Asianet Suvarna News Asianet Suvarna News

'ಭಾರತ ಗೆದ್ದಿದ್ದು ಸ್ಕಿಲ್‌ನಿಂದಲ್ಲ, ಲಕ್‌ನಿಂದ': ದಕ್ಷಿಣ ಆಫ್ರಿಕಾ ಕೋಚ್..!

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯಗಳಲ್ಲಿ ನಾಲ್ಕು ಇನಿಂಗ್ಸ್‌ಗಳು ಸೇರಿ ಕೇವಲ 106.2 ಓವರ್‌ನಲ್ಲೇ ಮುಕ್ತಾಯವಾಗಿತ್ತು.

South Africa Coach Shukri Conrad Bold More Luck Than Skill Remark As India Win 2nd Test In one and half Days kvn
Author
First Published Jan 5, 2024, 6:38 PM IST

ಕೇಪ್‌ಟೌನ್(ಜ.05): ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 7 ವಿಕೆಟ್‌ ಭರ್ಜರಿ ಜಯ ಸಾಧಿಸಿತು. ಇಲ್ಲಿನ ನ್ಯೂಲ್ಯಾಂಡ್ಸ್‌ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವು ಕೇವಲ ಒಂದೂವರೆ ದಿನದೊಳಗೆ ಮುಕ್ತಾಯವಾಯಿತು. ಈ ಮೂಲಕ ಟೆಸ್ಟ್ ಇತಿಹಾಸದಲ್ಲೇ ಅತಿ ಕಡಿಮೆ ಎಸೆತ ಕಂಡ ಟೆಸ್ಟ್ ಎನ್ನುವ ಕುಖ್ಯಾತಿಗೆ ಈ ಪಂದ್ಯ ಸಾಕ್ಷಿಯಾಯಿತು. ಈ ಸೋಲನ್ನು ಅರಗಿಸಿಕೊಳ್ಳದ ದಕ್ಷಿಣ ಆಫ್ರಿಕಾ ತಂಡದ ಹೆಡ್‌ ಕೋಚ್ ಸುಕ್ರಿ ಕಾನಾರ್ಡ್‌, ಭಾರತ ಗೆದ್ದಿದ್ದು ಸ್ಕಿಲ್‌ನಿಂದಲ್ಲ ಬದಲಾಗಿ ಲಕ್‌ನಿಂದ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯಗಳಲ್ಲಿ ನಾಲ್ಕು ಇನಿಂಗ್ಸ್‌ಗಳು ಸೇರಿ ಕೇವಲ 106.2 ಓವರ್‌ನಲ್ಲೇ ಮುಕ್ತಾಯವಾಗಿತ್ತು. ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ದಕ್ಷಿಣ ಆಫ್ರಿಕಾ ಹೆಡ್‌ ಕೋಚ್, "ನನ್ನ ಜನರು ಏನನ್ನುತ್ತಾರೋ ಗೊತ್ತಿಲ್ಲ. ನೀವು ಒಮ್ಮೆ ಸ್ಕೋರನ್ನೇ ನೋಡಿ. ಒಂದೂವರೆ ದಿನದ ಟೆಸ್ಟ್ ಮ್ಯಾಚ್!. ಅವರು ಹೇಗೆ ರನ್ ಗುರಿ ಬೆನ್ನತ್ತಿದರು ಎಂದು. ಕೌಶಲ್ಯಕ್ಕಿಂತ ಅದೃಷ್ಟ ಗೆದ್ದಿದ್ದು ನೋಡಿ ಬೇಸರ ಎನಿಸುತ್ತಿದೆ. ಟೆಸ್ಟ್ ಕ್ರಿಕೆಟ್‌ನ ಎಲ್ಲಾ ನೈತಿಕ ಮೌಲ್ಯಗಳು ಇದೀಗ ಬೀದಿಪಾಲಾಗಿವೆ ಎಂದು ಹೇಳಿದ್ದಾರೆ. 

ಪಿಚ್ ರೇಟಿಂಗ್‌: ಐಸಿಸಿ, ಕ್ರೀಡಾ ತಜ್ಞರ ದ್ವಿಮುಖ ನೀತಿಗೆ ರೋಹಿತ್‌ ಶರ್ಮಾ ಕೆಂಡಾಮಂಡಲ

ಅತಿಕಡಿಮೆ ಎಸೆತದ ಟೆಸ್ಟ್‌ ಪಂದ್ಯ: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಕೇಪ್‌ಟೌನ್ ಟೆಸ್ಟ್ ಪಂದ್ಯವು ಅತಿಕಡಿಮೆ ಎಸೆತ ಕಂಡ ಟೆಸ್ಟ್ ಎನಿಸಿಕೊಂಡಿತು. ಈ ಪಂದ್ಯದಲ್ಲಿ ಉಭಯ ತಂಡಗಳು ಕೇವಲ 642 ಎಸೆತಗಳನ್ನು ಹಾಕಿದರು. ಇದಕ್ಕೂ ಮೊದಲು 1932ರಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮೆಲ್ಬರ್ನ್‌ನಲ್ಲಿ ನಡೆದ ಪಂದ್ಯವು 656 ಎಸೆತಗಳಲ್ಲಿ ಕೊನೆಗೊಂಡಿತ್ತು.

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟೆಸ್ಟ್‌ ಪಂದ್ಯವು ಕೇವಲ ಒಂದೂವರೆ ದಿನಕ್ಕೆ ಮುಕ್ತಾಯವಾಗಿತ್ತು. ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿ ಕೇವಲ 55 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿದ್ದ ಭಾರತ ಕೂಡಾ 153 ರನ್‌ಗಳಿಗೆ ಆಲೌಟ್ ಅಗಿತ್ತು. ಮೊದಲ ದಿನದಾಟದಲ್ಲೇ ಬರೋಬ್ಬರಿ 23 ವಿಕೆಟ್‌ಗಳು ಪತನವಾಗಿದ್ದವು.

ಇತಿಹಾಸ ನಿರ್ಮಿಸೋ ಗೋಲ್ಡನ್ ಚಾನ್ಸ್ ಮಿಸ್..! ಹರಿಣಗಳ ನಾಡಲ್ಲಿ ಟೆಸ್ಟ್ ಸರಣಿ ಗೆಲ್ಲೋದ್ಯಾವಾಗ..?

ಇನ್ನು ಎರಡನೇ ದಿನದಾಟದಲ್ಲಿ ಏಯ್ಡನ್ ಮಾರ್ಕ್‌ರಮ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಹರಿಣಗಳ ಪಡೆ 176 ರನ್ ಕಲೆಹಾಕಿತು. ಈ ಮೂಲಕ ಭಾರತಕ್ಕೆ ಗೆಲ್ಲಲು 79 ರನ್‌ಗಳ ಸಾಧಾರಣ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಭಾರತ ಕೇವಲ 12 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿತು. ಇದಷ್ಟೇ ಅಲ್ಲದೇ ಕೇಪ್‌ಟೌನ್‌ನಲ್ಲಿ ಟೆಸ್ಟ್ ಪಂದ್ಯವನ್ನು ಜಯಿಸಿದ ಏಷ್ಯಾದ ಮೊದಲ ಕ್ರಿಕೆಟ್ ತಂಡ ಎನ್ನುವ ಹಿರಿಮೆಗೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಪಾತ್ರವಾಗಿದೆ.

Follow Us:
Download App:
  • android
  • ios