ಕೊಲಂಬೊ(ಜ.05): ಟೆಸ್ಟ್‌ ಸರಣಿ ಆಡಲು ಭಾನುವಾರ ಶ್ರೀಲಂಕಾಕ್ಕೆ ಬಂದಿಳಿದ ಇಂಗ್ಲೆಂಡ್‌ ಕ್ರಿಕೆಟ್‌ ತಂಡಕ್ಕೆ ಆಘಾತ ಎದುರಾಗಿದೆ. ಭಾನುವಾರ ನಡೆಸಿದ ಕೋವಿಡ್‌ ಪರೀಕ್ಷೆ ವೇಳೆ ಆಲ್ರೌಂಡರ್‌ ಮೋಯಿನ್‌ ಅಲಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 

ಶ್ರೀಲಂಕಾ ಸರ್ಕಾರದ ನಿಯಮದ ಪ್ರಕಾರ ಅಲಿ 10 ದಿನಗಳ ಕಾಲ ಐಸೋಲೇಷನ್‌ನಲ್ಲಿ ಇರಲಿದ್ದು, ಚಿಕಿತ್ಸೆ ಪಡೆಯಲಿದ್ದಾರೆ. ಮತ್ತೊಬ್ಬ ಆಲ್ರೌಂಡರ್‌ ಕ್ರಿಸ್‌ ವೋಕ್ಸ್‌ರನ್ನು ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿ ಎಂದು ಗುರುತಿಸಿದ್ದು, ಅವರು ಸಹ ಐಸೋಲೇಷನ್‌ಗೆ ಒಳಪಡಲಿದ್ದಾರೆ. 

ಇಂಗ್ಲೆಂಡ್ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿಗಳು ಕೂಡಾ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರ ಮೊಯೀನ್ ಅಲಿಗೆ ಕೊರೋನಾ ಸೋಂಕು ತಗುಲಿರುವ ವಿಚಾರವನ್ನು ಖಚಿತಪಡಿಸಿದೆ.

ಬುಧವಾರ ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಡುವಿನ ಎರಡು ಟೆಸ್ಟ್‌ ಪಂದ್ಯಗಳ ಸರಣಿ ಆರಂಭಕ್ಕೆ ಸರಿಯಾಗಿ 10 ದಿನಗಳು ಬಾಕಿ ಇರುವಾಗಲೇ ಮೊಯೀನ್‌ ಅಲಿಗೆ ಸೋಂಕು ವಕ್ಕರಿಸಿದೆ. ಇನ್ನು ಎರಡನೇ ಟೆಸ್ಟ್‌ ಪಂದ್ಯ ಜನವರಿ 22 ರಿಂದ 26ರವರೆಗೆ ನಡೆಯಲಿದೆ.