ಕೋಲ್ಕತಾ(ಜ.29): ಎರಡನೆ ಬಾರಿಗೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆ ದಾಖಲಾಗಿದ್ದ ಸೌರವ್ ಗಂಗೂಲಿ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಆ್ಯಂಜಿಯೋಪ್ಲಾಸ್ಟಿ ಸರ್ಜರಿ ಮಾಡಾಲಾಗಿದ್ದು, 2 ಸ್ಟಂಟ್ ಅಳವಡಿಸಲಾಗಿದೆ. ಇದೀಗ ಚೇತರಿಸಿಕೊಂಡಿರುವ ಸೌರವ್ ಗಂಗೂಲಿಯನ್ನು ಪ್ರೈವೇಟ್ ರೂಂಗೆ ಶಿಫ್ಟ್ ಮಾಡಲಾಗಿದೆ.

ಸೌರವ್‌ ಗಂಗೂಲಿಗೆ ಯಶಸ್ವಿ ಶಸ್ತ್ರಚಿಕಿತ್ಸೆ, ಮತ್ತೆರಡು ಸ್ಟೆಂಟ್‌ ಅಳವಡಿಕೆ

ಎರಡನೇ ಬಾರಿಗೆ ಎದೆನೋವು ಕಾಣಿಸಿಕೊಂಡ ಕಾರಣ ಗಂಗೂಲಿಯನ್ನು ಅಪೋಲೋ ಆಸ್ಪತ್ರೆಗೆ ದಾಖಲಾಗಿತ್ತು. ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆದ ಗಂಗೂಲಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. 

ಗಂಗೂಲಿ ಹೃದಯದಲ್ಲಿದ್ದ ಬ್ಲಾಕೇಜ್‌ಗಳನ್ನು ತೆಗೆಯಲಾಗಿದೆ. ಬುಧವಾರ(ಜ.27) ಎದೆನೋವು ಕಾಣಿಸಿಕೊಂಡ ಗಂಗೂಲಿಯನ್ನು ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 3ರಂದು ಮೊದಲ ಬಾರಿಗೆ ಎದೆನೋವು ಕಾಣಿಸಿಕೊಂಡ ಗಂಗೂಲಿಯನ್ನು ವುಡ್‌ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿದ್ದರು.