‌ (36) ಹಾಗೂ ಎಲ್ಗರ್‌ (31) ಅಜೇಯ ಆಟದ ನೆರವಿನಿಂದ ವಿಕೆಟ್‌ ನಷ್ಟವಿಲ್ಲದೆ ಗೆಲುವಿನ ನಗೆ ಬೀರಿತು. 

2019ರಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದ ಬಳಿಕ ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿ ಜಯಿಸಿರಲಿಲ್ಲ. 2 ವರ್ಷಗಳಲ್ಲಿ ತಂಡಕ್ಕಿದು ಮೊದಲ ಸರಣಿ ಗೆಲುವಾಗಿದೆ. ಲಂಕಾ ಎದುರಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಡೀನ್ ಎಲ್ಗಾರ್ ಕೇವಲ 2 ಬಾರಿ ಮಾತ್ರ ವಿಕೆಟ್ ಒಪ್ಪಿಸಿದ್ದು 253 ರನ್ ಬಾರಿಸುವ ಮೂಲಕ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದಾರೆ.

ಇಂಗ್ಲೆಂಡ್ ಆಲ್ರೌಂಡರ್‌ ಮೋಯಿನ್‌ ಅಲಿಗೆ ಕೊರೋನಾ..!

ಇದೀಗ ಶ್ರೀಲಂಕಾ ತಂಡವು ಇಲ್ಲಿಂದ ವಿಶೇಷ ವಿಮಾನದ ಮೂಲಕ ನೇರವಾಗಿ ಗಾಲೆಗೆ ಬಂದಿಳಿಯಲಿದ್ದು, ಅಲ್ಲಿ ಜನವರಿ 14ರಿಂದ ಇಂಗ್ಲೆಂಡ್ ವಿರುದ್ದ ಆರಂಭವಾಗಲಿರುವ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲಿದೆ. 

ಸ್ಕೋರ್‌: 

ಲಂಕಾ 157 ಹಾಗೂ 211

ದ.ಆಫ್ರಿಕಾ 302 ಹಾಗೂ 67/0